ಕರ್ನಾಟಕ

karnataka

ETV Bharat / state

ಬಿಎಂಟಿಸಿಗೆ 25 ವರ್ಷ! '98 ಬಸ್​ಗಳಿಂದ ಆರಂಭವಾದ ಸಂಸ್ಥೆ ಈಗ ಹೆಮ್ಮರ': ಸಚಿವ ರಾಮಲಿಂಗಾರೆಡ್ಡಿ

98 ಬಸ್ಸಿನಿಂದ ಆರಂಭವಾದ ಬಿಎಂಟಿಸಿ ಇಂದು ಹೆಮ್ಮರವಾಗಿ ಬೆಳೆದಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

By ETV Bharat Karnataka Team

Published : Sep 26, 2023, 8:25 AM IST

BMTC SILVER JUBILEE
ಬಿಎಂಟಿಸಿ ರಜತ ಮಹೋತ್ಸವ

ಬೆಂಗಳೂರು: ಬಿಎಂಟಿಸಿಗೆ 25 ವರ್ಷಗಳಾಗಿವೆ. ಮೊದಲಿಗೆ ಕೇವಲ 98 ಬಸ್ಸಿನಿಂದ ಕಾರ್ಯಾಚರಣೆ ಆರಂಭವಾಗಿತ್ತು. ಆ ವೇಳೆ ಬೆಂಗಳೂರು ಚಿಕ್ಕದಾಗಿತ್ತು. ಸಾರಿಗೆ ಅಗತ್ಯವೂ ಕೂಡ ಕಡಿಮೆಯಿತ್ತು. ಆದರೆ ಈಗ ನಗರ ಬಹುದೊಡ್ಡದಾಗಿದೆ. ಸಾರಿಗೆ ಸಂಸ್ಥೆ ಕೂಡ ಹೆಮ್ಮರವಾಗಿ ಬೆಳೆದುನಿಂತಿದೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳಿದರು.

ಬಿಎಂಟಿಸಿ ರಜತ ಮಹೋತ್ಸವ

ನಗರದ ಸೆಂಟ್ರಲ್ ‌ಕಾಲೇಜಿನ ಜ್ಞಾನಜ್ಯೋತಿ‌ ಸಭಾಂಗಣದಲ್ಲಿ ಆಯೋಜಿಸಿದ್ದ ಬಿಎಂ‌‌‌‌ಟಿ‌‌ಸಿ ರಜತ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸದ್ಯ ದೇಶಕ್ಕೆ ಮಾದರಿಯಾಗಿರುವ ಬಿಎಂಟಿಸಿ ಸಂಸ್ಥೆಗೆ ಇನ್ನಷ್ಟು ಉತ್ತಮ ಸಕಾರ ಅಗತ್ಯವಾಗಿದೆ. ಸಂಸ್ಥೆಯನ್ನು ಇನ್ನಷ್ಟು ಬೆಳೆಸಲು ಪ್ರತಿಯೊಬ್ಬ ನೌಕರರ ಸಹಕಾರ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಬಿಎಂಟಿಸಿ ರಜತ ಮಹೋತ್ಸವ

ಕೆಎಸ್​ಆರ್​ಟಿಸಿಯ ನೌಕರರಿಗೆ 1 ಕೋಟಿ ರೂ ವಿಮೆ ನೀಡಲಾಗುತ್ತಿದೆ. ಇದನ್ನು ಬಿಎಂಟಿಸಿಗೆ ಕೂಡ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಮಜೆಸ್ಟಿಕ್‌ನಲ್ಲಿ ಕ್ಯಾಂಟಿನ್‌ ವ್ಯವಸ್ಥೆಯಿರಲಿಲ್ಲ, ದೊಡ್ಡದಾದ ಬಿಎಂಟಿಸಿ ಕ್ಯಾಂಟಿನ್ ತೆರೆಯಲಾಗುತ್ತಿದೆ ಎಂದು ತಿಳಿಸಿದರು. ನಮ್ಮ ಹೆಮ್ಮೆಯ ಸಾರಿಗೆ ಸಂಸ್ಥೆಗಳಿಗೆ ಅರ್ಹತೆಯಿದ್ದರೂ, ಯಾವುದೇ ಸ್ಪರ್ಧೆಗಳಿಗೆ ಭಾಗವಹಿಸದಿರುವುದು ನನಗೆ ಬೇಸರ ತಂದಿತ್ತು. ಹಾಗಾಗಿ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದ್ದೆ. ಕಳೆದ 4 ತಿಂಗಳಲ್ಲಿ 36 ಪ್ರಶಸ್ತಿ ಬಂದಿದ್ದು, ಇದಕ್ಕೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರು ಕಾರಣಕರ್ತರು ಎಂದು ಶ್ಲಾಘಿಸಿದರು.

