ಕರ್ನಾಟಕ

karnataka

ETV Bharat / state

'ಉತ್ತರ ಕೊಡಿ ಮೋದಿ' ರಾಜ್ಯ ಕಾಂಗ್ರೆಸ್​ನಿಂದ ಟ್ವೀಟ್ ಅಭಿಯಾನ - ರಾಜ್ಯ ಕಾಂಗ್ರೆಸ್​ನಿಂದ ಟ್ವೀಟ್ ಅಭಿಯಾನ

ಪ್ರಧಾನಿ ನರೇಂದ್ರ ಮೋದಿ ತುಮಕೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ 'ಉತ್ತರ ಕೊಡಿ ಮೋದಿ' ಎಂಬ ಹೊಸ ಅಭಿಯಾನ ಆರಂಭಿಸಿದೆ.

Congress Tweet
'ಉತ್ತರ ಕೊಡಿ ಮೋದಿ' ರಾಜ್ಯ ಕಾಂಗ್ರೆಸ್​ನಿಂದ ಟ್ವೀಟ್

By

Published : Jan 2, 2020, 12:40 PM IST

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ತುಮಕೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ 'ಉತ್ತರ ಕೊಡಿ ಮೋದಿ' ಎಂಬ ಹೊಸ ಅಭಿಯಾನ ಆರಂಭಿಸಿದೆ.

ಟ್ವೀಟ್ ಮೂಲಕ ಮೋದಿಗೆ ಪ್ರಶ್ನೆಗಳನ್ನು ಹಾಕಿರುವ ರಾಜ್ಯ ಕಾಂಗ್ರೆಸ್ ರಾಜ್ಯಕ್ಕೆ ಕೇಂದ್ರದಿಂದ ನೀಡಬೇಕಾದ ತೆರಿಗೆಯ (ಜಿ.ಎಸ್.ಟಿ) ಪಾಲು ಸಮರ್ಪಕವಾಗಿ ನೀಡುತ್ತಿಲ್ಲವೇಕೆ? ರಾಜ್ಯಕ್ಕೆ ಬರಬೇಕಾದ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯ ಬಾಕಿಯನ್ನು ಇದುವರೆಗೂ ಏಕೆ ನೀಡಿಲ್ಲ? ಅನುದಾನ ಹಂಚಿಕೆಯಲ್ಲಿ‌ ಕರ್ನಾಟಕವನ್ನು ಕಡೆಗಣಿಸಿರುವುದು ಏಕೆ?

ಭೀಕರ ನೆರೆ ಸಂದರ್ಭದಲ್ಲಿ ರಾಜ್ಯಕ್ಕೆ ಭೇಟಿ ನೀಡಲಿಲ್ಲ ಏಕೆ? ₹ 1 ಲಕ್ಷ‌ ಕೋಟಿಗೂ ಹೆಚ್ಚು ನಷ್ಟವಾದರೂ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಿಲ್ಲ ಏಕೆ? ಮಧ್ಯಂತರ ಪರಿಹಾರ ನೀಡಲಿಲ್ಲ ಏಕೆ? ರಾಜ್ಯ ಸರ್ಕಾರವೇ ₹35,300 ಕೋಟಿ ನಷ್ಟ ಆಗಿದೆ ಎಂದು ವರದಿ ನೀಡಿದರೂ ಕೇವಲ ₹1200 ಕೋಟಿ ನೀಡಿ ಸುಮ್ಮನಾಗಿದ್ದು‌ ಏಕೆ? ಎಂದು ಪ್ರಶ್ನಿಸಿದೆ.

ಹಾಗೆ ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ 'ಶಿವಕುಮಾರ ಸ್ವಾಮೀಜಿ' ಅವರು ಲಿಂಗೈಕ್ಯರಾದಾಗ ತುಮಕೂರಿಗೆ ಏಕೆ ಬರಲಿಲ್ಲ? ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಇದುವರೆಗೂ ಏಕೆ ನೀಡಿಲ್ಲ ? ಉತ್ತರ ಕೊಡಿ ಮೋದಿ ಎಂದು ಅಭಿಯಾನ ಆರಂಭಿಸಿದೆ.

ABOUT THE AUTHOR

...view details