ಕರ್ನಾಟಕ

karnataka

ETV Bharat / state

ತುಳಸಿಯನ್ನು ಗಾಂಜಾ ಗಿಡಕ್ಕೆ ಹೋಲಿಸಿದ ನಟಿ ನಿವೇದಿತಾ ವಿರುದ್ಧ ಬಿತ್ತು ಎಫ್ಐಆರ್ - ಬೆಂಗಳೂರು

ಗಾಂಜಾ ಗಿಡವನ್ನು ತುಳಸಿ ಗಿಡಕ್ಕೆ ಹೋಲಿಕೆ ಮಾಡಿರುವ ನಟಿ ನಿವೇದಿತಾ ವಿರುದ್ಧ ಮಲ್ಲೇಶ್ವರಂ ಪೊಲೀಸ್​ ಠಾಣೆಯಲ್ಲಿ‌ ಎಫ್ಐಆರ್ ದಾಖಲಾಗಿದೆ.

ನಟಿ ನಿವೇದಿತಾ
ನಟಿ ನಿವೇದಿತಾ

By

Published : Sep 4, 2020, 12:55 PM IST

Updated : Sep 4, 2020, 1:10 PM IST

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಇದೆ ಎನ್ನಲಾದ ಗಾಂಜಾ ಜಾಲ ಬೆನ್ನತ್ತಿರುವ ಸಿಸಿಬಿ ತಂಡ ತನಿಖೆಯನ್ನು ಚುರುಕುಗೊಳಿಸಿದೆ. ಆದರೆ ಈ ವೇಳೆ ಚಿತ್ರನಟಿ ನಿವೇದಿತಾ ತುಳಸಿಗೆ ಗಾಂಜಾವನ್ನು ಹೋಲಿಕೆ ಮಾಡಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.

"ಗಾಂಜಾ ಸೇವನೆ ತಪ್ಲಲ್ಲ. ಗಾಂಜಾ ಗಿಡ ತುಳಸಿ ಗಿಡಕ್ಕೆ ಸಮ" ಎಂದು ಹೇಳಿದ್ದರು. ಈ ಹೇಳಿಕೆ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಎ.ದೀಪಕ್ ಎಂಬುವರು ಮಲ್ಲೇಶ್ವರಂ ಪೊಲೀಸ್​ ಠಾಣೆಯಲ್ಲಿ‌ ನೀಡಿದ್ದ ದೂರು ಆಧರಿಸಿ ಎಫ್ಐಆರ್ ದಾಖಲಾಗಿದೆ.

ನಟಿ ನಿವೇದಿತಾ ವಿರುದ್ಧ ಎಫ್ಐಆರ್

ಇದನ್ನು ಓದಿ :ಸ್ಯಾಂಡಲ್‌ವುಡ್​​​​​ ಡ್ರಗ್ಸ್‌​ ಮಾಫಿಯಾ ಬಗ್ಗೆ ನಟಿ ನಿವೇದಿತಾ ಹೀಗಂತಾರೆ..

ಸದ್ಯ ನಟಿ ನಿವೇದಿತಾಗೆ ನೊಟೀಸ್ ನೀಡಿ ವಿಚಾರಣೆಗೆ ಕರೆಸಲು ಪೊಲೀಸರು ಮುಂದಾಗಿದ್ದಾರೆ.

ಎ.ದೀಪಕ್ ನೀಡಿದ ದೂರಿನ ಪ್ರತಿ
Last Updated : Sep 4, 2020, 1:10 PM IST

ABOUT THE AUTHOR

...view details