ಕರ್ನಾಟಕ

karnataka

ETV Bharat / state

ಟರ್ಫ್ ಕ್ಲಬ್ ಆನ್​​ಲೈನ್ ಬೆಟ್ಟಿಂಗ್‌ : ಅನುಮತಿ ಹಿಂಪಡೆದ ಸರ್ಕಾರ

ಹಿಂದಿನ ವಿಚಾರಣೆ ವೇಳೆ, ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಬಿಟಿಸಿಗೆ ಬೆಟ್ಟಿಂಗ್ ನಡೆಸಲು ಅನುಮತಿ ನೀಡಿರುವ ಸರ್ಕಾರದ ಕ್ರಮ ಅಸಂಬದ್ಧ ಎಂದು ಅಭಿಪ್ರಾಯಪಟ್ಟಿತ್ತಲ್ಲದೆ ಸರ್ಕಾರಕ್ಕೆ ಡಿ.16ರೊಳಗೆ ನಿಲುವು ತಿಳಿಸುವಂತೆ ನಿರ್ದೇಶಿಸಿತ್ತು..

ಹೈಕೋರ್ಟ್
High Court

By

Published : Dec 18, 2020, 6:45 AM IST

ಬೆಂಗಳೂರು:ಬೆಂಗಳೂರು ಟರ್ಫ್ ಕ್ಲಬ್‌ (ಬಿಟಿಸಿ)ಗೆ ಆನ್​​ಲೈನ್ ಬೆಟ್ಟಿಂಗ್‌ ನಡೆಸಲು ನೀಡಿದ್ದ ಅನುಮತಿ ಹಿಂಪಡೆದಿದ್ದೇವೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್​ಗೆ ಮಾಹಿತಿ ನೀಡಿದೆ. ಈ ಕುರಿತು ನಗರದ ಸಿ. ಗೋಪಾಲ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ .ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರದ ಪರ ವಕೀಲರು ಈ ಮಾಹಿತಿ ನೀಡಿದ್ದಾರೆ.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಜು.2ರಂದು ಬಿಟಿಸಿಗೆ ಆನ್​​ಲೈನ್ ಬೆಟ್ಟಿಂಗ್ ನಡೆಸಲು ತಾತ್ವಿಕ ಒಪ್ಪಿಗೆ ನೀಡಲಾಗಿತ್ತು. ಆದರೆ, ಡಿ.10ರಂದು ಅನುಮತಿಯನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿ ಆ ಕುರಿತ ಪ್ರಮಾಣ ಪತ್ರವನ್ನು ಪೀಠಕ್ಕೆ ಸಲ್ಲಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ಸದ್ಯ ಅನುಮತಿ ಹಿಂಪಡೆದಿರುವ ಸರ್ಕಾರ ಈ ಬಗ್ಗೆ ಮತ್ತೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಕೋರ್ಟ್ ಆಶಿಸುತ್ತದೆ ಎಂದು ತಿಳಿಸಿತು.

ಓದಿ: ಉಜಿರೆ ಬಾಲಕನ ಅಪಹರಣ ಕೇಸ್; 17 ಕೋಟಿಗೆ ಬೇಡಿಕೆ ಇಟ್ರಾ ಕಿಡ್ನಾಪರ್ಸ್‌?

ಅಲ್ಲದೆ, ರೇಸ್‌ಗಳನ್ನು ನಡೆಸುವ ಕುರಿತು ಬಿಟಿಸಿ ಸರ್ಕಾರಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವ ನ್ಯಾಯಾಲಯ, ಆ ಮನವಿಯನ್ನು ಸರ್ಕಾರ ಕಾನೂನು ರೀತಿಯಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಬಹುದು ಎಂದು ಆದೇಶಿಸಿತು.

ಹಿಂದಿನ ವಿಚಾರಣೆ ವೇಳೆ, ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಬಿಟಿಸಿಗೆ ಬೆಟ್ಟಿಂಗ್ ನಡೆಸಲು ಅನುಮತಿ ನೀಡಿರುವ ಸರ್ಕಾರದ ಕ್ರಮ ಅಸಂಬದ್ಧ ಎಂದು ಅಭಿಪ್ರಾಯಪಟ್ಟಿತ್ತಲ್ಲದೆ ಸರ್ಕಾರಕ್ಕೆ ಡಿ.16ರೊಳಗೆ ನಿಲುವು ತಿಳಿಸುವಂತೆ ನಿರ್ದೇಶಿಸಿತ್ತು.

ಅರ್ಜಿದಾರರ ಪರ ವಕೀಲರು, ಸರ್ಕಾರ ಆನ್​​ಲೈನ್ ಬೆಟ್ಟಿಂಗ್​​ಗೆ ಅವಕಾಶ ನೀಡಿರುವುದರಿಂದ ಸಮಾಜದ ಮೇಲೆ ಗಂಭೀರ ಪರಿಣಾಮಗಳಾಗಲಿವೆ. ಮೊದಲೇ ಕೊರೊನಾದಿಂದ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ಆನ್​​ಲೈನ್ ಬೆಟ್ಟಿಂಗ್​​ಗೆ ಅವಕಾಶ ನೀಡುವುದರಿಂದ ಸಮಾಜದಲ್ಲಿ ಹೊಸ ಸಮಸ್ಯೆಗಳು ಸೃಷ್ಟಿಯಾಗಲಿವೆ ಎಂದು ವಾದಿಸಿದ್ದರು.

ABOUT THE AUTHOR

...view details