ಬೆಂಗಳೂರು: ಕಳೆದ 6 ದಿನಗಳಿಂದ ಸಾರಿಗೆ ನೌಕರರು ತಮ್ಮ ಬೇಡಿಕೆಗಳನ್ನ ಈಡೇರಿಸುವಂತೆ ಮುಷ್ಕರ ನಡೆಸುತ್ತಿದ್ದಾರೆ. ಇದೀಗ ನೌಕರರಿಗೆ ಸರ್ಕಾರ ನೀಡಿರುವ ಭರವಸೆ ಈಡೇರಿಸುವಂತೆ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ನೀಡಿದ ಭರವಸೆ ಈಡೇರಿಸಿ: ಮುಖ್ಯಮಂತ್ರಿಗೆ ಪತ್ರ ಬರೆದ ಸಾರಿಗೆ ನೌಕರರು - ನೀಡಿದ ಭರವಸೆ ಈಡೇರಿಸಿ,
ಸಾರಿಗೆ ನೌಕರರು ತಮ್ಮ ಬೇಡಿಕೆಗಳನ್ನ ಈಡೇರಿಸುವಂತೆ ಅದರಲ್ಲೂ ಮುಖ್ಯವಾಗಿ 6ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
6ನೇ ವೇತನ ಆಯೋಗದ ಶಿಪಾರಸ್ಸಿನ ಅನ್ವಯ ಸಂಬಳ ನೀಡುವಂತೆ ನೌಕರರು ಪತ್ರ ಬರೆದಿದ್ದಾರೆ. ಕಳೆದ ಡಿಸೆಂಬರ್ನಲ್ಲಿ 4 ದಿನಗಳ ಕಾಲ ಮುಷ್ಕರ ನಡೆಸಿದ್ದೆವು. 10 ಬೇಡಿಕೆಗಳಲ್ಲಿ ಸರ್ಕಾರಿ ನೌಕರರನ್ನಾಗಿ ಮಾಡುವ ಬೇಡಿಕೆ ಹೊರತುಪಡಿಸಿ. ಇನ್ನುಳಿದ 8 ಬೇಡಿಕೆಗಳನ್ನ ಈಡೇರಿಸುವ ಭರವಸೆ ಸರ್ಕಾರ ನೀಡಿತ್ತು. ಆದ್ರೆ ಭರವಸೆ ನೀಡಿ 3 ತಿಂಗಳು ಕಳೆದ್ರು ಸರಿಯಾಗಿ ಬೇಡಿಕೆ ಈಡೇರಿಸಿಲ್ಲ. ಈ ಕೂಡಲೇ ಆರನೇ ವೇತನ ಆಯೋಗದ ಶಿಪಾರಸನ್ನು ಜಾರಿಗೆ ತರಬೇಕು ಜೊತೆಗೆ 8 ಬೇಡಿಕೆಗಳನ್ನ ನೌಕರರಿಗೆ ಅನುಕೂಲವಾಗುವಂತೆ ಸರಿಪಡಿಸುವಂತೆ ಸಿಎಂ ಬಿ ಎಸ್ ಯಡಿಯೂರಪ್ಪಗೆ ನೌಕರರು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಬಳ್ಳಾರಿಯಲ್ಲಿ ಸಾರಿಗೆ ನೌಕರರ ವಿನೂತನ ಪ್ರತಿಭಟನೆ ಹಿನ್ನೆಲೆ ನಿಷೇಧಾಜ್ಞೆ ಜಾರಿ