ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಇಂದಿನಿಂದ ಲಾಕ್ಡೌನ್ 4.0 ಜಾರಿಯಾಗಿದೆ. ಕೇಂದ್ರ ಸರ್ಕಾರ ಮಾರ್ಗಸೂಚಿ ಅನ್ವಯ, ರಾಜ್ಯದಲ್ಲಿ ನಾಳೆಯಿಂದ ಹಲವು ಷರತ್ತುಗಳ ವಿಧಿಸಿ ಸಾರ್ವಜನಿಕ ಸಾರಿಗೆ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ನಾಳೆ ಬೆಳಗ್ಗೆಯಿಂದ ಸಾರಿಗೆ ಸಂಚಾರ ನಡೆಸೋಕೆ ಸಾರಿಗೆ ನಿಗಮಗಳು ಸಕಲ ಸಿದ್ಧತೆ ನಡೆಸಿದ್ದು, ರೆಡ್ ಝೋನ್ ಮತ್ತು ಕಂಟೈನ್ಮೆಂಟ್ ಝೋನ್ನಲ್ಲಿ ಬಸ್ಗೆ ನಿರ್ಬಂಧ ಹಾಕಲಾಗಿದೆ. ಕಳೆದ 54 ದಿನಗಳ ಬಳಿಕ ರಾಜ್ಯದಲ್ಲಿ ಸಾರ್ವಜನಿಕ ಸಾರಿಗೆ ಪುನಾರಂಭ ಆಗುತ್ತಿದೆ. ಸರ್ಕಾರ ನೀಡಿರುವ ಮಾರ್ಗಸೂಚಿ ಅನ್ವಯ, ಹಲವು ಷರತ್ತುಗಳ ಮೇಲೆ ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಂ.ಟಿ.ಸಿ ಬಸ್ ಸಂಚಾರ ನಾಳೆ ಬೆಳಗ್ಗೆ 7 ರಿಂದ ಸಂಜೆ 7 ವರೆಗೆ ಕಾರ್ಯಾಚರಣೆ ಮಾಡಲಿದೆ. ಅದು ಕೂಡ ಕೇವಲ ರಾಜ್ಯದ ಒಳಗೆ ಮಾತ್ರ. ಹೊಸ ಮಾರ್ಗಸೂಚಿ ಅನ್ವಯ ಬಿ.ಎಂ.ಟಿ.ಸಿ, ಕೆ.ಎಸ್.ಆರ್.ಟಿ.ಸಿ, ನೈರುತ್ಯ, ಈಶಾನ್ಯ ಸಾರಿಗೆ ಸಂಸ್ಥೆ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ ಖಾಸಗಿ ಬಸ್ಗಳ ಓಡಾಟಕ್ಕೂ ಅನುಮತಿ ಸಹ ನೀಡಲಾಗಿದೆ.
ಯಾವೆಲ್ಲ ಬಸ್ಗಳ ಸಂಚಾರ ಇರಲಿದೆ:
ಕೆ.ಎಸ್.ಆರ್.ಟಿ.ಸಿ ಕರ್ನಾಟಕ ಸಾರಿಗೆ ಹಾಗೂ ರಾಜಹಂಸ ಬಸ್ ಮಾತ್ರ ಓಡಾಡಲು ಅವಕಾಶ ಕಲ್ಪಿಸಲಾಗಿದೆ. ಎಸಿ ಸ್ಲೀಪರ್- ನಾನ್ ಎಸಿ ಸ್ಲೀಪರ್ ಬಸ್ಗಳ ಓಡಾಟ ಇರುವುದಿಲ್ಲ. ಬೇಡಿಕೆಗೆ ತಕ್ಕಂತೆ ಕೆ.ಎಸ್.ಆರ್.ಟಿ.ಸಿ ಬಸ್ಗಳು ಸಂಚಾರ ಮಾಡಲಿವೆ. ಇನ್ನು ಬೆಂಗಳೂರಿನಲ್ಲಿ 2000 ಬಿಎಂಟಿಸಿ ಬಸ್ಗಳು ಮಾತ್ರ ಓಡಾಟ ಮಾಡಲಿವೆ. ಒಂದು ಬಸ್ನಲ್ಲಿ 30 ಪ್ರಯಾಣಿಕರಿಗೆ ಮಾತ್ರ ಕೂರಲು ಅವಕಾಶ ಕಲ್ಪಿಸಲಾಗಿದೆ.
ಬಸ್ನಲ್ಲಿ ಯಾರಿಗೆಲ್ಲ ನಿರ್ಬಂಧ:
ಬಸ್ನಲ್ಲಿ ಸಾಮಾಜಿಕ ಅಂತರ ಕಡ್ಡಾಯ ಪಾಲಿಸಲೇಬೇಕು. ಇದಕ್ಕಾಗಿ ಈಗಾಗಲೇ ಎಲ್ಲ ನಿಲ್ದಾಣಗಳಲ್ಲಿ ಅಂತರ ಬಾಕ್ಸ್ಗಳನ್ನ ಹಾಕಲಾಗಿದೆ. ಕಂಡಕ್ಟರ್ ಹಾಗೂ ಡ್ರೈವರ್ ಮಾಸ್ಕ್ ಧರಿಸಿ ಕರ್ತವ್ಯ ಮಾಡಬೇಕು. ಮಾರ್ಗ ಮಧ್ಯೆ ಪ್ರಯಾಣಿಕರನ್ನ ಹತ್ತಿಸಿಕೊಳ್ಳಬಾರದು. 65 ವರ್ಷ ಮೇಲ್ಟಟ್ಟವರು, ಗರ್ಭಿಣಿ, ಹಾಗೂ ಮಕ್ಕಳಿಗೆ ಬಸ್ ಪ್ರಯಾಣ ನಿರ್ಬಂಧ ಹೇರಲಾಗಿದೆ. ಸಾರಿಗೆ ನೌಕರರು ಯಾವುದೇ ವ್ಯಕ್ತಿಯೊಂದಿಗೆ ವ್ಯವಹಾರಿಸುವಾಗ ಆರು ಅಡಿ ಸಾಮಾಜಿಕ ಅಂತರ ಕಡ್ಡಾಯ ಮಾಡಲಾಗಿದೆ.
ಸಿಬ್ಬಂದಿ ವೈಯಕ್ತಿಕ ಶುಚಿತ್ವಕ್ಕೆ ಆದ್ಯತೆ: