ಬೆಂಗಳೂರು: ಆಟೋ, ಟ್ಯಾಕ್ಸಿ ಚಾಲಕರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಹಾಯಧನ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಇಂದು ಸಂಜೆ ಸಾರಿಗೆ ಆಯುಕ್ತ ಶಿವಕುಮಾರ್ ಚಾಲಕರ ಸಂಘಟನೆ ಪ್ರತಿನಿಧಿಗಳ ಜೊತೆ ಸಭೆ ನಡೆಸಿದರು.
ಚಾಲಕರ ಸಂಘಟನೆ ಜತೆ ಸಾರಿಗೆ ಆಯುಕ್ತರ ಸಭೆ: ನಾಳೆ ಹಣ ನೀಡಿಕೆ ಮಾರ್ಗಸೂಚಿ ಪ್ರಕಟ - ಚಾಲಕರ ಅಸೋಸಿಯೇಷನ್ ಜೊತೆ ಸಾರಿಗೆ ಆಯುಕ್ತರು ಸಭೆ
ಸಿಎಂ ಯಡಿಯೂರಪ್ಪ ಅವರು ಲಾಕ್ಡೌನ್ನಿಂದ ಉಂಟಾದ ನಷ್ಟ ಪರಿಹಾರದ ಘೋಷಣೆ ಹೊರಡಿಸಿದ ಪ್ರಯುಕ್ತ, ಶಾಂತಿನಗರದ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಆಯುಕ್ತ ಶಿವಕುಮಾರ್ ಕರೆದಿದ್ದ ಸಭೆಯಲ್ಲಿ ಹಲವು ಆಟೋ, ಟ್ಯಾಕ್ಸಿ ಅಸೋಸಿಯೇಷನ್ನ ಪ್ರತಿನಿಧಿಗಳು ಭಾಗವಹಿಸಿದರು.
ಚಾಲಕರ ಅಸೋಸಿಯೇಷನ್ ಜೊತೆ ಸಭೆ
ಶಾಂತಿನಗರದ ಸಾರಿಗೆ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹಲವು ಆಟೋ, ಟ್ಯಾಕ್ಸಿ ಅಸೋಸಿಯೇಷನ್ನ ಮುಂಖಡರು ಭಾಗಿಯಾಗಿದ್ದರು. ಫಲಾನುಭವಿಗಳಿಗೆ ಸಹಾಯಧನ ತಲುಪಿಸುವ ಬಗ್ಗೆ ಸಾರಿಗೆ ಆಯುಕ್ತರು ಸಲಹೆ ಪಡೆದಿದ್ದಾರೆ.
ವೆಬ್ ಸೈಟ್ ಮೂಲಕ ಚಾಲಕರ ಮಾಹಿತಿ ಪಡೆದು ಪರಿಹಾರ ಧನ ತಲುಪಿಸುವ ಬಗ್ಗೆ ಚರ್ಚಿಸಿದರು. ಆನ್ಲೈನ್ ಮೂಲಕ ಸಹಾಯಧನ ತಲುಪಿಸಲು ನಿರ್ಧಾರ ಮಾಡಲಾಗಿದ್ದು, ಈ ಕುರಿತು ನಾಳೆ ಮಾರ್ಗಸೂಚಿ ಹೊರಡಿಸುವುದಾಗಿ ಸಭೆಯಲ್ಲಿ ಸಾರಿಗೆ ಆಯುಕ್ತರು ಹೇಳಿದ್ದಾರೆ.