ಬೆಂಗಳೂರು:ಮೇ 21 ಆದರೂ ಸಾರಿಗೆ ಸಿಬ್ಬಂದಿಗೆ ಏಪ್ರಿಲ್ ತಿಂಗಳ ವೇತನವನ್ನು ನೀಡಲಾಗಿಲ್ಲ. ಜನತಾ ಕರ್ಫ್ಯೂ, ಲಾಕ್ಡೌನ್ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ರಾಜ್ಯ ಸಾರಿಗೆ ನಿಗಮಗಳು ನಷ್ಟದಲ್ಲಿವೆ.
ಕೊರೊನಾ ಹೊಡೆತಕ್ಕೆ ಸಾರಿಗೆ ನಿಗಮಗಳು ಇಲ್ಲಿಯವರೆಗೆ 5,000 ಕೋಟಿ ರೂ ನಷ್ಟ ಅನುಭವಿಸಿವೆ. ಈ ನಷ್ಟದ ಹಣವನ್ನು ತುಂಬಲು ಕಳೆದ ಬಾರಿ ವೇತನಕ್ಕೆ 2,133 ಕೋಟಿ ರೂ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿತ್ತು. ಇದೀಗ ಮತ್ತೆ 975 ಕೋಟಿ ಹಣ ನೀಡುವಂತೆ ಸಾರಿಗೆ ನಿಗಮಗಳು ರಾಜ್ಯ ಸರ್ಕಾರದ ಕದ ತಟ್ಟಿವೆ.