- ಡಿಕೆಶಿ ಅವರನ್ನು ಸೆಪ್ಟೆಂಬರ್ 13ರವರೆಗೂ ಇಡಿ ವಶಕ್ಕೆ ನೀಡಿ ಇಡಿ ವಿಶೇಷ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.
- ಡಿಕೆಶಿ ಇಬ್ಬರು ಶ್ರೇಷ್ಠ ವಕೀಲರನ್ನು ನೇಮಕ ಮಾಡಿ ವಾದ ಮಾಡಿದರೂ ಇಡಿ ವಶದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ
- ಎರಡೂ ಕಡೆ ವಾದ - ಪ್ರತಿವಾದ ಆಲಿಸಿದ ನ್ಯಾಯಾಲಯ ಪಬ್ಲಿಕ್ ಪ್ರಾಸಿಕ್ಯೂಟರ್ ವಾದವನ್ನ ಮನ್ನಣೆ ಮಾಡಿ ಡಿಕೆಶಿ ಅವರನ್ನ 9 ದಿನಗಳ ಕಾಲ ಇಡಿ ವಶಕ್ಕೆ ಒಪ್ಪಿಸಿ ಆದೇಶ ನೀಡಿದೆ.
- ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರಿಂದ ಆದೇಶ
- ಇನ್ನು ಒಂಭತ್ತು ದಿನಗಳ ಕಾಲ ಡಿಕೆಶಿ ಇಡಿ ಅಧಿಕಾರಿಗಳ ವಶದಲ್ಲಿ ಇರಲಿದ್ದಾರೆ.
ಕಟಕಟೆಯಲ್ಲಿ ಡಿಕೆಶಿ: ಸೆಪ್ಟೆಂಬರ್ 13ರವರೆಗೂ ಇಡಿ ವಶಕ್ಕೆ ನೀಡಿ ಆದೇಶ - ಮಾಜಿ ಸಚಿವ ಡಿ.ಕೆ. ಶಿವಕುಮಾರ್
19:12 September 04
ಸೆಪ್ಟೆಂಬರ್ 13 ರವರೆಗೂ ಇಡಿ ವಶಕ್ಕೆ ನೀಡಿ ಆದೇಶ
17:43 September 04
ಆದೇಶ ಕಾಯ್ದಿರಿಸಿದ ಕೋರ್ಟ್
- ಡಿ.ಕೆ.ಶಿವಕುಮಾರ್ ಪ್ರಕರಣದ ಆದೇಶ ಕಾಯ್ದಿರಿಸಿದ ಕೋರ್ಟ್
17:40 September 04
ಮತ್ತೆ ಅಭಿಷೇಕ್ ಮನು ಸಿಂಘ್ವಿ ವಾದ
- ಮತ್ತೆ ವಾದ ಮಂಡಿಸುತ್ತಿರುವ ಅಭಿಷೇಕ್ ಮನು ಸಿಂಘ್ವಿ
- ಹೈ ಕೋರ್ಟ್ ಆದೇಶವನ್ನ ಡಿಕೆಶಿ, ಇಡಿ ಗಮನಕ್ಕೆ ತಂದಿದ್ದರು. ಆದರೂ ಇಡಿ ಡಿ.ಕೆ.ಶಿವಕುಮಾರ್ ಅವರನ್ನ ಬಂಧಿಸಿದೆ- ಅಭಿಷೇಕ್ ಮನು ಸಿಂಘ್ವಿ
17:29 September 04
ಒಂದು ವಾರ ಕಾಲಾವಕಾಶ ಕೇಳಿದ ಇಡಿ
- ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ಡಿಕೆಶಿ ಎತ್ತಿರುವ ಆಕ್ಷೇಪಗಳಿಗೆ ಉತ್ತರಿಸಲು ಒಂದು ವಾರ ಕಾಲಾವಕಾಶ ಕೇಳಿದ ಇಡಿ ವಕೀಲರು
17:17 September 04
ಮತ್ತೆ ವಾದ ಮಂಡನೆ ಮಾಡುತ್ತಿರುವ ಕೆ.ಎಂ. ನಟರಾಜ್
- ನಾವು ವಶಕ್ಕೆ ಪಡೆಯಲು ಕೋರ್ಟ್ ಮುಂದೆ ಅರ್ಜಿಗೆ ಸಹಿ ಹಾಕಿದ್ದೇವೆ. ಕಾನೂನು ಪ್ರಕಾರ ಇದನ್ನು ತಿರಸ್ಕರಿಸಲು ಬರುವುದಿಲ್ಲ - ನಟರಾಜ್
- ಕರ್ನಾಟಕ ಹೈಕೋರ್ಟ್ ಡಿಕೆಶಿ ಅರ್ಜಿಯನ್ನ ವಜಾ ಮಾಡಿದೆ.
