ಕರ್ನಾಟಕ

karnataka

ETV Bharat / state

ಅಪರಿಚಿತ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್ : ಶವದ ಹಿಂದೆ 50 ಲಕ್ಷ ರೂ.ಆಸ್ಪತ್ರೆ ಖರ್ಚಿನ ಕಹಾನಿ - ಈಶಾನ್ಯ ವಿಭಾಗ ಡಿಸಿಪಿ ಸಿಕೆ ಬಾಬ

ಅಪರಿಚಿತ ಶವ ಪತ್ತೆ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸಿದ ವೇಳೆ ಹಳೇ ವೈಷಮ್ಯದ ಹಿನ್ನಲೆ ಹರೀಶ್​ ಎಂಬಾತನ್ನು ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

CK Baba
ಈಶಾನ್ಯ ವಿಭಾಗ ಡಿಸಿಪಿ ಸಿ.ಕೆ ಬಾಬ

By

Published : Nov 26, 2020, 6:25 PM IST

ಬೆಂಗಳೂರು:ಅಪರಿಚಿತ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ಶವದ ಹಿಂದೆ 50 ಲಕ್ಷ ರೂ.ಆಸ್ಪತ್ರೆ ಖರ್ಚಿನ ಕಹಾನಿ ಇತ್ತು ಅನ್ನೋದು ಬೆಳಕಿಗೆ ಬಂದಿದೆ.

ಹಳೆ ವೈಶಮ್ಯ ಹಿನ್ನಲೆ ಬೇರೊಂದು ಸ್ಥಳದಲ್ಲಿ ಹತ್ಯೆ ನಡೆಸಿ ಹರೀಶ್​ ಎಂಬಾತನನ್ನು ಟಾರ್ಪಲ್​ನಲ್ಲಿ ಸುತ್ತಿ ಬೀಸಾಡಿದ್ದರು. ಹಾಗೆ ‌ಶವದ ಬಳಿ 4-5 ಸಾವಿರ ಹಣ ಬಿಸಾಡಿ, ಇದು ರಾಬರಿಗಾಗಿ ನಡೆದ ಕೊಲೆ ಅನ್ನೋ ರೀತಿ ಬಿಂಬಿಸಿದ್ದರು.

ಈಶಾನ್ಯ ವಿಭಾಗ ಡಿಸಿಪಿ ಸಿ.ಕೆ ಬಾಬ

ಇನ್ನು ಅಪರಿಚಿತ ಶವ ಪತ್ತೆ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದಾಗ, ಹರೀಶ್​ಗೆ ಬಂದಿದ್ದ ಆ ಒಂದು ಕರೆ ಮಾಹಿತಿ ಆಧರಿಸಿ ತನಿಖೆ ಮಾಡಿದ್ದಾರೆ. ಆಗ ಕೊತ್ತನೂರು ಪೊಲೀಸರಿಗೆ ಈ ಹಿಂದೆ ಭಾರತಿ ನಗರ ಠಾಣಾ ವ್ಯಾಪ್ತಿ ಜೀವ ಅನ್ನೋನ ಮೇಲೆ ಮೃತ ಹರೀಶ್ ಹಲ್ಲೆ ನಡೆಸಿದ ವಿಚಾರ ಬಯಲಾಗಿದೆ.

ಹಾಗೆ ಆಗ ಜೀವ ಅನ್ನೋನ ಕುತ್ತಿಗೆಗೆ ಗಂಭೀರ ಗಾಯಗಳಾಗಿ ಹಾಸಿಗೆ ಹಿಡಿದಿದ್ದ. ಆತನ ಆಸ್ಪತ್ರೆ ಖರ್ಚು ಸುಮಾರು 50 ಲಕ್ಷದಷ್ಟಾಗಿತ್ತು ಜೀವ ಮೇಲೆ ಹಲ್ಲೆ ನಡೆಸಿದ ಸೇಡು ಮತ್ತು ಆಸ್ಪತ್ರೆಗೆ 50 ಲಕ್ಷ ಖರ್ಚಾಯ್ತು ಅನ್ನೋ ದ್ವೇಷಕ್ಕೆ ಹರೀಶ್ ಹತ್ಯೆಯಾಗಿರುವುದಾಗಿ ತನಿಖೆ ವೇಳೆ ತಿಳಿದು ಬಂದಿದೆ. ಸದ್ಯ ಪೊಲೀಸರು ಹೆಚ್ಚಿ ತನಿಖೆ ಮುಂದುವರೆಸಿದ್ದಾರೆ ಎಂದು ಈಶಾನ್ಯ ವಿಭಾಗ ಡಿಸಿಪಿ ಸಿ.ಕೆ ಬಾಬ ತಿಳಿಸಿದ್ದಾರೆ.

ABOUT THE AUTHOR

...view details