ಬೆಂಗಳೂರು: ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಅಗತ್ಯ ಸೇವೆಗೆ ಬರುವ ಸರ್ಕಾರಿ ಸಿಬ್ಬಂದಿ ಕೆಲಸಕ್ಕೆ ಹಾಜರಾಗುವಂತೆ ಆದೇಶಿಸಲಾಗಿತ್ತು.
ಅಗತ್ಯ ಸೇವೆಗೆ ಒಳಪಡುವ ಸಾರಿಗೆ ನಿಗಮ.. ಶೇ.50 ರಷ್ಟು ಅಧಿಕಾರಿ-ಸಿಬ್ಬಂದಿ ಕಡ್ಡಾಯ ಹಾಜರಾತಿಗೆ ಆದೇಶ - bengaluru latest news
ಕೆಎಸ್ಆರ್ಟಿಸಿ ನಿಗಮವೂ ಅಗತ್ಯ ಸೇವೆಯಡಿ ಬರುವ ಕಾರಣಕ್ಕೆ ಶೇಕಡಾ 50 ರಷ್ಟು ಸಿಬ್ಬಂದಿ ಕಡ್ಡಾಯ ಹಾಜರಾತಿ ಇರುವಂತೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ.ಶಿವಯೋಗಿ ಕಳಸದ್ ಆದೇಶ ಹೊರಡಿಸಿದ್ದಾರೆ.
ಶೇ.50 ರಷ್ಟು ಅಧಿಕಾರಿ-ಸಿಬ್ಬಂದಿ ಕಡ್ಡಾಯ ಹಾಜರಾತಿಗೆ ಆದೇಶ
ಇದೀಗ ಕೆಎಸ್ಆರ್ಟಿಸಿ ನಿಗಮವೂ ಅಗತ್ಯ ಸೇವೆಯಡಿ ಬರುವ ಕಾರಣಕ್ಕೆ ಶೇಕಡಾ 50 ರಷ್ಟು ಸಿಬ್ಬಂದಿ ಕಡ್ಡಾಯ ಹಾಜರಾತಿ ಇರುವಂತೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ.ಶಿವಯೋಗಿ ಕಳಸದ್ ಆದೇಶ ಹೊರಡಿಸಿದ್ದಾರೆ.
ಲಾಕ್ ಡೌನ್ ಕಾರಣಕ್ಕೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ವಿನಾಯಿತಿ ಇರುವುದಿಲ್ಲ. ಹೀಗಾಗಿ ಇವರ ಹಾಜರಾತಿ ಕಡ್ಡಾಯ ಮಾಡಲಾಗಿದೆ. ಅಂದಹಾಗೆ, ಡ್ರೈವರ್ಗಳನ್ನು ಹೊರತು ಪಡಿಸಿ ಬೇರೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಚಾಲಕರಿಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.