ಕರ್ನಾಟಕ

karnataka

ETV Bharat / state

ಪೊಲೀಸ್ ಇಲಾಖೆಯಲ್ಲಿ ಮುಂದುವರೆದ ವರ್ಗಾವಣೆ: ಇಂದು ಐವರು ಐಪಿಎಸ್ ಅಧಿಕಾರಿಗಳು ಟ್ರಾನ್ಸ್​ಫರ್​ ! - ರಾಜ್ಯ ಸರ್ಕಾರ ಆದೇಶ

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮುಂದುವರೆದಿದ್ದು, ಇಂದು ಐವರು ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ‌.

IPS officers
ಐಪಿಎಸ್

By

Published : Aug 26, 2020, 7:42 PM IST

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದ್ದು, ಇಂದು ಐವರು ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ‌.

ಕುಲದೀಪ್ ಕುಮಾರ್ ಜೈನ್ - ಸಿಸಿಬಿ ಡಿಸಿಪಿಯಿಂದ ಎಸಿಬಿ ಎಸ್ಪಿಯಾಗಿ ವರ್ಗಾವಣೆ,

ರವಿಕುಮಾರ್ ಸಿಸಿಬಿ ಡಿಸಿಪಿ-2 ಯಿಂದ ಸಿಸಿಬಿ ಡಿಸಿಪಿ-1,

ಸೀಮಾ ಅನಿಲ್ ಲಟ್ಕರ್ ಡಿಸಿಪಿ ಬೆಳಗಾವಿಯಿಂದ ಸಿಸಿಬಿ ಎಐಜಿ,

ಸಿ.ಕೆ. ಬಾಬಾ ಬಳ್ಳಾರಿ ಎಸ್ಪಿಯಿಂದ ಸಿಐಡಿ ಎಸ್ಪಿ ಬೆಂಗಳೂರು,

ಸೈದುಲ್ ಅದಾವತ್ ಲೋಕಾಯುಕ್ತ ಎಸ್ಪಿಯಿಂದ ಬಳ್ಳಾರಿ ಎಸ್ಪಿಯಾಗಿ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ‌.

ಡಿ‌.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿಯ ಗಲಭೆ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಮಾಡಿದ ಸೇವೆಯನ್ನು ಗುರುತಿಸಿ ಡಿಸಿಪಿ ರವಿಕುಮಾರ್ ಅವರನ್ನು ಸಿಸಿಬಿ-2 ರಿಂದ ಸಿಸಿಬಿ - 1 ಡಿಸಿಪಿಯಾಗಿ ವರ್ಗಾವಣೆ ಮಾಡಿದೆ. ಇದುವರೆಗೆ ಸಿಸಿಬಿ 1 ಐಪಿಎಸ್ ದರ್ಜೆಯ ಅಧಿಕಾರಿಗೆ ಮಾತ್ರ ಸಿಗ್ತಿತ್ತು. ಆದರೆ ಈಗ ಕೆಎಸ್​ಪಿಎಸ್ ಡಿಸಿಪಿಯನ್ನು ಸಿಸಿಬಿ 1 ಆಗಿ ವರ್ಗಾವಣೆ ಮಾಡಲಾಗಿದೆ.

ABOUT THE AUTHOR

...view details