ಬಿಎಂಟಿಸಿ ರಜತ ಮಹೋತ್ಸವ

ಬೆಂಗಳೂರಿನಲ್ಲಿ ಬಿಎಂಟಿಸಿಯ ಸೇವೆ ಇಲ್ಲದಾದರೆ ನಗರದ ಜೀವನವೂ ಮುಗಿದಂತೆ ಎಂದು ಜಯದೇವ ಹೃದ್ರೋಗ, ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳಿದರು. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಬಿಎಂಟಿಸಿಗೆ ಅವಿನಾಭಾವ ಸಂಬಂಧವಿದ್ದು, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಒಂದು ಕೋಟಿ ರೂ.ಯನ್ನು ನಮ್ಮ ಸಂಸ್ಥೆಗೆ ದೇಣಿಗೆ ನೀಡಿದ್ದಾರೆ ಎಂದು ಹೇಳಿದರು.

ಬಿಎಂಟಿಸಿ ರಜತ ಮಹೋತ್ಸವ

ನಂಬಿಕಸ್ಥರು ಮೋಸ ಮಾಡಿದರೆ ಮನಸಿಗೆ ನೋವಾಗುತ್ತದೆ. ಹಾಗೆಯೇ ಪ್ರಯಾಣಿಸುವಾಗ ಅಜಾಗರೂಕತೆಯಿದ್ದರೆ ರಸ್ತೆ ಅಪಘಾತವಾಗುತ್ತದೆ. ರಕ್ತನಾಳ ಬ್ಲಾಕ್ ಆದರೆ ಹೃದಯಾಘಾತವಾಗುತ್ತದೆ. ಬೆಂಗಳೂರಿನಲ್ಲಿ ಬಿಎಂಟಿಸಿಯ ಸೇವೆ ಇಲ್ಲದಾದರೆ ನಗರದ ಜೀವನವು ಮುಗಿದಂತೆ ಎಂದು ಅಭಿಪ್ರಾಯಪಟ್ಟರು.

ಬಿಎಂಟಿಸಿ ರಜತ ಮಹೋತ್ಸವ

ನಗರದಲ್ಲಿ ಶೇ.60ರಷ್ಟು ಮಂದಿ ವಿವಿಧ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸದ್ಯದ ಜೀವನ ಶೈಲಿ. ಅದರಲ್ಲಿ ಪ್ರಮುಖವಾಗಿ 45 ರಿಂದ 50 ವರ್ಷದೊಳಗಿನವರಲ್ಲಿ ಹೆಚ್ಚಾಗಿ ಹೃದಯಾಘಾತವಾಗುತ್ತಿದೆ. ಅದರಲ್ಲಿ ಶೇ.8ರಷ್ಟು ಮಹಿಳೆಯರಿದ್ದಾರೆ. ಯಾಕೆಂದರೆ ಅವರು ತಮ್ಮ ಮಕ್ಕಳ ವಿದ್ಯಾಭ್ಯಾಸ ಮತ್ತು ಅವರ ಭವಿಷ್ಯಕ್ಕಾಗಿ ಹೆಚ್ಚು ಚಿಂತೆ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ಕೆಎಸ್ಆರ್​​ಟಿಸಿಗೆ 9, ಬಿಎಂಟಿಸಿಗೆ 4 ವರ್ಗಗಳಲ್ಲಿ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ ರಾಷ್ಟ್ರೀಯ ಪ್ರಶಸ್ತಿ

ABOUT THE AUTHOR

...view details