ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಕಿಡಿಗೇಡಿಗೆ ಥಳಿತ: ಯುವತಿ ರಕ್ಷಿಸಿದ ತೃತೀಯ ಲಿಂಗಿಗಳು - Transgender rescues young woman in Bengaluru

ರಾತ್ರೋ ರಾತ್ರಿ ಅಪರಿಚಿತ ಯುವತಿ ಮನೆಗೆ ನುಗ್ಗಿ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯನ್ನು ಸ್ಥಳೀಯ ಮಂಗಳಮುಖಿಯರ ಸಹಾಯದಿಂದ ವಿವೇಕನಗರ ಪೊಲೀಸರು ಕಾಮುಕನನ್ನು ಬಂಧಿಸಿ ಜೈಲಿಗಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಯುವತಿ ರಕ್ಷಿಸಿದ ತೃತೀಯ ಲಿಂಗಿಗಳು
ಯುವತಿ ರಕ್ಷಿಸಿದ ತೃತೀಯ ಲಿಂಗಿಗಳು

By

Published : Jul 4, 2022, 2:58 PM IST

Updated : Jul 4, 2022, 4:45 PM IST

ಬೆಂಗಳೂರು:ತೃತೀಯ ಲಿಂಗಿಗಳನ್ನು ನಾಗರಿಕ ಸಮಾಜ ತಾತ್ಸಾರ ಮನೋಭಾವದಿಂದಲೇ ನೋಡುವುದು ಹೆಚ್ಚು. ಆದರೆ, ಇಲ್ಲಿ ನಡೆದ ಘಟನೆಯೊಂದರಲ್ಲಿ ಇಬ್ಬರು ಮಂಗಳಮುಖಿಯರು ಯುವತಿಯ ಹೆಣ್ಣಿನ ಮಾನ - ಪ್ರಾಣ ಕಾಪಾಡಿ‌ ದಿಟ್ಟತನ ತೋರಿದ್ದಾರೆ. ರಾತ್ರೋ ರಾತ್ರಿ ಅಪರಿಚಿತ ಯುವತಿ ಮನೆಗೆ ನುಗ್ಗಿ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯನ್ನು ಸ್ಥಳೀಯ ಮಂಗಳಮುಖಿಯರ ಸಹಾಯದಿಂದ ವಿವೇಕನಗರ ಪೊಲೀಸರು ಕಾಮುಕನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಉದ್ಯೋಗ ಅರಸಿ ಪಶ್ಚಿಮ ಬಂಗಾಳದಿಂದ ಯುವತಿ ವಿವೇಕನಗರದಲ್ಲಿ ವಾಸವಾಗಿದ್ದಳು. ಒಬ್ಬಳೇ ಇರೋದನ್ನ ಗಮನಿಸಿದ ಅದೇ ಏರಿಯಾದಲ್ಲಿ ವೆಸ್ಟ್ ಬೆಂಗಾಲ್‌ ಮೂಲದ ಆರೋಪಿ ಮಸೂರಲ್‌ ಶೇಕ್ ಆಕೆ ಮನೆ ಬಳಿ ಎರಡು - ಮೂರು ದಿನಗಳಿಂದ ಓಡಾಡುತ್ತಿದ್ದ. ಇದೇ ತಿಂಗಳು 2 ರಂದು ಬೆಳಿಗ್ಗೆ ನಾಲ್ಕು ಗಂಟೆಗೆ ಬಾಗಿಲು ಬಡಿದಿದ್ದಾನೆ. ಬಾಗಿಲು ಓಪನ್ ಮಾಡ್ತಿದ್ದಂತೆ ಯುವತಿ ಮೇಲೆ ಮೃಗದಂತೆ ಎರಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎನ್ನಲಾಗಿದೆ.

ಯುವತಿ ರಕ್ಷಿಸಿದ ತೃತೀಯ ಲಿಂಗಿಗಳು

ಹಣ ಎಷ್ಟು ಬೇಕಾದರೂ ಕೊಡುತ್ತೇನೆ ಬಿಟ್ಟು ಬಿಡು ಎಂದು ಅಂಗಲಾಚಿದ್ದಾಳೆ. ಯುವತಿ ಕಿರುಚಾಡುತ್ತಿದ್ದಂತೆ ಮೇಲಿನ ಪ್ಲ್ಯಾಟ್​​ನಲ್ಲಿ ವಾಸವಿದ್ದ ತೃತೀಯ ಲಿಂಗಿ ಮಹಿರಾ ಸಿಂಗ್ ಮತ್ತು ಅವರ ಸ್ನೇಹಿತೆ ಆಗಮಿಸಿ ಬಾಗಿಲು ಮುರಿದು, ಆರೋಪಿಗೆ ಥಳಿಸಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ

ಸ್ನೇಹಿತೆ ಕಾರ್ಯಕ್ಕೆ ಮೆಚ್ಚುಗೆ:ಇನ್ನು ವಿವೇಕನಗರ ಠಾಣೆಯಲ್ಲಿ ಪ್ರಕಣ ದಾಖಲಾಗಿದ್ದು, ಆರೋಪಿ ಮಸೂರಲ್ ಖಾನ್ ಬಂಧಿಸಿದ್ದಾರೆ. ಇನ್ನೂ ಈ ಮಸೂರಲ್ ವೆಸ್ಟ್ ಬೆಂಗಾಲ್‌ ಮೂಲದವನಾಗಿದ್ದು ಹೋಟೆಲ್​ನಲ್ಲಿ ಕೆಲಸ‌ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ತೃತೀಯಲಿಂಗಿ ಮಹಿರಾ ಮತ್ತವರ ಸ್ನೇಹಿತೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಹೊರ ರಾಜ್ಯದಿಂದ ಶಿಕ್ಷಣಕ್ಕಾಗಿ ಬಂದಿದ್ದ ಯುವತಿ ಮೇಲಿನ ಅತ್ಯಾಚಾರ ತಪ್ಪಿಸಿ ಯುವತಿ ಮಾನ ಕಾಪಾಡಿದ್ದಾರೆ.

ಓದಿ:4ನೇ ದಿನಕ್ಕೆ ಕಾಲಿಟ್ಟ ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ: ಇಂದು ಅರೆಬೆತ್ತಲೆ ಪ್ರತಿಭಟನೆ

Last Updated : Jul 4, 2022, 4:45 PM IST

For All Latest Updates

TAGGED:

ABOUT THE AUTHOR

...view details