ಕರ್ನಾಟಕ

karnataka

ETV Bharat / state

ಸಾರಿಗೆ ನೌಕರರ ವಜಾ, ಪೊಲೀಸ್ ಕೇಸ್: 4 ನಿಗಮಗಳೊಂದಿಗೆ ಸಭೆ ಕರೆಯಲು ಮುಂದಾದ ಸಚಿವ ಸವದಿ - transport agency employees meet lakshman savadhi

ಸಾರಿಗೆ ಸಚಿವ ಲಕ್ಷ್ಮಣ ಸವದಿಯವರನ್ನು ವಸತಿಗೃಹ ಜಯಮಹಲ್‌ನಲ್ಲಿ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ನೌಕರರು ಭೇಟಿ ಮಾಡಿ ಘಟಕ ಮಟ್ಟದಲ್ಲಿ ನಡೆಯುತ್ತಿರುವ ಕಿರುಕುಳಗಳ ಬಗ್ಗೆ ಹೇಳಿಕೊಂಡಿದ್ದಾರೆ.

transport-depertment-employes-meet-lakshmana-savadhi
ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ನೌಕರರ ಜೊತೆ ಲಕ್ಷ್ಮಣ ಸವದಿ

By

Published : Jul 16, 2021, 6:29 PM IST

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಕೆಲಸಕ್ಕೆ ಗೈರು ಹಾಜರಾಗಿ ಪ್ರತಿಭಟಿಸಿದ್ದರು. ಆರನೇ ವೇತನಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿ, 15 ದಿನಗಳಿಗೂ ಹೆಚ್ಚು ಕಾಲ ನಡೆಸಿದರು.

ಸರ್ಕಾರ ಎಷ್ಟೇ ಮನವಿ ಮಾಡಿದರೂ ಡೋಂಟ್ ಕೇರ್ ಅಂದಿದ್ದರು. ನಂತರ ಮುಷ್ಕರ ಸಂಬಂಧ ಕೋರ್ಟ್ ನೋಟೀಸ್ ನೀಡಿದ ಹಿನ್ನೆಲೆ ಒಬ್ಬೊಬ್ಬರಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಆ ಸಂದರ್ಭಗಳಲ್ಲಿ ವಿಧಿಸಿದ್ದ ವರ್ಗಾವಣೆ, ಕೆಲಸದಿಂದ ವಜಾ, ವೇತನ ಕಡಿತದಂತಹ ಸಮಸ್ಯೆಯನ್ನು ನೌಕರರು ಎದುರಿಸಬೇಕಾಯ್ತು.

ಈ ನಿಟ್ಟಿನಲ್ಲಿ ಇಂದು, ಸಾರಿಗೆ ಸಚಿವ ಲಕ್ಷ್ಮಣ ಸವದಿಯವರನ್ನು ವಸತಿಗೃಹ ಜಯಮಹಲ್ ನಲ್ಲಿ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ನೌಕರರು ಭೇಟಿ ಮಾಡಿದರು.‌ ಮುಷ್ಕರ ಸಂದರ್ಭದಲ್ಲಿ ಪೊಲೀಸ್ ಕೇಸುಗಳು ಮತ್ತು ವಜಾ ಮತ್ತು ವರ್ಗಾವಣೆ, ಅಮಾನತು ಮತ್ತು ವಸತಿ ಗೃಹಗಳ ಸುಮಾರು ಮೂರು ಪಟ್ಟು ಹೆಚ್ಚು ದಂಡ ವಸೂಲಿ, ವಸತಿಗೃಹಗಳನ್ನು ಖಾಲಿ ಮಾಡಿಸುತ್ತಿರುವುದು ಸೇರಿದಂತೆ ಘಟಕ ಮಟ್ಟದಲ್ಲಿ ನಡೆಯುತ್ತಿರುವ ಕಿರುಕುಳಗಳ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

ಈ ಕುರಿತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾತನಾಡಿ, ಇದೇ ಜುಲೈ 19 ರಂದು ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರುಗಳು ಮತ್ತು ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುವುದು ಅಂತ ಭರವಸೆ ನೀಡಿದ್ದಾರೆ. ಈಗಲಾದರೂ ಸಾರಿಗೆ ಇಲಾಖೆಯಲ್ಲಿ ಉದ್ಭವಿಸಿರುವ ಸಮಸ್ಯೆಗಳಿಗೆ ಪರಿಹಾರ ಸಿಗಲಿದ್ಯಾ? ನೌಕರರ ಬೇಡಿಕೆ ಈಡೇರಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ:ನಮ್ಮೊಳಗಡೆ ಇರುವ ಕಾಲೆಯುವವರನ್ನ ತಡೆದ್ರೆ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ : ಪ್ರಕಾಶ್‌ ಹುಕ್ಕೇರಿ

ABOUT THE AUTHOR

...view details