ಬೆಂಗಳೂರು: 'ಅಲ್-ಖೈದಾ ಇನ್ ಇಂಡಿಯನ್ ಸಬ್ ಕಾಂಟಿನೆಂಟ್' ಸಂಘಟನೆಯ ಇಬ್ಬರು ಸದಸ್ಯರಿಗೆ ಏಳು ವರ್ಷಗಳ ಜೈಲು ಸಜೆ ವಿಧಿಸಿ ಇಂದು ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಪಶ್ಚಿಮ ಬಂಗಾಳ ಮೂಲದ ಅಖ್ತರ್ ಹುಸೈನ್ ಲಸ್ಕರ್ ಹಾಗೂ ಅಬ್ದುಲ್ ಅಲೀಂ ಮೊಂಡಲ್ ಶಿಕ್ಷೆಗೊಳಗಾದವರು. ಇಬ್ಬರಿಗೂ ಕ್ರಮವಾಗಿ 41,000 ರೂ ಹಾಗೂ 51,000 ರೂ ದಂಡ ಹಾಕಲಾಗಿದೆ.
ವಿದೇಶದಲ್ಲಿದ್ದ ಅಲ್ ಖೈದಾ ಸಂಘಟನೆಗಳೊಂದಿಗೆ ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ವೇದಿಕೆಗಳ ಮೂಲಕ ಆನ್‌ಲೈನ್ ಸಂಪರ್ಕದಲ್ಲಿದ್ದ ಇವರು ಭಾರತದ ವಿರುದ್ಧ ವಿಧ್ವಂಸಕ ಕೃತ್ಯಗಳನ್ನು ಎಸಗಲು ಯುವಕರ ನೇಮಕ ಹಾಗೂ ತರಬೇತಿಗಾಗಿ ಅಫ್ಘಾನಿಸ್ತಾನಕ್ಕೆ ಕಳುಹಿಸುವ ಜವಾಬ್ದಾರಿ ನಿಭಾಯಿಸುತ್ತಿದ್ದರು. ಇಬ್ಬರ ವಿರುದ್ಧ ಕಳೆದ ವರ್ಷದ ಆಗಸ್ಟ್‌ನಲ್ಲಿ ಬೆಂಗಳೂರಿನ ತಿಲಕ್ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಬಳಿಕ ಪ್ರಕರಣದ ತನಿಖೆಯನ್ನು ಎನ್ಐಎ ಮುಂದುವರೆಸಿತ್ತು.