ಕರ್ನಾಟಕ

karnataka

ETV Bharat / state

ಮೆಟ್ರೋ ಫೇಸ್-2: ಸುರಂಗ ಕೊರೆದು ಹೊರಬಂದ 'ಲಾವಿ'

ಲಾವಿ ಎಂಬ ಹೆಸರಿನ ಈ ಯಂತ್ರ ಶಿವಾಜಿನಗರದಿಂದ ಎಂ.ಜಿ.ರಸ್ತೆಯವರೆಗೂ ಒಟ್ಟು 1,076 ಮೀಟರ್ ಸುರಂಗ ಕೊರೆದಿದೆ.

ಮೆಟ್ರೋ ಫೇಸ್-2 ನಲ್ಲಿ ಸುರಂಗ ಕೊರೆದು ಹೊರಬಂದ ಲಾವಿ
ಮೆಟ್ರೋ ಫೇಸ್-2 ನಲ್ಲಿ ಸುರಂಗ ಕೊರೆದು ಹೊರಬಂದ ಲಾವಿ

By

Published : Apr 15, 2022, 7:43 PM IST

ಬೆಂಗಳೂರು: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿತು. ಭೂಗರ್ಭದಿಂದ ಮತ್ತೊಂದು ಟಿಬಿಎಂ(ಟನಲ್ ಬೋರಿಂಗ್ ಮಷಿನ್) ಹೊರಬಂದಿದೆ.‌ ಮೆಟ್ರೋ ಫೇಸ್ 2ನಲ್ಲಿ ಸುರಂಗ ಕೊರೆಯುತ್ತಿದ್ದ ಲಾವಿ ಎಂಬ ಯಂತ್ರ ಇಂದು ಹೊರಕ್ಕೆ ಬಂದಿದೆ.

ಇಂದು ಶಿವಾಜಿನಗರದಿಂದ ಎಂ.ಜಿ.ರಸ್ತೆಯವರೆಗೂ ಒಟ್ಟು 1076 ಮೀಟರ್ ಸುರಂಗ ಕೊರೆದಿದೆ. ಫೆಬ್ರವರಿ 10, 2021 ರಂದು ಶಿವಾಜಿನಗರದಲ್ಲಿ ಸುರಂಗ ಪ್ರವೇಶಿಸಿದ್ದ ಲಾವಿ, ಎಂ.ಜಿ.ರಸ್ತೆಯಲ್ಲಿ ಭೂಗರ್ಭದಿಂದ ಹೊರಬಂದಿದೆ. ಗೊಟ್ಟಿಗೆರೆ-ನಾಗವಾರ ಮಾರ್ಗದ ರೀಚ್- 6ರಲ್ಲಿ ಬರುವ ಸುರಂಗ ಮಾರ್ಗವನ್ನು ಇದು ಕೊರೆದಿದೆ.


ಮೆಟ್ರೋ ಎರಡನೇ ಹಂತದ ಗೊಟ್ಟಿಗೆರೆ ನಾಗವಾರ ಮಾರ್ಗದ 13 ಕಿಲೋ ಮೀಟರ್ ಸುರಂಗದಲ್ಲಿ 9 ಟಿಬಿಎಂಗಳು ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಎಂಜಿ ರಸ್ತೆಯಿಂದ ರಾಷ್ಟ್ರೀಯ ಮಿಲಿಟರಿ ಸ್ಕೂಲ್​​ವರೆಗೂ ಸುರಂಗ ಕೊರೆಯುವ ಕೆಲಸ ಆರಂಭ ಮಾಡಲಿದೆ ಎಂದು ಬೆಂಗಳೂರು ಮೆಟ್ರೋ ನಿಗಮ ತಿಳಿಸಿದೆ.

ಇದನ್ನೂ ಓದಿ:ಜಿಂಬಾಬ್ವೆಯಲ್ಲಿ ಕಂದಕಕ್ಕೆ ಬಿದ್ದ 106 ಪ್ರಯಾಣಿಕರಿದ್ದ ಬಸ್‌: 35 ಮಂದಿ ಸಾವು

For All Latest Updates

TAGGED:

ABOUT THE AUTHOR

...view details