ಬೆಂಗಳೂರು:ವಲಸಿಗರ ನೆರವಿಗೆ ಧಾವಿಸಿದ ಕರ್ನಾಟಕದ ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ನಾರಾಯಣಗೌಡ ಅವರಿಗೆ ತ್ರಿಪುರ ಉಪ ಮುಖ್ಯಮಂತ್ರಿ ಜಿಶ್ನು ದೇವ ವರ್ಮ ಮತ್ತು ಅರಣ್ಯ ಇಲಾಖೆ ಸಚಿವ ಮೇವರ್ ಕುಮಾರ್ ಜಮಾತಿಯಾ ಅವರು ಪತ್ರ ಮುಖಾಂತರ ಧನ್ಯವಾದ ತಿಳಿಸಿದ್ದಾರೆ.
ವಲಸಿಗರಿಗೆ ನಾರಾಯಣಗೌಡ ನೆರವು... ಪತ್ರ ಬರೆದು ಅಭಿನಂದನೆ ಸಲ್ಲಿಸಿದ ತ್ರಿಪುರ ಡಿಸಿಎಂ...! - corona lock down
ಲಾಕ್‌ಡೌನ್ ಸಂದರ್ಭದಲ್ಲಿ ಸಚಿವ ನಾರಾಯಣ ಗೌಡ ವಲಸೆ ಕಾರ್ಮಿಕರಿಗೆ ನೆರವು ನೀಡಿದ್ದಲ್ಲದೆ, ಲಾಕ್‌ಡೌನ್ ಬಳಿಕ ತ್ರಿಪುರಕ್ಕೆ ಮರಳಲು ಸಹಾಯಹಸ್ತ ಚಾಚಿದ್ದನ್ನು ಅಲ್ಲಿನ ಡಿಸಿಎಂ ಮತ್ತು ಸಚಿವರು ಸ್ಮರಿಸಿ ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ.

ನಾರಾಯಣಗೌಡ
ಕೊರೊನಾ ಮುಂಜಾಗ್ರತಾ ಕ್ರಮದಿಂದಾಗಿ ಇಡೀ ದೇಶ ಲಾಕ್‌ಡೌನ್ ಆಗಿತ್ತು. ಈ ಕಾರಣದಿಂದ ದೇಶದ ನಾನಾಕಡೆಯಲ್ಲಿ ವಲಸಿಗರು ಸಂಕಷ್ಟಕ್ಕೆ ಸಿಲುಕಿದ್ದರು ಅದರಂತೆ ತ್ರಿಪುರದ ವಲಸಿಗರೂ ಕರ್ನಾಟಕ ರಾಜ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರು.
ಲಾಕ್‌ಡೌನ್ ಸಂದರ್ಭದಲ್ಲಿ ಸಚಿವ ನಾರಾಯಣ ಗೌಡ ವಲಸೆ ಕಾರ್ಮಿಕರಿಗೆ ನೆರವು ನೀಡಿದ್ದಲ್ಲದೆ, ಲಾಕ್‌ಡೌನ್ ಬಳಿಕ ತ್ರಿಪುರಕ್ಕೆ ಮರಳಲು ಸಹಾಯಹಸ್ತ ಚಾಚಿದ್ದನ್ನು ಅಲ್ಲಿನ ಡಿಸಿಎಂ ಮತ್ತು ಸಚಿವರು ಸ್ಮರಿಸಿ ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ.
Last Updated : May 25, 2020, 11:52 AM IST