ಬೆಂಗಳೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ನಿಷೇಧಿಸಿರುವುದು ಪ್ರಜಾಪ್ರಭುತ್ವಕ್ಕೆ ಎಚ್ಚರಿಕೆ ಕರೆಗಂಟೆಯಾಗಿದೆ ಎಂದು ಬಿಜೆಪಿ ನಾಯಕ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ಯಾರದೇ ಖಾತೆಯನ್ನಾಗಲೀ ಟ್ವಿಟ್ಟರ್ ಅವರು ಬ್ಲಾಕ್ ಮಾಡಬಾರದು. ಕಾಂಗ್ರೆಸ್ಸಿಗನ್ನಾಗಿರಲಿ ಅಥವಾ ಬಿಜೆಪಿಗನ್ನಾಗಿರಲಿ ಅದು ಸರಿಯಲ್ಲ. ದೇಶದಲ್ಲಿ ಈ ರೀತಿಯಾಗದಿರಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಶ್ರೀವತ್ಸರ ಅಮಿತ್ ಮಾಳವೀಯ ಮತ್ತು ತೇಜಸ್ವಿ ಸೂರ್ಯ ಅವರ ಟ್ವಿಟರ್ನ್ನು ಬ್ಯಾನ್ ಮಾಡಬೇಕು ಎಂಬ ಟ್ವೀಟ್ಗೆ ತಿರುಗೇಟು ನೀಡುತ್ತಾ, ಯಾವುದೇ ಹೊಣೆಗಾರಿಕೆ ಇಲ್ಲದೆ ಟೆಕ್ ಕಂಪನಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯುವಂತಿಲ್ಲ. ಆದರೆ ತುರ್ತು ಪರಿಸ್ಥಿತಿ ಹೇರಿದ ಪಕ್ಷದ ನಾಯಕನಿಗೆ ಈ ಯೋಚನೆ ಬರಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಅನಿಯಂತ್ರಿತ ಟೆಕ್ ಕಂಪನಿಯಿಂದ ನಮ್ಮ ಪ್ರಜಾಪ್ರಭುತ್ವಕ್ಕೆ ಭೀತಿ ಇದೆ ಎಂಬ ಅರಿವಿಲ್ಲದವರಿಗೆ ಇದೊಂದು ಎಚ್ಚರಿಕೆಯ ಕರೆಗಂಟೆಯಾಗಿದೆ. ಟ್ರಂಪ್ಗೆ ಟ್ವಿಟ್ಟರ್ ಬ್ಯಾನ್ ಮಾಡಿದ್ದರೆ, ಅದನ್ನು ಪ್ರತಿಯೊಬ್ಬರಿಗೂ ಮೇಲೂ ಮಾಡಲು ಹಿಂಜರಿಯುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.