- ಅಕ್ರಮ ಹಣ ವರ್ಗಾವಣೆ ಪಿಎಂಎಲ್ಎ ಕಾಯ್ದೆ ವ್ಯಾಪ್ತಿಗೆ ಬರುತ್ತದೆ: ನಟರಾಜ್
- ಇದು ಕೇವಲ ಐಟಿ ಅಪರಾಧವಲ್ಲ. ಐಪಿಸಿ ಸೆಕ್ಷನ 120ಬಿ ಪ್ರಕಾರ ಒಳಸಂಚು ಆರೋಪವೂ ಇದೆ.
17:09 September 04
- ಪಿಎಂಎಲ್ ಕಾಯ್ದೆಯ ಸೆಕ್ಷನ್ 50(4) ಪ್ರಕಾರ ಅವರನ್ನ ಬಂಧಿಸುವಂತಿಲ್ಲ; ಹಿರಿಯ ನ್ಯಾಯವಾದಿ ದ್ಯಾನ್ ಕೃಷ್ಣನ್
- 172 ಸಿಆರ್ಪಿಸಿ ಪ್ರಕಾರ ಇವರು ಡೈರಿಯನ್ನ ಗುರುತಿಸಿದ್ದಾರೆ. ಆದರೆ ಇದರಲ್ಲಿ ವಿನ್ಯಾಸ ಹಾಗೂ ಪ್ಯಾರ ನಂಬರ್ ಉಲ್ಲೇಖಿಸಿಲ್ಲ
- ನನ್ನ ಮನೆ ಸೇರಿದಂತೆ ಎಲ್ಲ ವಿವರಗಳನ್ನ ನಾನು ಘೋಷಿಸಿಕೊಂಡಿದ್ದೇನೆ; ಕೋರ್ಟ್ ಗಮನಕ್ಕೆ ತಂದ ಡಿಕೆಶಿ ಪರ ವಕೀಲರು
17:03 September 04
ಲೋ ಬಿಪಿ, ಹೈ ಸುಗರ್ ಇದೆ.. ದಯವಿಟ್ಟು ಜಾಮೀನು ಮಂಜೂರು ಮಾಡಿ
- ಡಿಕೆಶಿ ಲೋ ಬಿಪಿಯಿಂದ ಬಳಲುತ್ತಿದ್ದಾರೆ. ಹೈ ಸುಗರ್ ಇದೆ. ಅವರಿಗೆ ಔಷಧ ಪಡೆಯುವ ಅಗತ್ಯ ಇದೆ. ಇದೇ ಕಾರಣದಿಂದ ಇವತ್ತು ಅವರಿಗೆ ಆಹಾರ ನೀಡಲಾಗಿಲ್ಲ: ಕೋರ್ಟ್ ಗಮನಕ್ಕೆ ತಂದ ಸಿಂಘ್ವಿ
- ನನ್ನ ಮನವಿಯನ್ನ ತಿರಸ್ಕರಿಸಿದರೆ, ಒಂದು ನಿಮಿಷಗೂ ತಮಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲು ಸಾಧ್ಯವಾಗುವುದಿಲ್ಲ
- ಒಂದೇ ಸಮಯದಲ್ಲಿ ಮೂವರು ವಿಚಾರಣೆ ನಡೆಸಿದ್ದಾರೆ; ಸಿಂಘ್ವಿ ವಾದ
