ಕರ್ನಾಟಕ

karnataka

ಸಾರಿಗೆ ನೌಕರರ ಮೇಲೆ ಮತ್ತೆ ಸಮರ ಸಾರಿದ ಬಿಎಂಟಿಸಿ!

By

Published : Apr 18, 2021, 5:17 AM IST

ಸಾರಿಗೆ ನೌಕರರ ಮೇಲೆ ಸಮರ ಸಾರಿರುವ ಬಿಎಂಟಿಸಿ ಮತ್ತೆ ನೌಕರರನ್ನು ಅಮಾನತುಗೊಳಿಸಿ ಆದೇಶಿಸಿದೆ.

again employees suspended, again employees suspended by BMTC, Transport strike, Transport strike news, ಮತ್ತೆ ನೌಕಕರ ಅಮಾನತು, ಮತ್ತೆ ನೌಕಕರ ಅಮಾನತು ಮಾಡಿದ ಬಿಎಂಟಿಸಿ, ಸಾರಿಗೆ ಮುಷ್ಕರ, ಸಾರಿಗೆ ಮುಷ್ಕರ ಸುದ್ದಿ,
ಸಾರಿಗೆ ನೌಕರರ ಮೇಲೆ ಸಮರ ಸಾರಿದ ಬಿಎಂಟಿಸಿ

ಬೆಂಗಳೂರು : ಕರ್ತವ್ಯಕ್ಕೆ ಬಾರದ ಸಿಬ್ಬಂದಿ ಮೇಲೆ ಬಿಎಂಟಿಸಿ ಮತ್ತೊಮ್ಮೆ ಸಮರ‌ ಸಾರಿದ್ದು, ಶನಿವಾರ ಏಕಾಏಕಿ 2,443 ನೌಕರರನ್ನ ಅಮಾನತು ಮಾಡುವುದಾಗಿ ಆದೇಶ ಹೊರಡಿಸಿದೆ.

ಇನ್ನು ನೌಕರರು ಸೋಮವಾರದೊಳಗೆ ಉತ್ತರ ನೀಡುವಂತೆ ಬಿಎಂಟಿಸಿ ಸೂಚನೆ ನೀಡಿದ್ದು, ಸೋಮವಾರ ಕರ್ತವ್ಯಕ್ಕೆ ಹಾಜರಾಗಿ ಲಿಖಿತ ಉತ್ತರ ನೀಡಬೇಕು. ಇಲ್ಲವಾದರೆ ವಜಾ ಮಾಡುವ ಎಚ್ಚರಿಕೆ ನೀಡಿದೆ. ಮುಷ್ಕರ ನಿಷೇಧದ ನಡುವೆಯೂ ಗೈರಾದ ನೌಕರರ‌ ಮೇಲೆ ಬಿಎಂಟಿಸಿ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತೆ.

ಇದೂವರೆಗೂ ಕರ್ತವ್ಯಕ್ಕೆ ಬಾರದ ನೌಕರರ ಮೇಲೆ ಬಿಎಂಟಿಸಿ ತೆಗೆದುಕೊಂಡ ಶಿಸ್ತಿನ ಅಸ್ತ್ರ

  • 8 ಏಪ್ರಿಲ್ - 96 ನೌಕರರ ವಜಾ
  • 9 ಏಪ್ರಿಲ್ - 120 ನೌಕರರು ವಜಾ
  • 10 ಏಪ್ರಿಲ್ - 118 ನೌಕರರ ವಜಾ
  • 11 ಏಪ್ರಿಲ್ 122 ನೌಕರರ ವಜಾ
  • 14 ಏಪ್ರಿಲ್ 221 ನೌಕರರ ಅಮಾನತು
  • 15 ಏಪ್ರಿಲ್ 213ನೌಕರರ ಅಮಾನತು
  • 16 ಏಪ್ರಿಲ್ 2443 ನೌಕರರ ಅಮಾನತು

ಒಟ್ಟು 456 ಸಿಬ್ಬಂದಿ ವಜಾ ಮತ್ತು 2,877 ಸಿಬ್ಬಂದಿ ಮೇಲೆ ಅಮಾನತು ಅಸ್ತ್ರ ಪ್ರಯೋಗವನ್ನ ಬಿಎಂಟಿಸಿ ಮಾಡಿದೆ. ಕರ್ತವ್ಯಕ್ಕೆ ಬಾರದ ಸಿಬ್ಬಂದಿಗಳ ಮೇಲೆ ಸೇಡಿನ ಕ್ರಮಕೈಗೊಂಡಿದೆ.

ABOUT THE AUTHOR

...view details