ಕರ್ನಾಟಕ

karnataka

ETV Bharat / state

ರೇಖಾ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್: ಮತ್ತೊಬ್ಬನ ಜೊತೆಗಿನ ಸಲುಗೆಯೇ ಹತ್ಯೆಗೆ ಕಾರಣ!? - bbmp former corporator

ಆರೋಪಿ ಪೀಟರ್​ ಜತೆಗೆ ಮಾತ್ರವಲ್ಲದೆ ಮತ್ತೊಬ್ಬನ ಜೊತೆಗೂ ಮಾಜಿ ಕಾರ್ಪೊರೇಟರ್​ ರೇಖಾ ಕದಿರೇಶ್​ ಆತ್ಮೀಯರಾಗಿದ್ದರಂತೆ. ಅವರು ವಾಸಿಸುತ್ತಿದ್ದ ಏರಿಯಾದಲ್ಲೇ ರವಿ ಎಂಬಾತನೊಂದಿಗೆ ಸಲುಗೆಯಿಂದ ಇರುತ್ತಿದ್ದಳಂತೆ. ರೇಖಾ​ ಬಳಿ ಏನೇ ಕೆಲಸ ಆಗಬೇಕೆಂದರೂ ರವಿ ಮೂಲಕವೇ ಹೋಗಬೇಕಿತ್ತು. ಇದು ಪೀಟರ್ ಕೆಂಗಣ್ಣಿಗೆ ಗುರಿಯಾಗಿತ್ತು. ರವಿಯನ್ನ ಮುಗಿಸಿದ್ರೆ ರೇಖಾ ವರ್ಚಸ್ಸಿಗೆ ಏನೂ ಧಕ್ಕೆಯಾಗಲ್ಲ. ಆದ್ರೆ ಅವಳನ್ನೇ ಮುಗಿಸಿದ್ರೆ ಹೇಗೆ ಎಂದು ರೇಖಾಳ ಹತ್ಯೆಗೆ ಸ್ಕೆಚ್ ಹಾಕಿದ್ದನಂತೆ ಪೀಟರ್​.

ರೇಖಾ - ಕದಿರೇಶ್
ರೇಖಾ - ಕದಿರೇಶ್

By

Published : Jun 29, 2021, 5:02 PM IST

ಬೆಂಗಳೂರು: ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್​ ಕೊಲೆ ಪ್ರಕರಣಕ್ಕೆ ದಿನಕ್ಕೊಂದು ರೋಚಕ ಟ್ವಿಸ್ಟ್ ಸಿಗುತ್ತಿದೆ. ಇತ್ತ, ರೇಖಾ ಹತ್ಯೆಗೆ ಸುಪಾರಿ ಕೊಡಲು ಮಾಲಾ ಸಾಲ ಮಾಡಿಕೊಂಡಿದ್ದರೆ, ಕದಿರೇಶ್​ ಮತ್ತು ರೇಖಾ ನಡುವಿನ ಅಂತರ್ಯುದ್ಧ ಕೂಡ ರಿವೀಲ್ ಆಗಿದೆ.

ರೇಖಾ - ಕದಿರೇಶ್​ ಜೊತೆಗಿದ್ದಷ್ಟು ದಿವಸ ಅನ್ಯೋನ್ಯವಾಗಿರಲಿಲ್ಲವಂತೆ. ರೇಖಾ ಹೆಸರಿಗಷ್ಟೇ ಕಾರ್ಪೊರೇಟರ್ ಆಗಿದ್ದು, ಹಣಕಾಸಿನ ವಿಚಾರವನ್ನೆಲ್ಲ ಕದಿರೇಶ್ ನೋಡಿಕೊಳ್ಳುತ್ತಿದ್ದರು. ಇದರಿಂದಾಗಿ ಇಬ್ಬರ ಮಧ್ಯೆಯೂ ವೈಮನಸ್ಸು ಮೂಡಿತ್ತು. ಈ ವಿಚಾರವಾಗಿ ಮನೆಯಲ್ಲಿ ಆಗಾಗ್ಗೆ ಜಗಳವೂ ನಡೆಯುತ್ತಿತ್ತು. ಆ ಜಗಳಕ್ಕೂ, ರೇಖಾಳ ಮರ್ಡರ್​ಗೂ ಲಿಂಕ್​ಯಿದೆಯಂತೆ.