16:54 September 04
ಸಿಂಘ್ವಿ vs ಪಬ್ಲಿಕ್ ಪ್ರಾಸಿಕ್ಯೂಟರ್
- ಸಂವಿಧಾನದ ಆರ್ಟಿಕಲ್ 20 ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವ ಅಧಿಕಾರ ನೀಡಿದೆ: ಸಿಂಘ್ವಿ
- ನಾನು ಸತ್ಯ ಹೇಳಿಲ್ಲ ಅಂದ ಮಾತ್ರಕ್ಕೆ ಬಂಧಿಸಬಹುದಾ.. ಹಾಗಂತಾ ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಮಾಡುತ್ತಿದ್ದಾರೆ
- ಡಿಕೆಶಿ ರಕ್ಷಣೆ ಸಂಬಂಧ ಸಮರ್ಥನೆ ನೀಡುತ್ತಿರುವ ಅಭಿಷೇಕ್ ಮನು ಸಿಂಘ್ವಿ
- ಅಭಿಷೇಕ್ ಮನುಸಿಂಘ್ವಿ ಸ್ವಯಂ ಅಪರಾಧ ಹಾಗೂ ಮೌನ ನಿಷೇದದ ಬಗ್ಗೆ ಇರುವ ತೀರ್ಪುಗಳನ್ನ ಒಮ್ಮೆ ಓದಬೇಕು ; ಸರ್ಕಾರದ ಪರ ವಕೀಲರು
- ವಶಕ್ಕೆ ಪಡೆದು ವಿಚಾರಣೆ ನಡೆಸಿ ಪಡೆಯುವ ಹೇಳಿಕೆ ತಪ್ಪೊಪ್ಪಿಗೆ ಆಗಲು ಸಾಧ್ಯವಿಲ್ಲ: ಸಿಂಘ್ವಿ
16:50 September 04
ಸರಿಯಾದ ಉತ್ತರ ನೀಡದ್ದಕ್ಕೆ ಬಂಧಿಸಿದ್ದೇವೆ ಎಂದು ಸರ್ಕಾರದ ಪರ ವಕೀಲರು
- ಡಿಕೆಶಿ ವಶಕ್ಕೆ ಪಡೆಯುವ ಇಡಿ ಉದ್ದೇಶ ಸಂಪೂರ್ಣವಾಗಿ ದುರುದ್ದೇಶಪೂರಿತವಾಗಿದೆ
- ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಡಿಕೆಶಿ ಯಾವ ಪ್ರಶ್ನೆಗೂ ಸರಿಯಾಗಿ ಉತ್ತರಿಸಿಲ್ಲ, ಸತ್ಯವನ್ನು ಹೇಳುತ್ತಿಲ್ಲ ಹೀಗಾಗಿಯೇ ಬಂಧಿಸಲಾಗಿದೆ ಎಂದು ಕೋರ್ಟ್ ಗಮನ ಸೆಳೆದರು.
