ಕರ್ನಾಟಕ

karnataka

ETV Bharat / state

ಆ್ಯಪ್ ಆಧಾರಿತ ಆಟೋರಿಕ್ಷಾ ಸೇವೆ ಅಧಿಕೃತಗೊಳಿಸಲು ಮುಂದಾದ ಸಾರಿಗೆ ಇಲಾಖೆ - ಉಬರ್ ಸೇರಿದಂತೆ ಆ್ಯಪ್ ಆಧಾರಿತ ಟ್ಯಾಕ್ಸಿ

ಪೀಕ್ ಟೈಮ್ ಸೇರಿದಂತೆ ಹಲವು ನೆಪಗಳಲ್ಲಿ ಗ್ರಾಹಕರನ್ನು ಮತ್ತು ಚಾಲಕರನ್ನು ಸುಲಿಗೆ ಮಾಡುತ್ತಿದ್ದ ಕಂಪನಿಗಳಿಗೆ ಹೊಸದಾಗಿ ದರ ನಿಗದಿಪಡಿಸಲು ಸರ್ಕಾರ ಮುಂದಾಗಿದೆ. ಇನ್ನೊಂದು ವಾರದಲ್ಲಿ ಹೊಸ ದರ ಪ್ರಕಟಗೊಳ್ಳಬಹುದು. ಈ ದರ ಜಿಎಸ್​ಟಿಯನ್ನೂ ಒಳಗೊಂಡಿರುತ್ತದೆ ಎಂದು ಮೂಲಗಳು ಹೇಳಿವೆ.

ಆ್ಯಪ್ ಆಧಾರಿತ ಆಟೋರಿಕ್ಷಾ ಸೇವೆ
ಆ್ಯಪ್ ಆಧಾರಿತ ಆಟೋರಿಕ್ಷಾ ಸೇವೆ

By

Published : Oct 27, 2022, 5:43 PM IST

ಬೆಂಗಳೂರು:ಓಲಾ, ಉಬರ್ ಸೇರಿದಂತೆ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಯಲ್ಲಿ ಆಟೋರಿಕ್ಷಾಗಳ ಸೇವೆಯನ್ನು ಅಧಿಕೃತಗೊಳಿಸಲು ಸಿದ್ಧತೆ ನಡೆಸಿರುವ ಸಾರಿಗೆ ಇಲಾಖೆ, ಇದೀಗ ಕನಿಷ್ಠ ದರ ನಿಗದಿ ಮಾಡಲು ಮುಂದಾಗಿದೆ. ಕರ್ನಾಟಕ ರಾಜ್ಯ ಬೇಡಿಕೆ ಆಧರಿತ ಸಾರಿಗೆ ತಂತ್ರಜ್ಞಾನ ನಿಯಮಕ್ಕೆ ಕೆಲ ಅಂಶಗಳನ್ನು ಸೇರ್ಪಡೆ ಮಾಡುವ ಮೂಲಕ ಆಟೋ ರಿಕ್ಷಾ ಸೇವೆಗಳನ್ನು ಅಧಿಕೃತಗೊಳಿಸಲು ಉದ್ದೇಶಿಸಲಾಗಿತ್ತು. ಇದರ ನಡುವೆ ಇದೇ ವಾರದೊಳಗೆ ಕನಿಷ್ಠ ಪ್ರಯಾಣ ದರ ನಿಗದಿ ಮಾಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಪೀಕ್ ಟೈಮ್ ಸೇರಿದಂತೆ ಹಲವು ನೆಪಗಳಲ್ಲಿ ಗ್ರಾಹಕರನ್ನು ಮತ್ತು ಚಾಲಕರನ್ನು ಸುಲಿಗೆ ಮಾಡುತ್ತಿದ್ದ ಕಂಪನಿಗಳಿಗೆ ಹೊಸದಾಗಿ ದರ ನಿಗದಿಪಡಿಸಲು ಸರ್ಕಾರ ಮುಂದಾಗಿದೆ. ಇನ್ನೊಂದು ವಾರದಲ್ಲಿ ಹೊಸ ದರ ಪ್ರಕಟಗೊಳ್ಳಬಹುದು. ಈ ದರ ಜಿಎಸ್​ಟಿಯನ್ನೂ ಒಳಗೊಂಡಿರುತ್ತದೆ ಎಂದು ಮೂಲಗಳು ಹೇಳಿವೆ.

