ಬೆಂಗಳೂರು:ಒಎಲ್‌ಎಕ್ಸ್ ವೆಬ್ಸೈಟ್ನಲ್ಲಿ ಹಾಕಲಾಗಿದ್ದ ಪೋಸ್ಟ್ ನೋಡಿ ಬೈಕ್ ಮಾಲೀಕನಿಗೆ ಕರೆ ಮಾಡಿದ ಚಾಲಾಕಿಯೋರ್ವ ಕರೆಯಿಸಿಕೊಂಡು ಟೆಸ್ಟ್ ಡ್ರೈವ್ ನೆಪದಲ್ಲಿ ಆರೋಪಿಯು ಡಿಕ್ಕಿಯಲ್ಲಿಟ್ಟಿದ್ದ ಒಂದು ರೂಪಾಯಿ ಸಮೇತ ಸ್ಕೂಟರ್ ಕಳ್ಳತನ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಟಾಟಾ ಏಸ್ ವಾಹನ ಚಾಲಕನಾಗಿರುವ ಮಧು ಎಂಬುವರು ನೀಡಿದ ದೂರಿನ ಮೇರೆಗೆ ಅಪರಿಚಿತನ ವಿರುದ್ಧ ಪೀಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ವೃತ್ತಿಯಲ್ಲಿ ಚಾಲಕನಾಗಿರುವ ಮಧು ತನ್ನ ಚಿಕ್ಕಪ್ಪನಿಂದ 1.50 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರು. ಸಾಲ ತೀರಿಸಲು ತನ್ನ ಟಾಟಾ ಏಸ್ ವಾಹನ ಹಾಗೂ ಒಡವೆ ಮಾರಿ ಒಂದು ಲಕ್ಷ ರೂಪಾಯಿ ಹೊಂದಿಸಿದ್ದರು.