16:40 September 04
ದಯವಿಟ್ಟು ವಶಕ್ಕೆ ನೀಡುವ ವಿಷಯದ ಬಗ್ಗೆ ವಿವೇಚನೆ ಬಳಿಸಿ... ಕೋರ್ಟ್ಗೆ ಸಿಂಘ್ವಿ ಮನವಿ
- ಈ ಕೇಸ್ನಲ್ಲಿ ಬಂಧನ ವಿಶೇಷ ಕಾಲದಲ್ಲಿ ಮಾತ್ರ ಮಾಡಬಹುದು
- ಆದರೆ ಇದು ಡಿಕೆಶಿಗೆ ಅನ್ವಯ ಆಗಲ್ಲ, ಇಡಿ ವಿಚಾರಣೆಗೆ ಮತ್ತಷ್ಟು ಕಾಲ ವಶಕ್ಕೆ ಪಡೆಯುವ ಅಗತ್ಯವಿಲ್ಲ
- ಡಿಕೆಶಿ ಇಡಿ ವಶಕ್ಕೆ ನೀಡುವ ಅವಶ್ಯಕತೆ ಇದೆ ಎಂಬುದನ್ನು ಪರಿಶೀಲಿಸಬೇಕಿದೆ. ಈ ಸಂಬಂಧ ಘನ ನ್ಯಾಯಾಲಯ ತಮ್ಮ ವಿವೇಚನೆ ಬಳಸಬೇಕಿದೆ
- ಡಿಕೆಶಿ ಪರ ಅಭಿಷೇಕ್ ಮನು ಸಿಂಘ್ವಿ ವಾದ
16:26 September 04
ಡಿಕೆಶಿ ಪರ ಸಿಂಘ್ವಿ ವಾದ
- ಆಗಸ್ಟ್ 20 ರಂದು ಕರ್ನಾಟಕ ಹೈಕೋರ್ಟ್ ಈ ಬಗ್ಗೆ ಐಟಿ ಸಲ್ಲಿಸಿದ್ದ ಕಂಪ್ಲೇಂಟ್ ಬಗ್ಗೆ ವಿಚಾರಣೆ ನಡೆಸಿ ಸ್ಟೇ ನೀಡಿದೆ
- ವಿಶೇಷ ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡುತ್ತಿರುವ ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ
- 2- 08 2017 ರಲ್ಲಿ ಐಟಿ ದಾಳಿ ಮಾಡಿದ್ದ ವೇಳೆ ವಶಪಡಿಸಿಕೊಂಡ ದಾಖಲೆಗಳ ಮೇಲೆ ಈ ಕೇಸ್ ನಡೆಯುತ್ತಿದೆ
- ಇಡಿ ಡಿಕೆಶಿ ಅವರನ್ನ ಬಂಧಿಸುವ ಅಗತ್ಯ ಏನಿದೆ?
- ನಾಲ್ಕು ದಿನಗಳ ವಿಚಾರಣೆ ನಡೆಸಲಾಗಿದೆ. ಎಲ್ಲ ಪ್ರಶ್ನೆಗಳಿಗೆ ಡಿಕೆಶಿ ಉತ್ತರಿಸಿದ್ದಾರೆ
- ಇಡಿ ವಿಶೇಷ ನ್ಯಾಯಾಲಯದಲ್ಲಿ ಅಭಿಷೇಕ್ ಮನು ಸಿಂಘ್ವಿ ವಾದ
- ಯಾಂತ್ರಿಕವಾಗಿ ಇಡಿ ಡಿಕೆಶಿ ಅವರನ್ನ ಇಡಿ ವಶಕ್ಕೆ ನೀಡಲು ಸಾಧ್ಯವೇ ಇಲ್ಲ
- ಪಿಎಂಎಲ್ಎ ಕಾಯ್ದೆ ಐಟಿ ಆ್ಯಕ್ಟ್ನ ಸೆಕ್ಷನ್ 276, 278, 279 ಎಲ್ಲೂ ಉಲ್ಲೇಖಿಸಿಲ್ಲ
- ಈ ಸೆಕ್ಷನ್ಗಳು ಈ ಕಾಯ್ದೆ ವ್ಯಾಪ್ತಿಗೆ ಬರಲ್ಲ ಹಾಗೂ ಅನ್ವಯ ಆಗಲ್ಲ - ಸಿಂಘ್ವಿ ವಾದ
16:21 September 04
- ವಿಶೇಷ ನ್ಯಾಯಾಲಯದ ಮುಂದೆ ಡಿ.ಕೆ ಶಿವಕುಮಾರ್ ಹಾಜರು
- 14 ದಿನ ವಶಕ್ಕೆ ನೀಡುವಂತೆ ಇಡಿ ಅಧಿಕಾರಿಗಳಿಂದ ಕೋರ್ಟ್ಗೆ ಮನವಿ
15:08 September 04
- ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
- ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು.
