ಬೆಂಗಳೂರು:ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ ಖಾಸಗಿ ಬಸ್ ಮಾಲೀಕರ ಜೊತೆ ಸಾರಿಗೆ ಇಲಾಖೆ ಸಭೆ ನಡೆಸಿದೆ. ಬೆಂಗಳೂರಿನ ಜಯನಗರ ಸಾರಿಗೆ ಇಲಾಖೆಯಲ್ಲಿ ನಡೆದ ಸಭೆಯಲ್ಲಿ ಸಾರಿಗೆ ಬಸ್ ದರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಜಂಟಿ ಸಾರಿಗೆ ಆಯುಕ್ತ ಹಾಲಸ್ವಾಮಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಖಾಸಗಿ ಬಸ್ಗಳಿಗೆ ದರ ನಿಗದಿ ಮಾಡಲಾಗಿದೆ.
ಸರ್ಕಾರಿ ಬಸ್ಗಳ ಮಾದರಿಯಲ್ಲಿ ದರ ನಿಗದಿ ಮಾಡಿದ್ದು, ಬೆಂಗಳೂರಿನಿಂದ ವಿವಿಧ ಜಿಲ್ಲಾ ಕೇಂದ್ರಗಳಿಗೆ ತೆರಳುವ ಬಸ್ಗಳಿಗೆ ದರ ನಿಗದಿ ಮಾಡಲಾಗಿದೆ.
ದರ ನಿಗದಿ ಪಟ್ಟಿ ಹೀಗಿದೆ
ಬೆಂಗಳೂರು - ಹಾಸನ -209 ರೂ/-
ಬೆಂಗಳೂರು - ಚಿಕ್ಕಮಗಳೂರು -280 ರೂ/-
ಬೆಂಗಳೂರು - ಶಿವಮೊಗ್ಗ - 298 ರೂ/-
ಬೆಂಗಳೂರು - ದಾವಣಗೆರೆ -312 ರೂ/-
ಬೆಂಗಳೂರು - ಚಿತ್ರದುರ್ಗ 237 ರೂ/-
ಬೆಂಗಳೂರು - ಹೊಸದುರ್ಗ 173 ರೂ/-
ಬೆಂಗಳೂರು - ಪಾವಗಡ 164 ರೂ/-
ಬೆಂಗಳೂರು - ಮಧುಗಿರಿ 111 ರೂ/-
ಬೆಂಗಳೂರು - ಕೊರಟಗೆರೆ 96 ರೂ/-
ಬೆಂಗಳೂರು - ಗೌರಿಬಿದನೂರ 88 ರೂ/-
ಬೆಂಗಳೂರು- ಚಿಕ್ಕಬಳ್ಳಾಪುರ 69 ರೂ/-
ಬೆಂಗಳೂರು- ಬಾಗೆಪಲ್ಲಿ 117 ರೂ/-
ಬೆಂಗಳೂರು - ಕೋಲಾರ 76 ರೂ/-
ಬೆಂಗಳೂರು - ಮೂಳಬಾಗಿಲು 105 ರೂ/-
ಬೆಂಗಳೂರು - ಚಿಂತಾಮಣಿ 86 ರೂ/-
ಬೆಂಗಳೂರು - ತುಮಕೂರು 80 ರೂ/-
ಬೆಂಗಳೂರು - ಕೆಜಿಎಫ್ 110 ರೂ/-
ಬೆಂಗಳೂರು - ಚಳ್ಳಕೆರೆ 230 ರೂ/-
ಬೆಂಗಳೂರು - ಬಳ್ಳಾರಿ 360 ರೂ/-
ಬೆಂಗಳೂರು - ಸಿರಾ 145 ರೂ/-
ಬೆಂಗಳೂರು- ಹಿರಿಯೂರು 195 ರೂ/-
ಬೆಂಗಳೂರು - ಧರ್ಮಸ್ಥಳ 343 ರೂ/-
ಬೆಂಗಳೂರು - ಉಡುಪಿ 470ರೂ/-
ಬೆಂಗಳೂರು - ಕುಂದಾಪುರ 519 ರೂ/-
ಬೆಂಗಳೂರು- ಪುತ್ತೂರು 470 ರೂ/-
ಬೆಂಗಳೂರು - ಮಡಿಕೇರಿ 326 ರೂ/-
ಬೆಂಗಳೂರು - ಬಿಜಾಪುರ 678 ರೂ/-
ಬೆಂಗಳೂರು - ಮಂಗಳೂರು 401 ರೂ/-
ಬೆಂಗಳೂರು - ಕೊಪ್ಪಳ 462 ರೂ/-
ಬೆಂಗಳೂರು - ಹೊಸಪೇಟೆ 399ರೂ/-
ಬೆಂಗಳೂರು - ಕಲಬುರಗಿ 691 ರೂ/-
ಬೆಂಗಳೂರು - ಹುಬ್ಬಳ್ಳಿ 489 ರೂ/-