ಬೆಂಗಳೂರು:ರಾಜ್ಯ ರಸ್ತೆ ಸಾರಿಗೆ ನಿಗಮದ ಪ್ರಮುಖ ಸಂಸ್ಥೆಯಾಗಿರುವ ಬಿಎಂಟಿಸಿ ಡೀಸೆಲ್ ಕೊರತೆ ಎದುರಿಸುತ್ತಿರುವುದು ವಿಪರ್ಯಾಸ. ಸಂಸ್ಥೆಯನ್ನು ಈ ಸ್ಥಿತಿಗೆ ತಂದಿರುವ ಸಾರಿಗೆ ಸಚಿವರನ್ನು ಸನ್ಮಾನಿಸಬೇಕು. ರಾಜ್ಯದ ಸಾರಿಗೆ ವ್ಯವಸ್ಥೆಯ ಇತಿಹಾಸದಲ್ಲೇ ಡೀಸೆಲ್ ಇಲ್ಲದೆ ಬಸ್ಗಳು ನಿಲ್ಲುವ ಸ್ಥಿತಿ ಒದಗಿದ್ದು, ಇದೇ ಮೊದಲ ಬಾರಿ. ತೈಲ ಕಂಪನಿಗಳ ಎದುರು ಹೆದರಿ ಕುಳಿತಿರುವ ಸರ್ಕಾರದ ಅಸಾಮರ್ಥ್ಯಕ್ಕೆ ಜನತೆ ಹಾಗೂ ಬಿಎಂಟಿಸಿ ಸಂಕಷ್ಟ ಎದುರಿಸಬೇಕಾಗಿದೆ ಎಂದು ರಾಜ್ಯ ಕಾಂಗ್ರೆಸ್ ಲೇವಡಿ ಮಾಡಿದೆ.
ತುಘಲಕ್ ದರ್ಬಾರ್:ಲಜ್ಜೆಗೇಡಿ ಬಿಜೆಪಿ ಎಂಬ ಟ್ಯಾಗ್ ಲೈನ್‌ನಡಿ ಮತ್ತೊಂದು ಟ್ವೀಟ್ ಮಾಡಿರುವ ಕಾಂಗ್ರೆಸ್, ಪರಿಷ್ಕೃತ ಪಠ್ಯಪುಸ್ತಕಗಳನ್ನು ಸಮರ್ಥಿಸುತ್ತಿದ್ದ ಸರ್ಕಾರ ಮತ್ತೊಮ್ಮೆ ಲೋಪ ಸರಿಪಡಿಸಿದ ಮತ್ತೊಂದು ಹೆಚ್ಚುವರಿ ಪುಸ್ತಕ ಹಂಚುತ್ತೇವೆ ಎಂದಿರುವುದು ತುಘಲಕ್ ದರ್ಬಾರಿನಂತಿದೆ. ಇಂತದ್ದೊಂದು ನಾಚಿಕೆಗೇಡಿನ ಬೆಳವಣಿಗೆಗೆ ಸಿಎಂ ತಲೆತಗ್ಗಿಸಿ ಕ್ಷಮೆ ಕೇಳಬೇಕು. ಶಿಕ್ಷಣ ಸಚಿವರು ರಾಜೀನಾಮೆ ಕೊಟ್ಟು ಹೊರಡಬೇಕು ಎಂದು ಒತ್ತಾಯಿಸಿದೆ.