- ಮಂಡ್ಯದಲ್ಲಿ ಮೋದಿ, ಅಮಿತ್ ಶಾ ಬ್ಯಾನರ್ಗೆ ಚಪ್ಪಲಿಯಿಂದ ಹೊಡೆದ ಕಾರ್ಯಕರ್ತರು.
- ಡಿ.ಕೆ. ಶಿವಕುಮಾರ್ ಅವರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ.
14:37 September 04
- ಗೌರಿಬಿದನೂರಿನ ಕಡೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ಗೆ ಕಲ್ಲು ಎಸೆದ ಪ್ರತಿಭಟನಕಾರರು.
- ಬೆಂಗಳೂರಿನ ಆನಂದರಾವ್ ವೃತ್ತ ಸಮೀಪದ ಕಾಂಗ್ರೆಸ್ ಭವನ ಮುಂಭಾಗ ಘಟನೆ.
- ಗೌರಿಬಿದನೂರು ಡಿಪೋಗೆ ಸೇರಿದ್ದ ಕೆಎ 40 ಎಫ್ 1334 ಸಂಖ್ಯೆಯ ಬಸ್
- ಬಸ್ನಲ್ಲಿ ಐವರು ಪ್ರಯಾಣಿಕರಿದ್ದರು ಎಂದು ತಿಳಿಸಿದ ಪೊಲೀಸರು.
- ಕಾಂಗ್ರೆಸ್ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ವಾಪಾಸ್ ಆಗುವಾಗ ಈ ಕೃತ್ಯ ನಡೆಸಿದ ದುಷ್ಕರ್ಮಿಗಳು.
14:17 September 04
- 'ಕೈ' ಕಾರ್ಯಕರ್ತರ ಪ್ರತಿಭಟನೆ ವೇಳೆ ಬೆಂಕಿ ತಗುಲಿ ಐವರಿಗೆ ಗಾಯ.
- ಟೈರ್ಗೆ ಬೆಂಕಿ ಹಚ್ಚುವಾಗ 5 ಜನ ಕಾರ್ಯಕರ್ತರು ಹಾಗೂ ಒರ್ವ ಪೊಲೀಸ್ ಪೇದೆಗೆ ಬೆಂಕಿ.
- ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ಘಟನೆ.
- ಚಳ್ಳಕೆರೆ ನಗರದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು.
- ಪೊಲೀಸ್ ಪೇದೆ ಅಣ್ಣಪ್ಪ ಅವರ ಕೈ ಮತ್ತು ಕಿವಿ ಭಾಗಕ್ಕೆ ತಗುಲಿದ ಬೆಂಕಿ.
13:11 September 04
- ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ರಾಮನಗರದಲ್ಲಿ ಹೊತ್ತಿ ಉರಿದ ಎರಡು ಬೈಕ್ಗಳು.
- ಪ್ರತಿಭಟನೆ ಮಾಡುವ ವೇಳೆ ಎರಡು ಬೈಕ್ಗಳನ್ನು ಸುಟ್ಟು ಹಾಕಿದ ಕಾರ್ಯಕರ್ತರು.
- ಕನಕಪುರ ತಾಲೂಕಿನ ಸಾತನೂರಿನ ರಸ್ತೆಯಲ್ಲಿ ನಡೆದ ಘಟನೆ.
- ಜಿಲ್ಲಾ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರಿಂದ ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನೆ.
- ಶಿಢ್ಲಘಟ್ಟ ವೃತ್ತದಲ್ಲಿ ರಸ್ತೆ ತಡೆದ ಕಾರ್ಯಕರ್ತರು.
- ಬೆಳಗಾವಿ ಜಿಲ್ಲಾ ಹಾಗೂ ಮಹಾನಗರ ಕಾಂಗ್ರೆಸ್ ಘಟಕದ ವತಿಯಿಂದ ಪ್ರತಿಭಟನೆ.
- ಟೈಯರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು.
- ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ.
- ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿ, ಯಾರನ್ನು ಹಿರೋ ಮಾಡುವ ಅವಶ್ಯಕತೆ ಬಿಜೆಪಿಗಿಲ್ಲ- ಸಚಿವ ಜೆ.ಸಿ. ಮಾಧುಸ್ವಾಮಿ
- ಬಿಜೆಪಿ ಯಾವತ್ತಿಗೂ ದ್ವೇಷದ ರಾಜಕಾರಣ ಮಾಡಿಲ್ಲ.
12:49 September 04
- ಮೈಸೂರಿನಲ್ಲಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಬಂಧಿಸಿದ ಪೊಲೀಸರು.
- ಮೈಸೂರು-ಊಟಿ ಹೆದ್ದಾರಿಯ ಗುಂಡೂರಾವ್ ನಗರದ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದ ಮಾಜಿ ಶಾಸಕ.
- ಕಾಂಗ್ರೆಸ್ನ ಪ್ರಬಲ ನಾಯಕರನ್ನು ಬೆದರಿಸಲು ಬಿಜೆಪಿ ಈ ರೀತಿ ಮಾಡುತ್ತಿದೆ- ಮಾಜಿ ಶಾಸಕ ಎಂ.ಕೆ. ಸೋಮಶೇಖರ್
- ಗಣಿನಾಡಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ.
- ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್. ಮಹಮ್ಮದ್ ರಫೀಕ್ ನೇತೃತ್ವದಲ್ಲಿ ಪ್ರತಿಭಟನೆ.
12:48 September 04
- ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಗೆ ಬೆಂಕಿ ಹಚ್ಚಿ ವಿಕೃತಿ ಮೆರೆದ ದುಷ್ಕರ್ಮಿಗಳು.
- ಸುಮ್ಮನಹಳ್ಳಿಯ ಔಟರ್ರಿಂಗ್ ರೋಡ್ನಲ್ಲಿ ಬಿಎಂಟಿಸಿ ಬಸ್ಗೆ ಬೆಂಕಿ.
- ಕೂಡಲೇ ಬೆಂಕಿಯನ್ನು ನಂದಿಸಿದ ಅಗ್ನಿಶಾಮಕ ದಳ ಸಿಬ್ಬಂದಿ.
- ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.
12:10 September 04
- ಕಾಂಗ್ರೆಸ್ ಪಕ್ಷ ಡಿ.ಕೆ. ಶಿವಕುಮಾರ್ ಪರ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತದೆ- ಸಿದ್ದರಾಮಯ್ಯ
- ಡಿಕೆಶಿ ಅವರನ್ನು ಅರೆಸ್ಟ್ ಮಾಡುವ ಅಗತ್ಯವಿರಲಿಲ್ಲ, ರಾಜಕೀಯ ಸೇಡಿನಿಂದ ಅರೆಸ್ಟ್ ಮಾಡಲಾಗಿದೆ.
- ಚಿದಂಬರಂ ಹಾಗೂ ಡಿಕೆಶಿ ಇಬ್ಬರನ್ನೂ ಅರೆಸ್ಟ್ ಮಾಡಿದ್ದು ರಾಜಕೀಯ ದುರುದ್ದೇಶ.
- ಇದು ವಿರೋಧ ಪಕ್ಷದವರನ್ನು ಮುಗಿಸುವ ಹುನ್ನಾರ.
- ಬಿಜೆಪಿಯವರೇ ಈ ಕೆಲಸಗಳನ್ನು ಮಾಡಿಸುತ್ತಿದ್ದಾರೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ.
- ಕೂಡಲೇ ಡಿಕೆಶಿ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮಂಡ್ಯದಲ್ಲಿ ಕಾರ್ಯಕರ್ತರ ಪ್ರತಿಭಟನೆ.
- ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್, ಮಾಜಿ ಶಾಸಕ ಆತ್ಮಾನಂದ ಸೇರಿದಂತೆ ನಗರಸಭೆ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿ.
- ಪಿಎಂ ನರೇಂದ್ರ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಮಂಡ್ಯದಲ್ಲಿ ಆಕ್ರೋಶ.
- ಧಾರವಾಡ ಜಿಲ್ಲಾಧಿಕಾರಿ ಎದುರು ಪ್ರತಿಭಟನೆ.
- ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ.
11:52 September 04
- ಮಂಗಳೂರು ತಾಲೂಕಿನ ಹಲವೆಡೆ ಖಾಸಗಿ ಬಸ್ಗಳಿಗೆ ಕಲ್ಲು ತೂರಾಟ.
- ನಂದಿಗುಡ್ಡ, ಫಳ್ನೀರ್, ಬಟ್ಟಕೋಡಿ, ಕಿನ್ನಿಗೋಳಿ, ಕಟೀಲ್ನಲ್ಲಿ ಬಸ್ಗಳ ಮೇಲೆ ಕಲ್ಲು
- ಡಿಕಿಶಿ ಬಂಧನ ಖಂಡಿಸಿ ಕಲ್ಲು ತೂರಾಟ ನಡೆಸಿರುವ ದುಷ್ಕರ್ಮಿಗಳು.
11:48 September 04
- ಡಿಕೆಶಿ ಕ್ಷೇಮವಾಗಿರಲೆಂದು ಕನಕಪುರದ ಶಕ್ತಿ ದೇವತೆ ಕೆಂಕೇರಮ್ಮ ದೇವಾಲಯದಲ್ಲಿ ಮಹಿಳೆಯರಿಂದ ಪೂಜೆ.
- ಡಿಕೆಶಿ ಅವರ ಮನೆ ದೇವರು ಕೆಂಕೇರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ.
- ಕನಕಪುರ ಟೌನ್ನಲ್ಲಿರುವ ಕೆಂಕೇರಮ್ಮ ದೇವಾಲಯ.
11:24 September 04
- ಡಿಕೆಶಿ ಬಂಧನ ಖಂಡಿಸಿ ಕನಕಪುರ ತಾಲೂಕಿನ ಸ್ವಗ್ರಾಮ ದೊಡ್ಡಾಲಹಳ್ಳಿಯ ಕೇಶಮುಂಡನ.
- ಗ್ರಾಮದ ಗವಿಯಣ್ಣ ಮತ್ತು ಚಿಕ್ಕೈದೇಗೌಡ ಅವರಿಂದ ಕೇಶಮುಂಡನ
11:23 September 04
- ಬೆಳ್ಳಂಬೆಳಗ್ಗೆ ಬಸ್ಗೆ ಬೆಂಕಿ, ಕಲ್ಲು ಹೊಡೆಯಲು ಮುಂದಾದ ದುಷ್ಕರ್ಮಿಗಳು.
- ಬಿಜೆಪಿಗೆ ಸೇರಿದ ಪ್ರಮುಖ ಕಚೇರಿಗಳಿಗೆ ಹೆಚ್ಚಿನ ಭದ್ರತೆ.
- ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ನೇತೃತ್ವದಲ್ಲಿ ಬಿಜೆಪಿಯ ಮಲ್ಲೇಶ್ವರಂ ಕಚೇರಿಗೆ ಭದ್ರತೆ.
- ಇಬ್ಬರು ಎಸಿಪಿ, 5 ಇನ್ಸ್ಪೆಕ್ಟರ್, 15 ಎಸ್ಐ, 200 ಪೊಲೀಸ್ ಸಿಬ್ಬಂದಿ, ಎರಡು ಕೆಎಸ್ಆರ್ಪಿ, ಒಂದು ಅಗ್ನಿಶಾಮಕದಳ ವಾಹನ ಸ್ಥಳದಲ್ಲಿ ಮೊಕ್ಕಂ.
10:51 September 04
- ಡಿಕೆಶಿ ಬಂಧನ ಕಾನೂನುಬಾಹಿರ, ಅವರೊಂದಿಗೆ ನಾವಿದ್ದೇವೆ: ಮಾಜಿ ಸಿಎಂ ಸಿದ್ದರಾಮಯ್ಯ
- ನಾಲ್ಕು ದಿನ ವಿಚಾರಣೆ ಮಾಡಿ, ದಸ್ತಗಿರಿ ಮಾಡೋದು ಸರಿಯಲ್ಲ.
