ಬೆಂಗಳೂರು: ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ಜಿಎಸ್ಟಿ ವಂಚನೆ ಆರೋಪ ಹಿನ್ನೆಲೆಯಲ್ಲಿ ಟರ್ಫ್ ಕ್ಲಬ್ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು, ಇಂದೂ ಸಹ ಡಿಸಿಪಿ ಕುಲದೀಪ್ ಜೈನ್ ನೇತೃತ್ವದಲ್ಲಿ ಟರ್ಫ್ ಕ್ಲಬ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಟರ್ಫ್ ಕ್ಲಬ್ ಮೇಲೆ ದಾಳಿ ಪ್ರಕರಣ: ಕ್ಲಬ್ಗೆ ಮತ್ತೆ ಸಿಸಿಬಿ ಪೊಲೀಸರ ಭೇಟಿ
ನಿನ್ನೆ ಸಿಸಿಬಿ ಪೊಲೀಸರು ನಡೆಸಿದ ದಾಳಿಯಲ್ಲಿ 40ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿ 96 ಲಕ್ಷ ರೂಪಾಯಿ ಜಪ್ತಿ ಮಾಡಿಕೊಂಡಿದ್ದರು.
ಕ್ಲಬ್ಗೆ ಮತ್ತೆ ಸಿಸಿಬಿ ಪೊಲೀಸರ ಭೇಟಿ ಮಾಡಿದರು.
ನಿನ್ನೆ ನಡೆಸಿದ ದಾಳಿಯಲ್ಲಿ 40ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿ 96 ಲಕ್ಷ ರೂಪಾಯಿ ಜಪ್ತಿ ಮಾಡಿಕೊಂಡಿದ್ದರು. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಭಾಗವಾಗಿ ಇಂದು ಕುಲದೀಪ್ ಜೈನ್ ನೇತೃತ್ವದ ತಂಡ ಮತ್ತೆ ಭೇಟಿ ನೀಡಿದೆ. ಪರಿಶೀಲನೆ ವೇಳೆ ಓರ್ವನನ್ನು ವಶಕ್ಕೆ ಪಡೆದುಕೊಂಡಿದೆ. ಕ್ಲಬ್ನಲ್ಲಿ ಖಾಸಗಿ ಸ್ಟಾಲ್ಗಳನ್ನು ತೆರೆಯದಂತೆ ಆದೇಶಿಸಲಾಗಿತ್ತು.. ಹೀಗಿದ್ದರೂ ಕ್ಲಬ್ನಲ್ಲಿ ಮತ್ತೆ ಖಾಸಗಿ ಸ್ಟಾಲ್ ತೆರೆದು ವ್ಯವಹಾರ ನಡೆಸುತ್ತಿದ್ದರು.