ಕರ್ನಾಟಕ

karnataka

ETV Bharat / state

ಜೆಎಸ್ಎಸ್ ವಸತಿ ನಿಲಯದ 20 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು - ಜೆಎಸ್ಎಸ್ ವಸತಿ ನಿಲಯದಲ್ಲಿ ಕೊರೊನಾ ಪ್ರಕರಣ

ಬೆಂಗಳೂರಿನ ಜೆಎಸ್ಎಸ್ ಕಾಲೇಜಿನ ಬಾಲಕರ ವಸತಿ ನಿಲಯದಲ್ಲಿನ 20 ವಿದ್ಯಾರ್ಥಿಗಳಿಗೆ ಕೋವಿಡ್​ ಸೋಂಕು ತಗುಲಿದೆ.

twenty-students-tested-covid-positive-in-jss-boys-hostel
ಜೆಎಸ್ಎಸ್ ವಸತಿ ನಿಲಯದ 20 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು

By

Published : Jan 9, 2022, 10:44 AM IST

ಬೆಂಗಳೂರು:ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದ್ದು, ಕ್ಲಸ್ಟರ್​ಗಳೂ ಹೆಚ್ಚಾಗುತ್ತಿವೆ. ಜೆಎಸ್ಎಸ್ ಕಾಲೇಜಿನ ಬಾಲಕರ ವಸತಿ ನಿಲಯದಲ್ಲಿನ 20 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಜನವರಿ 8ರಂದು ಕೊರೊನಾ ಇರುವುದು ದೃಢಪಟ್ಟಿದ್ದು, ವಿದ್ಯಾರ್ಥಿಗಳನ್ನು ಜ. 15ರವರೆಗೆ ಕ್ವಾರಂಟೈನ್ ಮಾಡಲಾಗಿದೆ‌. ಸದ್ಯ ವಸತಿ ನಿಲಯದಲ್ಲಿನ ಎಲ್ಲ ವಿದ್ಯಾರ್ಥಿಗಳನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ‌. ಕೋವಿಡ್​ನಿಂದಾಗಿ ಹಾಸ್ಟೆಲ್ ಸೀಲ್​ಡೌನ್​ ಮಾಡಲಾಗಿದೆ‌.

ಬೆಂಗಳೂರಲ್ಲಿ ನಿನ್ನೆ 7,113 ಮಂದಿಗೆ ಸೋಂಕು ದೃಢಪಟ್ಟಿದ್ದು, ಈಗಾಗಲೇ ಸೋಂಕಿತರ ಸಂಖ್ಯೆ 12,90,299ಕ್ಕೆ ಏರಿದೆ. ನಿನ್ನೆ 323 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಆಗಿದ್ದರು. ನಗರದಲ್ಲಿ ಸದ್ಯ 32,157ಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ.

ಒಟ್ಟಾರೆ ರಾಜ್ಯದಲ್ಲಿ ನಿನ್ನೆ 8,906 ಮಂದಿಗೆ ಸೋಂಕು ದೃಢಪಟ್ಟಿತ್ತು, ಈ ಮೂಲಕ ಸೋಂಕಿತರ ಸಂಖ್ಯೆ 30,39,958 ಏರಿಕೆ ಆಗಿದೆ. ಈಗಾಗಲೇ ಕೋವಿಡ್​ ತಡೆ ಕ್ರಮವಾಗಿ ರಾಜ್ಯದಲ್ಲಿ ವಾರಾಂತ್ಯ ಹಾಗೂ ರಾತ್ರಿ ನಿಷೇಧಾಜ್ಞೆ ಜಾರಿಯಲ್ಲಿದೆ.

ಇದನ್ನೂ ಓದಿ:ದೇಶದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಸೋಂಕಿತರು ಪತ್ತೆ: ಒಮಿಕ್ರಾನ್​ನಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ

ABOUT THE AUTHOR

...view details