ಬೆಂಗಳೂರು: ಚಿಕಿತ್ಸೆಗೆ ಎಂದು ದಾಖಲಾಗಿದ್ದ ಯುವಕ ದುಶ್ಚಟ ನಿವಾರಣಾ ಕೇಂದ್ರದಲ್ಲೇ ಅನುಮಾಸ್ಪಾದವಾಗಿ ಸಾವನ್ನಪ್ಪಿರುವ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಯಲಹಂಕ ಉಪನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರವಿ ಹಾಗೂ ರೋಹಿತ್ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೀಫ್ ಖಾನ್ ಸಾವಿಗೀಡಾದ ದುದೈರ್ವಿ.
ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಂಬಾಭವಾನಿ ದೇವಸ್ಥಾನ ರಸ್ತೆಯ ವೀರಸಾಗರದ ಶ್ರೀಸಾಯಿ ದೀನಬಂಧು ರಿಹ್ಯಾಬಿಲಿಟೇಶನ್ ಸೆಂಟರ್ ಸಿಬ್ಬಂದಿಯಾಗಿರುವ ರವಿ ಹಾಗೂ ರೋಹಿತ್ರನ್ನು ಕೊಲೆ ಮಾಡಿರುವ ಆರೋಪದಡಿ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಶ್ಯಾಂಪುರದ ಆರೀಫ್ ನವಾಜ್ ಶ್ರೀಸಾಯಿ ಧೀನ ಬಂದು ರಿಹ್ಯಾಬಿಲಿಟೇಶನ್ ಸೆಂಟರ್ಗೆ ವಾರದ ಹಿಂದೆ ಡ್ರಗ್ಸ್ ಸೇವನೆಯಿಂದ ಮುಕ್ತನಾಗಲು ಎಂದು ದಾಖಲಾಗಿದ್ದ. ಸ್ನಾನಕ್ಕೆ ಬಿಸಿ ನೀರು ಬೇಕೆಂದು ಪ್ರಾರಂಭವಾದ ಜಗಳ ಸಾವಿನಲ್ಲಿ ಅಂತ್ಯವಾಗಿದೆ.
ಇನ್ನು ಇದಕ್ಕೆ ಮೃತ ಆರೀಫ್ ಅವರ ಸಹೋದರ ಆಸೀಫ್ ಪ್ರತಿಕ್ರಿಯಿಸಿ, ಚಿಕಿತ್ಸೆ ನೀಡಿ ವ್ಯಸನ ಮುಕ್ತನನ್ನಾಗಿ ಮಾಡಬೇಕಿದ್ದ ಪುನರ್ವಸತಿ ಕೇಂದ್ರದದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಆರೀಫ್ನ ಕಾಲು, ಸೊಂಟ, ಬೆನ್ನಿಗೆ ಕಬ್ಬಿಣದ ರಾಡ್ ಮತ್ತು ಕೋಲಿನಿಂದ ರಕ್ತ ಹೆಪ್ಪುಗಟ್ಟುವಂತೆ ಹಲ್ಲೆ ಮಾಡಲಾಗಿದೆ. ಸಿಬ್ಬಂದಿ ನಡೆಸಿದ ಹಲ್ಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಆರೀಫ್ ಮೃತ ಪಟ್ಟಿದ್ದಾನೆ. ನಮಗಾದ ಅನ್ಯಾಯ ಇನ್ಯಾರಿಗೂ ಆಗಬಾರದು.
ರಿಹ್ಯಾಬಿಲಿಟೇಶನ್ ಸೆಂಟರ್ನವರಿಗೆ ತಕ್ಕ ಶಿಕ್ಷೆಯಾಗಬೇಕು. ಮದುವೆಯಾಗಿ ಒಂದು ಮಗು ಇದ್ದ ಆರೀಫ್ನ ಹೆಂಡತಿ, ಮಕ್ಕಳು ಅನಾಥರಾಗಿದ್ದಾರೆ. ಶ್ರೀಸಾಯಿ ರಿಹ್ಯಾಬಿಲಿಟೇಶನ್ ಸೆಂಟರ್ನಲ್ಲಿ 50ಕ್ಕು ಹೆಚ್ಚು ಜನರಿದ್ದಾರೆ. ರಿಹ್ಯಾಬಿಲಿಟೇಶನ್ ಚಿಕಿತ್ಸೆ ಸೆಂಟರ್ನಲ್ಲಿ ಹಲ್ಲೆ, ವಂಚನೆ ಪ್ರಕರಣ ಜಾಸ್ತಿಯಾಗ್ತಿವೆ. ಇದು ಆರೀಫ್ ಕೊಲೆ ಮೂಲಕ ವಿಷಯ ಹೊರ ಬಂದಿದ್ದು ಪ್ರಕರಣ ದಾಖಲಿಸಿಕೊಂಡ ಯಲಹಂಕ ಉಪನಗರ ಪೊಲೀಸರು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಸೀಫ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಮಾರಕಾಸ್ತ್ರಗಳಿಂದ ಯುವತಿ ಬರ್ಬರ ಹತ್ಯೆ: ನಾಪತ್ತೆಯಾಗಿದ್ದ ಆರೋಪಿ ಶವವಾಗಿ ಪತ್ತೆ