ಮತ್ತೊಬ್ಬನ ಜೊತೆಗೂ ಸಲುಗೆ!

ಆರೋಪಿ ಪೀಟರ್​ ಜತೆಗೆ ಮಾತ್ರವಲ್ಲದೆ ಮತ್ತೊಬ್ಬನ ಜೊತೆಗೂ ರೇಖಾ ಆತ್ಮೀಯರಾಗಿದ್ದರಂತೆ. ಅವರು ವಾಸಿಸುತ್ತಿದ್ದ ಏರಿಯಾದಲ್ಲೇ ರವಿ ಎಂಬಾತನೊಂದಿಗೆ ಸಲುಗೆಯಿಂದ ಇರುತ್ತಿದ್ದಳಂತೆ. ರೇಖಾ​ ಬಳಿ ಏನೇ ಕೆಲಸ ಆಗಬೇಕೆಂದರೂ ರವಿ ಮೂಲಕವೇ ಹೋಗಬೇಕಿತ್ತು. ಇದು ಪೀಟರ್ ಕೆಂಗಣ್ಣಿಗೆ ಗುರಿಯಾಗಿತ್ತು. ರವಿಯನ್ನ ಮುಗಿಸಿದ್ರೆ ರೇಖಾ ವರ್ಚಸ್ಸಿಗೆ ಏನೂ ಧಕ್ಕೆಯಾಗಲ್ಲ. ಅವಳನ್ನೇ ಮುಗಿಸಿದ್ರೆ ಹೇಗೆ ಎಂದು ರೇಖಾಳ ಹತ್ಯೆಗೆ ಸ್ಕೆಚ್ ಹಾಕಿದ್ದನಂತೆ ಪೀಟರ್​.

ಕದಿರೇಶ್​-ರೇಖಾ ನಡುವಿನ ಮನಸ್ತಾಪವನ್ನು ಪ್ಲಸ್​ ಪಾಯಿಂಟ್ ಮಾಡಿಕೊಂಡ ಪೀಟರ್​​, ಮಾಲಾಳ ಸಹಾಯ ಪಡೆಯಲು ಆಕೆಗೆ ಬ್ರೈನ್​ ವಾಶ್ ಮಾಡಿದ್ದ. ಅಲ್ಲದೆ, ರೇಖಾಳೇ ಕದಿರೇಶ್ ಕೊಲೆ ಮಾಡಿಸಿದ್ದಳು ಎಂಬ ವದಂತಿ ಹಬ್ಬಿಸಿದ್ದ. ರೇಖಾ ಹತ್ಯೆಗೆ ಪೀಟರ್ ತಂಡ ಕಟ್ಟಿಕೊಂಡು ಸ್ಕೆಚ್ ಹಾಕಿದ್ದನಂತೆ. ಆ ತಂಡಕ್ಕೆ ಹಣ ಕೊಡಲು ಅರುಣ್ ಮತ್ತು ಮಾಲಾ ಸಾಲ ಮಾಡಿದ್ದರಂತೆ.

ಡ್ರೈವರ್ ಜೊತೆ ಮನೆ ಬಿಟ್ಟು ಹೋಗಿದ್ದಳಂತೆ ರೇಖಾ!

ರೇಖಾ- ಕದಿರೇಶ್ ನಡುವೆ ಎಲ್ಲವೂ ಸರಿಯಿರಲಿಲ್ಲ. 2016-17 ರಲ್ಲಿ ಡ್ರೈವರ್ ಕದಿರ್ ಜತೆ ರೇಖಾ ಮನೆ ಬಿಟ್ಟು ಹೋಗಿದ್ದಳು. ಈ ಘಟನೆ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ಕೂಡ ದಾಖಲಾಗಿತ್ತು. ಬಳಿಕ ಪೊಲೀಸರು ಶೋಧ ನಡೆಸಿ, ರೇಖಾಳನ್ನು ಪತ್ತೆ ಹಚ್ಚಿ ಕದಿರೇಶ್ ಜತೆಗೆ ಸಂಧಾನ ಮಾಡಿಸಿದ್ದರು ಎನ್ನಲಾಗ್ತಿದೆ.

ABOUT THE AUTHOR

...view details