15 ದಿನಗಳ ಗಡುವು ನೀಡಿದ್ದ ಸರ್ಕಾರ: ಪ್ರಸ್ತುತ 2 ಕಿ.ಮೀಗೆ 30 ರೂ. ದರವನ್ನು ಸಾರಿಗೆ ಇಲಾಖೆ ನಿಗದಿಪಡಿಸಿದೆ. ಈ ಹಿಂದೆ ರಾಜ್ಯ ಸರ್ಕಾರವು ಎರಡೂ ಅಗ್ರಿಗೇಟರ್​ ಆ್ಯಪ್ ಕಂಪನಿಗಳಿಗೆ ಹೊಸ ದರ ನಿಗದಿಪಡಿಸಲು 15 ದಿನಗಳ ಗಡುವು ನೀಡಿತ್ತು. ಗಡುವು ಸಮೀಪಿಸುತ್ತಿದ್ದಂತೆ ಇದೀಗ ಸರ್ಕಾರವೇ ಹೊಸ ದರ ನಿಗದಿಪಡಿಸಲು ಮುಂದಾಗಿದೆ.

ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿ-2020: ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿ-2020ರ ಪ್ರಕಾರ ಆ್ಯಪ್ ಆಧಾರಿತ ಸೇವೆಗಳ ಕನಿಷ್ಠ ದರ 25 ರೂ. ದಿಂದ 30ರಷ್ಟು ನಿಗದಿಪಡಿಸಬಹುದಾಗಿದೆ. ಅದೇ ಮಾದರಿಯ ದರವನ್ನು ಇತರೆ ವಾಹನಗಳಿಗೂ ಈ ಕಂಪನಿಗಳು ಅನುಸರಿಸಬಹುದು. ಅಲ್ಲದೇ ಕನಿಷ್ಠ ದರಕ್ಕಿಂತ ಶೇ 50ರಷ್ಟು ಕಡಿಮೆ ಅಥವಾ ಸೇವಾ ಶುಲ್ಕದ ರೂಪದಲ್ಲಿ ಗರಿಷ್ಠ ಒಂದೂವರೆ ಪಟ್ಟು ಹೆಚ್ಚಿಸಲು ಅವಕಾಶ ಇದೆ.

ಖಚಿತಪಡಿಸದ ಸಾರಿಗೆ ಇಲಾಖೆ:ವಿಮಾನ ಪ್ರಯಾಣದ ಟಿಕೆಟ್ ದರ ‌ಕಾಲಕ್ಕೆ ತಕ್ಕಂತೆ ಏರಿಳಿತ ಇರುತ್ತದೆ. ಬೆಲೆ ಏರಿಕೆ ಮತ್ತು ಇಳಿಕೆ ಮಾಡಲು ಅಗ್ರಿಗೇಟರ್ ನಿಯಮಗಳಲ್ಲಿಯೇ ಅವಕಾಶ ಇರುವುದು ಇದಕ್ಕೆ ಕಾರಣ. ಇದೇ ಮಾದರಿಯಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುವ ಅಗ್ರಿಗೇಟರ್‌ಗಳು ದರ ವ್ಯತ್ಯಾಸಗಳನ್ನು ಮಾಡುತ್ತಾರೆ. ಒಮ್ಮೆ ಒಪ್ಪಿಗೆ ನೀಡಿದರೆ ಅವುಗಳನ್ನು ನಿಯಂತ್ರಣ ಮಾಡಬಹುದಾಗಿದೆ. ಆದರೆ, ಈ ಅಂಶವನ್ನು ಸೇರ್ಪಡೆ ಮಾಡುವ ಬಗ್ಗೆ ಸಾರಿಗೆ ಇಲಾಖೆ ಇನ್ನೂ ಖಚಿತಪಡಿಸಿಲ್ಲ. ಒಂದು ವೇಳೆ ಸೇರ್ಪಡೆ ಮಾಡಿದರೆ ಅದು ಗ್ರಾಹಕರಿಗೆ ಹೊರೆಯಾಗುವ ಸಾಧ್ಯತೆಯೂ ಇದೆ. ಹೀಗಾಗಿ, ಸರ್ಕಾರವೇ ದರ ನಿಗದಿ ಮಾಡಲು ಮುಂದಾಗಿದೆ.

ABOUT THE AUTHOR

...view details