ಕರ್ನಾಟಕ

karnataka

ETV Bharat / state

11 ಕೆಜಿ ತಿಮಿಂಗಿಲ ವಾಂತಿ ಮಾರಾಟ ಯತ್ನ: ಚಿಕ್ಕಜಾಲ ಪೊಲೀಸರಿಂದ ನಾಲ್ವರ ಬಂಧನ - ಚಿಕ್ಕಜಾಲ ಪೊಲೀಸರಿಂದ ವಾಂತಿ ಮಾರಾಟ ಆರೋಪಿಗಳ ಬಂಧನ

ಕೋಟ್ಯಂತರ ರೂ. ಬೆಲೆಬಾಳುವ ಅಂಬರ್ ಗ್ರಿಸ್ ಮಾರಾಟಕ್ಕೆ ಯತ್ನಿಸಿದ ನಾಲ್ವರನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ.

trying-to-sell-ambergris-two-arrested-in-bengaluru
11 ಕೆಜಿ ತಿಮಿಂಗಿಲ ವಾಂತಿ ಮಾರಾಟ ಯತ್ನ: ಚಿಕ್ಕಜಾಲ ಪೊಲೀಸರಿಂದ ನಾಲ್ವರ ಬಂಧನ

By

Published : Sep 9, 2021, 9:49 AM IST

ಯಲಹಂಕ :ಕೋಟ್ಯಂತರ ರೂಪಾಯಿ ಬೆಲೆಬಾಳುವ ಅಂಬರ್ ಗ್ರಿಸ್ (ತಿಮಿಂಗಿಲ ವಾಂತಿ) ಮಾರಾಟಕ್ಕೆ ಯತ್ನಿಸಿದ ನಾಲ್ವರನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದು, 11 ಕೆಜಿ ತೂಕದ ತಿಮಿಂಗಿಲ ವಾಂತಿ ತುಣುಕನ್ನು ವಶಕ್ಕೆ ಪಡೆಯಲಾಗಿದೆ.

ಯಲಹಂಕ ಬಳಿಯ ಚಿಕ್ಕಜಾಲದ ವಿ.ಐ.ಟಿ ರಸ್ತೆಯ ಗಂಗಾನಗರ ಸರ್ಕರ್ ಬಳಿ ಅಂಬರ್ ಗ್ರಿಸ್ (ತಿಮಿಂಗಿಲ ವಾಂತಿ) ಬಳಿ ಅಂಬರ್ ಗ್ರಿಸ್ ವಶಕ್ಕೆ ಪಡೆಯಲಾಗಿದೆ. ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಚಿಕ್ಕಜಾಲ ಪೊಲೀಸರು ದಾಳಿ ನಡೆಸಿದ್ದಾರೆ. ನಾಲ್ವರನ್ನು ವಶಕ್ಕೆ ಬಂಧಿಸಿ, 11 ಕೆಜಿ ತೂಕದ ಅಂಬರ್ ಗ್ರೀಸ್ ವಶಕ್ಕೆ ಪಡೆದಿದ್ದಾರೆ.

ತಿಮಿಂಗಿಲ ವಾಂತಿ

ಸುಗಂಧ ದ್ರವ್ಯ ತಯಾರಿಕೆ ಹೆಚ್ಚು ಬಳಕೆಯಾಗುವ ಅಂಬರ್ ಗ್ರಿಸ್​ಗೆ ವಿದೇಶಗಳಲ್ಲಿ ಹೆಚ್ಚು ಬೇಡಿಕೆ ಇದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಪ್ರಕಾರ ಅಂಬರ್ ಗ್ರಿಸ್​ ಮಾರಾಟ ಕಾನೂನು ಬಾಹಿರವಾಗಿದೆ.

ಇದನ್ನೂ ಓದಿ:ಮೈಸೂರು: ಬಹಿರ್ದೆಸೆಗೆ ಹೋದ ನವ ವಿವಾಹಿತ ಹುಲಿ ದಾಳಿಗೆ ಬಲಿ

ABOUT THE AUTHOR

...view details