ಬೆಂಗಳೂರು: ಪೊಲೀಸರೇ ಮದ್ಯ ಸೇವಿಸಿದ್ದಾರೆಂದು ರಾದ್ಧಾಂತ ಮಾಡಿ ಸ್ವತಃ ಮದ್ಯ ಸೇವಿಸಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧನಕ್ಕೆ ಒಳಪಡಿಸಿದ್ದಾರೆ.
ನೈಟ್ ಕರ್ಫ್ಯೂ ವೇಳೆ ಡ್ರಿಂಕ್ ಆ್ಯಂಡ್ ಡ್ರೈವ್ ಟೆಸ್ಟ್ ಮಾಡಲು ಪೊಲೀಸರು ಮುಂದಾಗಿದ್ದರು. ಆಗ ಕುಡುಕರು ಟ್ರಾಫಿಕ್ ಪೊಲೀಸರಿಗೆ ಟೆಸ್ಟಿಂಗ್ ಮಾಡಲು ಮುಂದಾದ ಘಟನೆ ನಗರದ ಟ್ರಿನಿಟಿ ಸರ್ಕಲ್‌ನಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಪೊಲೀಸರೇ ಮದ್ಯ ಸೇವಿಸಿದ್ದಾರೆಂದು ಮಧ್ಯರಾತ್ರಿ ರಾದ್ಧಾಂತ ಮಾಡಿದ ಆರೋಪಿಗಳ ಬಂಧನ ಮದ್ಯ ಸೇವಿಸಿ ರಾದ್ಧಾಂತ ಮಾಡುತ್ತಿದ್ದ ಇಬ್ಬರು ಯುವಕರು ಪೊಲೀಸರೇ ಮದ್ಯ ಸೇವನೆ ಮಾಡಿದ್ದಾರೆಂದು ಗೋಳಾಡಿದ್ದರು. ಮತ್ತೊಬ್ಬ ವ್ಯಕ್ತಿ ಮದ್ಯ ಸೇವನೆ ಮಾಡಿ ಕಾರು ಚಾಲನೆ ಮಾಡುತ್ತಿದ್ದ. ಆತ ಕೂಡ ಪೊಲೀಸ್ ತಪಾಸಣೆ ವೇಳೆ ಸಹಕರಿಸದೆ 1 ಗಂಟೆ ರಾದ್ಧಾಂತ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತಪಾಸಣೆಯ ವೇಳೆ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಮದ್ಯ ಸೇವಿಸಿರುವುದು ಪತ್ತೆಯಾಗಿದೆ. ಕಾರು ಚಾಲಕನನ್ನು ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಓದಿ:ಅಧಿಕಾರ ವಿಕೇಂದ್ರೀಕರಣ ಆಗಬೇಕು.. ಆಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದ ಸಿಎಂ