- ಕೇಂದ್ರ ಸರ್ಕಾರ ಕಾಂಗ್ರೆಸ್ ಮುಖಂಡರನ್ನು ಟಾರ್ಗೆಟ್ ಮಾಡಿದ್ರೆ, ಕಾಂಗ್ರೆಸ್ ಅದಕ್ಕೆಲ್ಲಾ ಹೆದರಲ್ಲ- ಸಿದ್ದರಾಮಯ್ಯ
- ಕನಕಪುರ ತಾಲೂಕಿನಲ್ಲಿ ಒಂದು ಬಸ್ಗೆ ಬೆಂಕಿ,10 ಬಸ್ಗಳ ಮೇಲೆ ಕಲ್ಲು ತೂರಾಟ. 11 ಕೆಎಸ್ಆರ್ಟಿಸಿ ಬಸ್ ಜಖಂ.
10:26 September 04
- ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳಿಗೆ ಸೂಚನೆ- ಗೃಹ ಸಚಿವ
- ಕೆಲಹೊತ್ತಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಬಸವರಾಜ್ ಬೊಮ್ಮಾಯಿ ಸಭೆ.
- ಶಾಂತಿಯುತ ಪ್ರತಿಭಟನೆ ಮಾಡಲು ಮನವಿ ಮಾಡಿದ ಗೃಹಸಚಿವರು
- ಇಡಿ-ಐಟಿ ದಾಳಿ ರಾಜಕೀಯ ಪ್ರೇರಿತ ಎಂದ್ರೆ ತಪ್ಪಾಗುತ್ತೆ- ಡಿಸಿಎಂ ಗೋವಿಂದ ಕಾರಜೋಳ.
- ರಾಮನಗರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು.
- ಅಮಿತ್ ಶಾ, ಮೋದಿ ಅಣುಕು ಶವಯಾತ್ರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು.
- ಪೊಲೀಸ್ ಐಜಿಪಿ ಶರತ್ ಚಂದ್ರ ಅವರು ಕನಕಪುರಕ್ಕೆ ಪ್ರಯಾಣ.
- ಬೆಂಗಳೂರು -ಮೈಸೂರು ಹೆದ್ದಾರಿ ಮಾರ್ಗವಾಗಿ ಕನಕಪುರಕ್ಕೆ ಪ್ರಯಾಣಿಸಿದ ಐಜಿಪಿ.
- ಕನಕಪುರದಲ್ಲಿ ಪ್ರತಿಭಟನೆ ಬಿಸಿ ಹೆಚ್ಚಾದ ಹಿನ್ನೆಲೆ ಪರಿಸ್ಥಿತಿ ನಿಯಂತ್ರಿಸಲು ಖುದ್ದು ತೆರಳಿದ ಐಜಿಪಿ.
09:39 September 04
ಕಟಕಟೆಯಲ್ಲಿ ಡಿಕೆಶಿ: ಸೆಪ್ಟೆಂಬರ್ 13ರವರೆಗೂ ಇಡಿ ವಶಕ್ಕೆ ನೀಡಿ ಆದೇಶ
- ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ ಹಿನ್ನೆಲೆ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
- ಡಿಕೆಶಿ ತವರು ಜಿಲ್ಲೆಯಾದ ರಾಮನಗರದಲ್ಲಿ ಪರಿಸ್ಥಿತಿ ಉದ್ವಿಗ್ನ.
- ರಾಮನಗರದಲ್ಲಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ.
- ಇಂದಿನಿಂದ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ.
- ಮಂಡ್ಯದ ಮಳವಳ್ಳಿ ತಾಲೂಕಿನ ಹಲಗೂರು, ದಳವಾಯಿ ಕೋಡಿಹಳ್ಳಿಯಲ್ಲಿ ಪ್ರತಿಭಟನೆ.
- ಮೈಸೂರು- ಕನಕಪುರ ಹೆದ್ದಾರಿ ತಡೆದ ಕಾರ್ಯಕರ್ತರು.