ಬೆಂಗಳೂರು : ಉತ್ತರ ಕರ್ನಾಟಕದಲ್ಲಿ ಭಾರೀ ಮಳೆ-ಪ್ರವಾಹ ಹಿನ್ನೆಲೆ ಕೆ ಎಸ್ ಆರ್ ಟಿ ಬಸ್ನಲ್ಲಿ ಪರಿಹಾರ ಸಾಮಗ್ರಿ ಸಾಗಣೆ ಉಚಿತವಾಗಿ ಸಾಗಿಸಬಹುದು ಎಂದು ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ. ಸಾಮಗ್ರಿ ಸಾಗಿಸಲು ಲಗೇಜ್ ದರ ಪಡೆಯದಂತೆ ಸಿಬ್ಬಂದಿಗೆ ಎಂಡಿ ಶಿವಯೋಗಿ ಕಳಸದ್ ಸೂಚನೆ ನೀಡಿದ್ದಾರೆ.
ಉ.ಕ ಪ್ರವಾಹ ಎಫೆಕ್ಟ್ : ಕೆಎಸ್ ಆರ್ ಟಿಸಿ ಬಸ್ನಲ್ಲಿ ಪರಿಹಾರ ಸಾಮಗ್ರಿ ಸಾಗಣೆ ಉಚಿತ - KRSTC department
ಸಂತ್ರಸ್ಥರಿಗೆ ನೀಡುವ ಪರಿಹಾರ ಸಾಮಗ್ರಿಗಳನ್ನು ಸಾಗಣೆ ಮಾಡಲು ಕೆಎಸ್ಆರ್ಟಿಸಿ ಇಲಾಖೆಯಿಂದ ಉಚಿತವಾಗಿ ಬಸ್ನಲ್ಲಿ ಅವಕಾಶ ನೀಡಿದ್ದಾಗಿ ನಿಗಮ ಮಂಡಳಿಯ ಎಂ ಡಿ ಶಿವಯೋಗಿ ಕಳಸದ್ ತಿಳಿಸಿದ್ದಾರೆ.
ಕೆಎಸ್ ಆರ್ ಟಿಸಿ ಬಸ್
ಇನ್ನು ಪರಿಹಾರ ಕಾರ್ಯ ಒದಗಿಸಲು ನಿಗಮದಿಂದ ತಂಡ ರಚನೆ ಮಾಡಿದ್ದು ಅದರಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ನಿಯೋಜನೆ ಮಾಡಲಾಗಿದೆ. ಪರಿಹಾರ ಕಾರ್ಯಗಳಿಗಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದ್ದು, ಸಂತ್ರಸ್ಥರನ್ನ ಸುರಕ್ಷಿತ ಸ್ಥಳಕ್ಕೆ ತಲುಪಿಸಲು ಬಸ್ ವ್ಯವಸ್ಥೆಗೆ ಸೂಚನೆ ನೀಡಲಾಗಿದೆ.