ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ವರುಣನ ಆರ್ಭಟ.. ಬಿಎಂಟಿಸಿ ಬಸ್​ ಮೇಲೆ ಬಿದ್ದ ಮರ

ಬೆಂಗಳೂರಿನ ಹಲವೆಡೆ ಭಾರಿ ಮಳೆಯಾಗಿದ್ದು, ಮರಗಳು ಧರೆಗುರುಳಿವೆ. ಹುಬ್ಬಳ್ಳಿಯಲ್ಲಿ ಕೂಡ ಸತತ ಮೂರನೇ ದಿನವೂ ಮಳೆ ಮುಂದುವರೆದಿದೆ.

tree-fell-on-bmtc-bus-after-heavy-rain-in-bengaluru
ಬಿಎಂಟಿಸಿ ಬಸ್​ ಮೇಲೆ ಬಿದ್ದ ಮರ

By

Published : May 6, 2022, 10:48 PM IST

ಬೆಂಗಳೂರು:ನಗರದಲ್ಲಿ ಇಂದು ವರುಣನ ಅಬ್ಬರ ಜೋರಾಗಿದ್ದು, ಗಾಳಿ ಮಳೆಗೆ ಮರವೊಂದು ಬಿಎಂಟಿಸಿ ಬಸ್ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪಾರಾಗಿರುವ ಘಟನೆ ಹೊಸಕೆರೆಹಳ್ಳಿಯ ಪಿಇಎಸ್ ಕಾಲೇಜ್ ರಸ್ತೆಯಲ್ಲಿ ಸಂಜೆ ಸಂಭವಿಸಿದೆ.

ಬಿಎಂಟಿಸಿ ಬಸ್​ ಮೇಲೆ ಬಿದ್ದ ಮರ

ನಾಯಂಡಹಳ್ಳಿ ಕಡೆಗೆ ಬಸ್ ಸಂಚರಿಸುತ್ತಿದ್ದು ಮಳೆ ಕಡಿಮೆ ಇತ್ತು, ಗಾಳಿ ಬಿರುಸಾಗಿ ಬೀಸಿದ್ದರಿಂದ ಮರ ಧರೆಗುರುಳಿದೆ. ಮಳೆಯಿಂದ ಮರವು ವಾಲಿ ವಿದ್ಯುತ್ ಕಂಬಕ್ಕೆ ಹೊಡೆದು ನಂತರ ಬಸ್ ಮೇಲೆ ಬಿದ್ದಿದೆ. ಘಟನೆಯಿಂದ ಬಸ್‌ನ ಮುಂಭಾಗ ಜಖಂಗೊಂಡಿದೆ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಳೆ

ಹುಬ್ಬಳ್ಳಿಯಲ್ಲೂ ಮುಂದುವರೆದ ಮಳೆ:ಕಳೆದ ಎರಡು ದಿನ ಹುಬ್ಬಳ್ಳಿಯಲ್ಲಿ ಆರ್ಭಟಿಸಿದ್ದ ಮಳೆ ಇಂದು ಮೂರನೇ ದಿನವೂ ಮುಂದುವರೆದಿದೆ. ಮಳೆಯಿಂದ ನಗರದತ್ತ ಬಂದಿದ್ದ ಜನರು ಮರಳಿ ಮನೆಗೆ ಹೋಗಲು ಪರದಾಡುವಂತಾಗಿತ್ತು. ಹಲವೆಡೆ ಮರಗಳು ಧರೆಗುರುಳಿದ್ದು, ವಾಹನಗಳು ಜಖಂಗೊಂಡಿವೆ. ಆರಂಭದಲ್ಲಿಯೇ ದೊಡ್ಡ ಪ್ರಮಾಣದ ಗಾಳಿ ಬೀಸಿದ್ದು, ಮಳೆ ಆರಂಭಗೊಂಡ ಹಿನ್ನೆಲೆಯಲ್ಲಿ ಜನ ಮನೆಗಳತ್ತ ಕಾಲ್ಕಿತ್ತಿದ್ದಾರೆ.

ಇದನ್ನೂ ಓದಿ:ರಾಜ್ಯದ ಪ್ರಥಮ ತೇಲುವ ಸೇತುವೆ ಉದ್ಘಾಟನೆ

ABOUT THE AUTHOR

...view details