ಕರ್ನಾಟಕ

karnataka

ETV Bharat / state

‘ಗಿವ್ ಮಿ ಲೇಸ್ ಒನ್ ಗ್ರಾಮ್’, ಡ್ರಗ್​ ಪೆಡ್ಲರ್ ಲೂಮಾಗೆ ರವಿಶಂಕರ್ ಮೆಸೇಜ್​​​!

ಡ್ರಗ್​ ಲಿಂಕ್​ ಕೇಸ್​​​ಗೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಸದ್ಯ ಆರೋಪಿಗಳ ಮೊಬೈಲ್​ ಸಂಭಾಷಣೆಯೇ ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿದೆ. ಸದ್ಯ ಆರೋಪಿಗಳಾದ ರವಿಶಂಕರ್ ಹಾಗೂ ಲೂಮಾ ಪೆಪ್ಪರ್​​​ ಮೊಬೈಲ್​ ಸಂದೇಶಗಳ ಕುರಿತು ತನಿಖೆ ಚುರುಕಾಗಿದೆ.

two-accusers-mobile-retrieves-by-ccb-police-in-link-with-drug-case
‘ಗೀವ್ ಮಿ ಲೇಸ್ ಒನ್ ಗ್ರಾಮ್’..ಪೆಡ್ಲರ್ ಲೂಮಾಗೆ ರವಿಶಂಕರ್ ಮೆಸೇಜ್​​​...!

By

Published : Sep 10, 2020, 5:05 PM IST

ಬೆಂಗಳೂರು:ಸ್ಯಾಂಡಲ್​​ವುಡ್ ಡ್ರಗ್ ಲಿಂಕ್ ಆರೋಪ ಪ್ರಕರಣದಲ್ಲಿ ಸದ್ಯ ಸಿಸಿಬಿ ಪೊಲೀಸರು ನಿಖರ ಸಾಕ್ಷ್ಯಗಳನ್ನು ಕಲೆಹಾಕ್ತಿದ್ದಾರೆ. ಸಿಸಿಬಿ ಪೋಲಿಸರು ರಾಗಿಣಿ ಅಪ್ತ ರವಿಶಂಕರ್ ಹಾಗೂ ಲೂಮಾ ಪೆಪ್ಪರ್ ಮೊಬೈಲ್‌ ಅನ್ನು ರಿಟ್ರೀವ್​ ಮಾಡಿದ್ದು, ಸದ್ಯ ಮಹತ್ವದ ಸಾಕ್ಷಿಯನ್ನು ಕಲೆಹಾಕಿದ್ದಾರೆ.

2019ರ ಜೂನ್ 16ರಂದು ಡ್ರಗ್ ಪೆಡ್ಲರ್‌ ಪೆಪ್ಪರ್‌ಗೆ ರಾಗಿಣಿ ಆಪ್ತ ರವಿಶಂಕರ್ ಮೆಸೇಜ್ ಕಳುಹಿಸಿ ‘ಗೆಟ್ ಎ ವೆರಿ ಗುಡ್ ಸ್ಟಫ್’ ಎಂದಿದ್ದ. ಹಾಗೆ 2ನೇ ಮೆಸೇಜ್ ಏಪ್ರಿಲ್ 12 ,2020 ರಂದು ‘ಗಿವ್ ಮಿ ಲೇಸ್ ಒನ್ ಗ್ರಾಮ್’ ಎಂದು ಮೆಸೇಜ್ ಹಾಕಿದ್ದ. ಹಾಗೆ ಏಪ್ರಿಲ್ 13ರಂದು ರಿಪ್ಲೇ ಮಾಡಿದ್ದ ಪೆಪ್ಪರ್ ‘ನೋ‌ ಇಸ್ ಬಿ ಕಾಸ್ ಇಟ್ ಇಸ್ ಇನ್ ಎ ರಾಕ್ ಫಾರಂ ದಟ್ ಇಸ್ ವೇ ಕಂಪ್ಲೀಟ್ ಒನ್ ಜಿ’ ಎಂದು ರಿಪ್ಲೇ ಮಾಡಿದ್ದ.

ಇನ್ನೂ ಲೂಮ್ ಪೆಪ್ಪರ್​ ತನಿಖೆ ವೇಳೆ ನನಗೆ ಇಂಗ್ಲಿಷ್​​​​ ಬರುವುದಿಲ್ಲ ಎಂದಿದ್ದಾನೆ. ಸದ್ಯ ಈ ಎಲ್ಲಾ ಮೆಸೇಜ್​​​ಗಳ ಅರ್ಥವೇನು ಎನ್ನುವುದರ ಬಗ್ಗೆ ಇಬ್ವರು ಆರೋಪಿಗಳ ವಿಚಾರಣೆಯನ್ನು ಸಿಸಿಬಿ ಅಧಿಕಾರಿಗಳು ನಡೆಸುತ್ತಿದ್ದಾರೆ.

ಸದ್ಯ ರವಿಶಂಕರ್ ಹಾಗೂ ಲೂಮ್ ಪೆಪ್ಪರ್ ನಟಿ ರಾಗಿಣಿಯ ಆಪ್ತರಾಗಿದ್ದಾರೆ. ಇವರಿಬ್ಬರ್ ಡ್ರಗ್ ಪೆಡ್ಲರ್ ಅನ್ನೋದಕ್ಕೆ ಪೂರಕ ಸಾಕ್ಷ್ಯಗಳು ಪೊಲೀಸರಿಗೆ ಲಭ್ಯವಾಗಿದೆ. ಇದರ ಆಧಾರದ ಮೇರೆಗೆ ತನಿಖೆ ಚುರುಕುಗೊಂಡಿದೆ.

ABOUT THE AUTHOR

...view details