ಬೆಂಗಳೂರು :ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ನಡೆಯುತ್ತಿರುವ ಸಾರಿಗೆ ನೌಕರರ ಪ್ರತಿಭಟನೆ ಇಂದು 5ನೇ ದಿನಕ್ಕೆ ಕಾಲಿಟ್ಟಿದೆ. ಏ.1ರಿಂದ 7ತಾರೀಖಿನವರೆಗೂ ಸಾರಿಗೆ ಕೂಟದಿಂದ ವಿನೂತನ ಧರಣಿ ಮಾಡಬೇಕೆಂದು ಸಾರಿಗೆ ನೌಕರರು ನಿರ್ಧರಿಸಿದ್ದಾರೆ. ಮೊದಲ ದಿನದಿಂದಲೂ ವಿಭಿನ್ನ ರೀತಿನ ಪ್ರತಿಭಟಿಸಿದ್ದಾರೆ.
ರಾಜ್ಯಾದ್ಯಂತ ಕರಪತ್ರಗಳ ಹಂಚುವ ಮೂಲಕ ಸಾರಿಗೆ ನೌಕರರು ಇಂದು ಧರಣಿ ನಡೆಸಿದ್ದಾರೆ. 6ನೇ ವೇತನ ಆಯೋಗ ಜಾರಿ ಮಾಡಿ ಎಂದು ಸಿಬ್ಬಂದಿ ಭಿತ್ತಿಪತ್ರ ಹಂಚಿ, ಈ ಮೂಲಕ ಸರ್ಕಾರಕ್ಕೆ ತಮ್ಮ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು.
ಸಾರಿಗೆ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಈ ಎಲ್ಲಾ ಪ್ರತಿಭಟನೆ ನಡೆಯುತ್ತಿವೆ. ರಾಜ್ಯದ ನಾನಾ ಭಾಗಗಳಲ್ಲಿ 4 ಸಾರಿಗೆ ನಿಗಮಗಳ ನೌಕರರಿಂದ ಇದೆ ಮಾದರಿ ಇಂದು ಪ್ರತಿಭಟಿಸಲಾಗಿದೆ.