ಕರ್ನಾಟಕ

karnataka

ETV Bharat / state

ಆರು ಐಎಎಸ್ ಅಧಿಕಾರಿಗಳ ವರ್ಗಾವಣೆ : ನಾಲ್ವರ ಮರು ವರ್ಗಾವಣೆ - ವರ್ಗಾವಣೆ

ಮತ್ತೆ ಆರು ಐಎಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ವರ್ಗಾವಣೆ ಆದೇಶದಲ್ಲಿ ನಾಲ್ಕು ಐಎಎಸ್ ಅಧಿಕಾರಿಗಳನ್ನು ಮರು ವರ್ಗಾವಣೆ ‌ಮಾಡಲಾಗಿದೆ.

ಆರು ಐಎಎಸ್ ಅಧಿಕಾರಿಗಳ ವರ್ಗಾವಣೆ : ನಾಲ್ವರ ಮರು ವರ್ಗಾವಣೆ

By

Published : Sep 8, 2019, 2:28 AM IST

ಬೆಂಗಳೂರು: ರಾಜ್ಯ ಸರ್ಕಾರ ಐಎಎಸ್‌ ಅಧಿಕಾರಿಗಳ ವರ್ಗಾವಣೆಯನ್ನು ಮುಂದುವರಿಸಿದ್ದು, ಮತ್ತೆ ಆರು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ವರ್ಗಾವಣೆ ಆದೇಶದಲ್ಲಿ ನಾಲ್ಕು ಐಎಎಸ್ ಅಧಿಕಾರಿಗಳನ್ನು ಮರು ವರ್ಗಾವಣೆ ‌ಮಾಡಲಾಗಿದೆ.

ಆರು ಐಎಎಸ್ ಅಧಿಕಾರಿಗಳ ವರ್ಗಾವಣೆ : ನಾಲ್ವರ ಮರು ವರ್ಗಾವಣೆ

ಮೊಹಮ್ಮದ್ ಇಕ್ರಮುಲ್ಲಾ ಶರೀಫ್ ಅವರನ್ನು ಕೋಲಾರ ಜಿಲ್ಲಾ ಪಂಚಾಯತ್ ಸಿಇಒ ಆಗಿ, ಡಾ.ಆನಂದ್.ಕೆ ಅವರನ್ನು ಬೀದರ್ ಜಿಲ್ಲಾ ಪಂಚಾಯತ್ನ ಸಿಇಒ, ಪಾಂಡ್ವೆ ರಾಹುಲ್ ತುಕಾರಾಂರನ್ನು ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಒ, ಗ್ಯಾನೇಂದ್ರ ಕುಮಾರ್ ಗಂಗ್ವಾರ್ರನ್ನು ಗದಗ್ ಸಿಇಒರಾಗಿ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆ ಮಾಡಿದ ಒಂದೇ ದಿನದಲ್ಲಿ ಈ ನಾಲ್ವರನ್ನು ಮರು ವರ್ಗಾವಣೆ ಮಾಡಲಾಗಿದೆ.

ಮೊಹಮ್ಮದ್ ಇಕ್ರಮುಲ್ಲಾ ಶರೀಫ್​ರನ್ನು ಬಾಗಲಕೋಟೆ ಪಂಚಾಯತ್ ಸಿಇಒ ಆಗಿ, ಡಾ.ಆನಂದ್.ಕೆ ಅವರನ್ನು ಗದಗ್​ ಪಂಚಾಯತ್ ಸಿಇಒ ಆಗಿ, ಪಾಂಡ್ವೆ ರಾಹುಲ್ ತುಕಾರಾಂ ಕೋಲಾರಕ್ಕೆ ಪಂಚಾಯತ್ ಸಿಇಒ ಆಗಿ, ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಬೀದರ್​ ಪಂಚಾಯತ್ ಸಿಇಒ ಆಗಿ, ಪೂವಿತಾ ಮೈಸೂರಿನ ಪಂಚಾಯತ್ ಸಿಇಒ ಆಗಿ, ಜ್ಯೋತಿ.ಕೆ ನಿರ್ದೇಶಕಿಯಾಗಿ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ವರ್ಗಾವಣೆ ಮಾಡಲಾಗಿದೆ.

ABOUT THE AUTHOR

...view details