ಕರ್ನಾಟಕ

karnataka

ETV Bharat / state

ಸೋಷಿಯಲ್​​ ಮೀಡಿಯಾದಲ್ಲಿ ಲೈವ್ ಮಾಡಿ ಪ್ರಚೋದನೆ: ಇಬ್ಬರ ಬಂಧನ

ಡಿ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್​​ಬುಕ್, ಇನ್​​​ಸ್ಟಾಗ್ರಾಂನಲ್ಲಿ ಲೈವ್ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

two accused arrest
ಆರೋಪಿ ಬಂಧನ

By

Published : Aug 18, 2020, 2:23 PM IST

ಬೆಂಗಳೂರು:ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್​​ಬುಕ್, ಇನ್​​​ಸ್ಟಾಗ್ರಾಂನಲ್ಲಿ ಲೈವ್ ಮಾಡಿ ಪ್ರಚೋಧಿಸಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜಾಕೀರ್ ಹಾಗೂ ಸೈಯದ್ ಸೋಹಿಲ್ ಬಂಧಿತರು.

ಆರೋಪಿ ಬಂಧನ

ಘಟನೆಯ ದಿನ ಈ ಇಬ್ಬರೂ ಆರೋಪಿಗಳು ಇನ್​​​ಸ್ಟಾಗ್ರಾಂನಲ್ಲಿ ಲೈವ್​ ಮಾಡಿ, ‌ ಎಲ್ಲರೂ ಡಿ.ಜೆ.ಹಳ್ಳಿ ಠಾಣೆಯ ಬಳಿ ಬರುವಂತೆ ಕರೆ ನೀಡಿದ್ದರು. ಠಾಣೆಯ ಬಳಿ ಬರಬೇಡಿ ಎಂದು ಪೊಲೀಸರು ಹೇಳಿದ್ದರೂ ಆರೋಪಿಗಳು ತೋರಿಸಿದ್ದ ಲೈವ್ ವಿಡಿಯೋ ಆಧರಿಸಿ ಜನ ಜಮಾವಣೆ ಆಗಿದ್ದರು.

ಈ ಮಧ್ಯೆ, ಲೈವ್ ಮಾಡಿದ್ದ ಮತ್ತೊಬ್ಬ ಆರೋಪಿ ಮುದಾಸೀರ್ ಅಹಮದ್ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.

ABOUT THE AUTHOR

...view details