ಕರ್ನಾಟಕ

karnataka

ETV Bharat / state

ಸಾರಿಗೆ ನೌಕರರ ಪ್ರತಿಭಟನೆ: ಆಸಗ್ಟ್ 10 ರಂದು ಸಾರಿಗೆ ವ್ಯತ್ಯಯ ಸಾಧ್ಯತೆ - Benglure protest news

ಕೊರೊನಾ ಸೋಂಕಿನಿಂದ ನಿಧನರಾದವರಿಗೆ 50 ಲಕ್ಷ ರೂ. ಪರಿಹಾರ ನೀಡಬೇಕು, ನೌಕರರಿಗೆ ಪಿಪಿಇ ಕಿಟ್ ಒದಗಿಸಬೇಕು‌ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಸಾರಿಗೆ ನೌಕರರು ಆಗಸ್ಟ್ 10 ರಂದು ರಾಜ್ಯ ವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದಾರೆ.

Benglure
Benglure

By

Published : Aug 7, 2020, 11:23 AM IST

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಆಗಸ್ಟ್ 10 ರಂದು ರಾಜ್ಯ ವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದಾರೆ.

ಸಾರಿಗೆ ವಿಭಾಗೀಯ ಕಚೇರಿ ಹಾಗೂ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದು, ಅಂದು ಬಿಎಂಟಿಸಿ, ಕೆ ಎಸ್ ಆರ್ ಟಿ ಸಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಸಾರಿಗೆ ನೌಕರರ ಬೇಡಿಕೆಗಳು:

ಕೊರೊನಾ ಸೋಂಕಿನಿಂದ ನಿಧನರಾದವರಿಗೆ 50 ಲಕ್ಷ ರೂ. ಪರಿಹಾರ ನೀಡಬೇಕು. ನೌಕರರಿಗೆ ಪಿಪಿಇ ಕಿಟ್ ಒದಗಿಸಬೇಕು. ಕಾರ್ಮಿಕರಿಗೆ ನಿಗದಿತ ಅವಧಿಯೊಳಗೆ ವೇತನ ಪಾವತಿ ಆಗಬೇಕು. ಸಿಬ್ಬಂದಿಗೆ ತುಟ್ಟಿ ಭತ್ಯೆ ಮತ್ತು ಪ್ರತಿ ಸಾರಿಗೆ ನಿಗಮಕ್ಕೆ 500 ಕೋಟಿ ಸಂಕಷ್ಟ ಧನ ನೀಡಬೇಕು. ಕಾರ್ಮಿಕ ವಿರೋಧಿಯಾಗಿರುವ ಎಲ್ಲ ಸುತ್ತೋಲೆಗಳನ್ನ ವಾಪಸ್ ಪಡೆಯಬೇಕು ಎಂದು ಆಗ್ರಹಿಸಲಿದ್ದಾರೆ.

ಜೊತೆಗೆ ಸಾರಿಗೆ 4 ನಿಗಮಗಳ ಕಾರ್ಮಿಕರಿಗೆ ಪ್ರತಿ ತಿಂಗಳು 7 ರಂದು ವೇತನ ಪಾವತಿಸಲಾಗುತ್ತಿತ್ತು. ಆದರೆ, ಮೇ ತಿಂಗಳ ವೇತನ ಜೂನ್ ತಿಂಗಳ 20, 27ಕ್ಕೆ ನೀಡಲಾಗಿದೆ. ಜೂನ್ ತಿಂಗಳ ವೇತನ ಜುಲೈ 30 ರಂದು ಹಾಕಲಾಗಿದೆ. ಇದರಿಂದ ತೊಂದರೆ ಅನುಭವಿಸುವಂತಾಗಿದ್ದು, ಹಿಂದಿನಂತೆ ವೇತನ ನೀಡಿ ಎಂದು ಒತ್ತಾಯಿಸುತ್ತಿದ್ದಾರೆ.

ABOUT THE AUTHOR

...view details