ಬೆಂಗಳೂರು: ಬೇರೆ ರಾಜ್ಯಗಳಿಂದ ಇಂದು ಬೆಂಗಳೂರಿಗೆ ಬಂದಿರುವ ಪ್ರಯಾಣಿಕರು ಕ್ವಾರಂಟೈನ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಬಿಎಂಟಿಸಿ ಬಸ್ಗಳ ಮೂಲಕ ಗಾಂಧಿನಗರ ಸುತ್ತಮುತ್ತಲಿನಲ್ಲಿ ಕಾಯ್ದಿರಿಸಿಕೊಂಡ ಹೋಟೆಲ್ಗಳಿಗೆ ಶಿಫ್ಟ್ ಮಾಡುವ ಕಾರ್ಯಕ್ಕೆ 300ಕ್ಕಿಂತ ಹೆಚ್ಚು ಪ್ರಯಾಣಿಕರು ವಿರೋಧ ವ್ಯಕ್ತಪಡಿಸಿದ್ದಾರೆ.
ದೂರದಿಂದ ಬಂದಿರುವುದು 14 ದಿನಗಳ ಕಾಲ ಕ್ವಾರಂಟೈನ್ಗೆ ಒಳಗಾಗುವುದಕ್ಕಲ್ಲ. ಬೇಕಾದರೆ ನಮ್ಮನ್ನು ನಮ್ಮ ಮನೆಗಳಿಗೆ ಕಳುಹಿಸಿ 14 ದಿನಗಳ ಕಾಲ ಸುರಕ್ಷಿತವಾಗಿಯೇ ಇರುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಮತ್ತೊಬ್ಬರು ನಮಗೆ ಮೊದಲೇ ಹೇಳಿದ್ದರೆ ನಾವು ಇಲ್ಲಿಗೆ ಬರುತ್ತಿರಲಿಲ್ಲ. ಅಲ್ಲದೇ ಸಾವಿರಾರು ರೂಪಾಯಿ ನೀಡಿ ಕ್ವಾರಂಟೈನ್ನಲ್ಲಿ ಇರುವ ಶಕ್ತಿ ನಮಗಿಲ್ಲ. ಹೀಗಾಗಿ ನಮ್ಮನ್ನು ನಮ್ಮ ಮನೆಗೆ ಕಳುಹಿಸಿ ಎಂದು ಪಟ್ಟು ಹಿಡಿದಿದ್ದಾರೆ. ಬಳಿಕ ಹಿರಿಯ ಅಧಿಕಾರಿಗಳು ಬಂದು ಸಂತೈಸಿ ಕ್ವಾರಂಟೈನ್ಗೆ ಕಳುಹಿಸಿದ್ದಾರೆ.
ಕ್ವಾರಂಟೈನ್ಗೆ ಪ್ರಯಾಣಿಕರ ವಿರೋಧ ನಾನು ತಿಂದರೆ ತಾನೇ ಮಗುವಿಗೆ ಹಾಲು ಕೊಡೋದು
ಮೆಹಬೂಬ್ ನಗರದದಿಂದ ಬಂದ ಮಹಿಳೆ 14 ದಿನಗಳ ಕ್ವಾರಂಟೈನ್ ಒಳಗಾಗುವ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇಲ್ಲಿಗೆ ಬಂದ ನಂತರವಷ್ಟೇ ನಮಗೆ ಕ್ವಾರಂಟೈನ್ನಲ್ಲಿ ಇರಬೇಕು ಅಂತಾ ಹೇಳ್ತಾ ಇದ್ದಾರೆ. ನಮಗೆ ಮೊದಲೇ ತಿಳಿದಿದ್ದರೆ ಇಲ್ಲಿಗೆ ಬರುತ್ತಲೇ ಇರುತ್ತಿರಲಿಲ್ಲ. ನನ್ನ ಮಗುವಿಗೂ ಸರಿಯಾಗಿ ಎದೆ ಹಾಲು ಕೊಡೋಕೆ ಸಾಧ್ಯವಾಗಿಲ್ಲ. ಯಾಕೆಂದರೆ ನಾನು ಊಟ ಮಾಡಿದರೆ ತಾನೇ ಮಗುವಿಗೆ ಹಾಲು ಸಿಗೋದು ಎಂದು ಮಹಿಳೆ ಅಸಹಾಯಕತೆ ವ್ಯಕ್ತಪಡಿಸಿದ್ದಾಳೆ.
ಅಲ್ಲದೆ ರೈಲ್ವೆ ನಿಲ್ಧಾಣದಿಂದ ಚಿಕ್ಕ ಮಗುವೊಂದಿಗೆ ಎಸ್ಕೇಪ್ ಆಗಲು ಯತ್ನಿಸಿದ ದಂಪತಿ ಸಿಕ್ಕಿಹಾಕಿಕೊಂಡಿದ್ದಾರೆ. ದಂಪತಿಗೆ ಹೋಟೆಲ್ಗೆ ಕ್ವಾರಂಟೈನ್ಗೆ ತೆರಳಲು ಬಿಬಿಎಂಪಿ ಸಿಬ್ಬಂದಿ ಸೂಚಿಸಿದ್ದರು. ಆದರೆ, ಹೋಟೆಲ್ಗೆ ತೆರಳಲು ಮನಸ್ಸಿಲ್ಲದೆ ಎಸ್ಕೇಪ್ ಆಗಲು ಯತ್ನಿಸಿ ಹಿಂಬದಿ ಗೇಟ್ನಲ್ಲಿದ್ದ ಬಿಬಿಎಂಪಿ ಸಿಬ್ಬಂದಿ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.