ಕರ್ನಾಟಕ

karnataka

ನೇರವಾಗಿ ನೌಕರರ‌ ಮೇಲೆ ಕಾನೂನು ಕ್ರಮಕ್ಕೆ ಮುಂದಾದ ಬಿಎಂಟಿಸಿ!

By

Published : Apr 15, 2021, 4:23 AM IST

ತರಬೇತಿ ನೌಕರರಾಯ್ತು, ಈಗ ನೇರವಾಗಿ ನೌಕರರ‌ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಬಿಎಂಟಿಸಿ ಮುಂದಾಗಿದೆ.

Transport strike, Transport strike news, Transport strike update, Now BMTC direct action on Employees, Now BMTC direct action on Employees news, ಸಾರಿಗೆ ಮುಷ್ಕರ, ಸಾರಿಗೆ ಮುಷ್ಕರ ಸುದ್ದಿ, ಸಾರಿಗೆ ಮುಷ್ಕರ ಅಪ್​ಡೇಟ್​, ನೌಕರರ‌ ಮೇಲೆ ಕಾನೂನು ಕ್ರಮ, ಬಿಎಂಟಿಸಿ ನೌಕರರ‌ ಮೇಲೆ ಕಾನೂನು ಕ್ರಮ,
ನೇರವಾಗಿ ನೌಕರರ‌ ಮೇಲೆ ಕಾನೂನು ಕ್ರಮಕ್ಕೆ ಮುಂದಾದ ಬಿಎಂಟಿಸಿ

ಬೆಂಗಳೂರು :ಕಳೆದ 8 ದಿನಗಳಿಂದ ಸಾರಿಗೆ ನೌಕರರು ತಮ್ಮ‌ ಬೇಡಿಕೆ‌ ಈಡೇರಿಸುವಂತೆ ಮುಷ್ಕರ ನಡೆಸಿದ್ದಾರೆ. ಇದರ ಬೆನ್ನಲ್ಲೆ ನೌಕರರಿಗೆ ಬಿಸಿ ಮುಟ್ಟಿಸಲು ಸಾರಿಗೆ ಇಲಾಖೆ ನೌಕರರ ಮೇಲೆ‌ ಕ್ರಮಕೈಗೊಳ್ಳುತ್ತಿದ್ದಾರೆ. ಇದೀಗ ತರಬೇತಿ ನೌಕರರಾಯ್ತು ಈಗ ನೇರವಾಗಿ ನೌಕರರ‌ ಮೇಲೆ ಕಾನೂನು ಕ್ರಮಕ್ಕೆ ತೆಗೆದುಕೊಳ್ಳಲು ಬಿಎಂಟಿಸಿ ಮುಂದಾಗಿದೆ.

ನೌಕರರ ಮೇಲೆ ಕಾನುನು ಅಸ್ತ್ರ ಪ್ರಯೋಗಕ್ಕೆ ಬಿಎಂಟಿಸಿ ಮುಂದಾಗಿದೆ. ಮುಷ್ಕರದ ವೇಳೆ ಗೈರಾದವರನ್ನ ಇಲಾಖೆ‌ ಅಮಾನತ್ತುಗೊಳಿಸಿದೆ. 221 ಜನ ನೌಕರರನ್ನ ಅಮಾನತ್ತುಗೊಳಿಸುವಂತೆ ಬಿಎಂಟಿಸಿ ಆದೇಶ ಹೊರಡಿಸಿದೆ.

ಸಾರಿಗೆ ಸಾರ್ವಜನಿಕರ ಉಪಯುಕ್ತ ಸೇವೆ ವತಿಯಿಂದ ಮುಷ್ಕರದಿಂದಾಗಿ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ. ನೌಕರರು ಅನಾಧಿಕೃತವಾಗಿ ಮುಷ್ಕರದಲ್ಲಿ ಪಾಲ್ಗೊಂಡ ಕೆಲಸಕ್ಕೆ ಗೈರಾಗಿದ್ದಾರೆ. ಆದ್ರಿಂದ ನೌಕರರು ಇಂದು ಸಂಜೆಯೊಳಗೆ ಸಂಬಂಧಪಟ್ಟ ಡಿಪೋಗಳಿಗೆ ಭೇಟಿ ನೀಡಿ, ಗೈರು ಹಾಜರಾತಿಗೆ ಬಗ್ಗೆ ಲಿಖಿತ ಸಮಜಾಯಿಷಿ ನೀಡಬೇಕು. ಇಲ್ಲವಾದಲ್ಲಿ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ನೌಕರರಿಗೆ ಬಿಎಂಟಿಸಿ ಸೂಚನಾ ಪತ್ರ ನೀಡಿದೆ.

ABOUT THE AUTHOR

...view details