ಬೆಂಗಳೂರು: ಭಾರತ ಚುನಾವಣಾ ಆಯೋಗದ ಮತದಾರರ ಪಟ್ಟಿಯ ನೋಂದಣಿ ಹಾಗೂ ಪರಿಷ್ಕರಣಾ ಕಾರ್ಯ ಪ್ರಗತಿಯಲ್ಲಿದ್ದು, ಈ ಪ್ರಕ್ರಿಯೆ ಮುಗಿಯುವವರೆಗೂ ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿ ಹಾಗೂ ಸಿಬ್ಬಂದಿಯ ವರ್ಗಾವಣೆ ಮಾಡದಂತೆ ಭಾರತ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.
ಚುನಾವಣಾ ಕಾರ್ಯದಲ್ಲಿರುವ ಅಧಿಕಾರಿಗಳ ವರ್ಗಾವಣೆಗೆ ತಡೆ - election results
ಮತದಾರರ ಪಟ್ಟಿ ನೋಂದಣಿ ಹಾಗೂ ಪರಿಷ್ಕರಣೆ ಕರ್ತವ್ಯದಲ್ಲಿರುವ ಅಧಿಕಾರಿಗಳ ವರ್ಗಾವಣೆಗೆ 2023 ರ ಜನವರಿ ಎರಡನೇ ವಾರದವರೆಗೆ ತಡೆ ನೀಡಿ ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಚುನಾವಣಾ ಕಾರ್ಯದಲ್ಲಿರುವ ಅಧಿಕಾರಿಗಳ ವರ್ಗಾವಣೆಗೆ ತಡೆ
ಹೀಗಾಗಿ ತಹಶೀಲ್ದಾರ್, ಉಪ ತಹಶೀಲ್ದಾರ್, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರಿಗೆ ಸಂಬಂಧಿಸಿದಂತೆ ಯಾವುದೇ ವರ್ಗಾವಣೆ ಮತ್ತು ನಿಯೋಜನೆ, ಒಒಡಿ ಪ್ರಸ್ತಾವನೆಗಳ ಕಡತವನ್ನು 2023 ರ ಜನವರಿ ಎರಡನೇ ವಾರದವರೆಗೆ ವಿಲೇವಾರಿ ಮಾಡಬಾರದು. ನೋಂದಣಿ ಪರಿಷ್ಕರಣೆ ಪ್ರಕ್ರಿಯೆ ಮುಕ್ತಾಯದ ಬಳಿಕ ನಿಯಮಾನುಸಾರ ಪರಿಶೀಲಿಸಿ ಮಂಡಿಸಬಹುದು ಎಂದು ಕಂದಾಯ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಫೆಬ್ರವರಿಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ: ಪ್ರಧಾನಿಯಿಂದ ಚಾಲನೆ
Last Updated : Dec 8, 2022, 10:04 AM IST