ಕರ್ನಾಟಕ

karnataka

ETV Bharat / state

ಗಾಂಜಾದ ಮತ್ತಿನಲ್ಲಿ ಬಿಯರ್ ಬಾಟಲ್​​ನಿಂದ ಹಲ್ಲೆ... ಆರೋಪಿಗಳು ಅರೆಸ್ಟ್​​ - ಬೆಂಗಳುರಿನಲ್ಲಿ ದರೋಡೆ ಆರೋಪಿಗಳ ಬಂಧನ

ಹಣಕ್ಕಾಗಿ ಬಿಯರ್ ಬಾಟಲ್​​ನಿಂದ ಹಲ್ಲೆ ಮಾಡಿದ್ದ ಆರೋಪಿಗಳನ್ನು ಬೆಂಗಳೂರು ಕೇಂದ್ರ ವಿಭಾಗದ ವಿವೇಕನಗರ ಪೊಲೀಸರು ಬಂಧಿಸಿದ್ದಾರೆ.

two accused arrested in bengaluru
ಆರೋಪಿಗಳು ಅರೆಸ್ಟ್​​

By

Published : Mar 9, 2020, 7:32 PM IST

Updated : Mar 9, 2020, 8:58 PM IST

ಬೆಂಗಳೂರು: ಗಾಂಜಾ ಮತ್ತಿನಲ್ಲಿ ಹಣಕ್ಕಾಗಿ ಬಿಯರ್ ಬಾಟಲ್​​ನಿಂದ ಹಲ್ಲೆ ಮಾಡಿದ ಬಾಲಾರೋಪಿ ಮತ್ತು ಇಬ್ಬರು ಆರೋಪಿಗಳನ್ನು ಬಂಧನ ಮಾಡುವಲ್ಲಿ ಕೇಂದ್ರ ವಿಭಾಗದ ವಿವೇಕನಗರ ಪೊಲೀಸರು ಯಶಸ್ವಿಯಾಗಿದ್ದಾರೆ‌.

ಆರೋಪಿಗಳು ಅರೆಸ್ಟ್​​

ಎಲ್. ಆರ್. ನಗರ ನಿವಾಸಿಗಳಾದ ಕಮಲ್(22), ಚಂದ್ರಬಾಬು (22) ಹಾಗೂ ಒಬ್ಬ ಅಪ್ರಾಪ್ತ ಆರೋಪಿ ಬಂಧಿತರು. ಆರೋಪಿಗಳು ಕುಡಿದು ಗಾಂಜಾ ಮತ್ತಿನಲ್ಲಿ ವಿವೇಕನಗರದ ಹೋಟೆಲ್ ಒಂದರಲ್ಲಿ ಕುಕ್ ಆಗಿ ಕೆಲಸ ಮಾಡುತ್ತಿದ್ದ ಸುಶಾಂತ್​ ಎಂಬ ಹುಡುಗ ಸೈಕಲ್​​ನಲ್ಲಿ ಹೋಗುತ್ತಿದ್ದಾಗ ಅವನ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದರು.

ಆರೋಪಿಗಳು ಅರೆಸ್ಟ್​​
ಆರೋಪಿಗಳು ಅರೆಸ್ಟ್​​

ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸ್ಥಳೀಯರು ಸುಶಾಂತ್ ನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸುಶಾಂತ್ ನಂತರ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು‌‌ ಮಾಡಿದ್ದ. ಪೊಲೀಸರು ಸದ್ಯ ಬಾಲ ಆರೋಪಿ ಸೇರಿ ಇಬ್ಬರು ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಕುರಿತು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್​​​ ಮಾತಾಡಿ, ಮೂರು ಜನ ಆರೋಪಿಗಳನ್ನ ದಸ್ತಗಿರಿ ಮಾಡಲಾಗಿದೆ. ಆರೋಪಿಗಳು ಹಣಕ್ಕಾಗಿ ಈ ರೀತಿ ಮಾಡಿರುವ ವಿಚಾರ ತಿಳಿದು ಬಂದಿದೆ. ಸದ್ಯ ಆರೋಪಿಗಳ ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ರು.

Last Updated : Mar 9, 2020, 8:58 PM IST

ABOUT THE AUTHOR

...view details