ಬೆಂಗಳೂರು:ಐವರು ಐಎಎಸ್ ಅಧಿಕಾರಿಗಳಿಗೆ ಸ್ಥಳ ನಿಯೋಜನೆಗೊಳಿಸಿ ಸರ್ಕಾರ ವರ್ಗಾವಣೆ ಆದೇಶ ಹೊರಡಿಸಿದೆ. ಈ ಹಿಂದೆ ಸ್ಥಳ ನಿಯೋಜನೆಗೊಳಿಸದೆ ವರ್ಗಾಯಿಸಲಾಗಿದ್ದ ಐವರು ಅಧಿಕಾರಿಗಳನ್ನು ಇದೀಗ ರಾಜ್ಯ ಸರ್ಕಾರ ವರ್ಗಾಯಿಸಿದೆ.
ಐವರು ಐಎಎಸ್ ಅಧಿಕಾರಿಗಳ ವರ್ಗಾವಣೆ - Dr. Basavaraju S. Transferred to BBMP as Special Commissioner
ಐವರು ಐಎಎಸ್ ಅಧಿಕಾರಿಗಳಿಗೆ ಸ್ಥಳ ನಿಯೋಜನೆಗೊಳಿಸಿ ಸರ್ಕಾರ ವರ್ಗಾವಣೆ ಆದೇಶ ಹೊರಡಿಸಿದ್ದು,ಈ ಹಿಂದೆ ಸ್ಥಳ ನಿಯೋಜನೆಗೊಳಿಸದೆ ವರ್ಗಾಯಿಸಲಾಗಿದ್ದ ಐವರು ಅಧಿಕಾರಿಗಳನ್ನು ಇದೀಗ ರಾಜ್ಯ ಸರ್ಕಾರ ಸ್ಥಳ ನಿಯೋಜಿಸಿ ವರ್ಗಾಯಿಸಿದೆ.
![ಐವರು ಐಎಎಸ್ ಅಧಿಕಾರಿಗಳ ವರ್ಗಾವಣೆ transfer-of-five-ias-officers](https://etvbharatimages.akamaized.net/etvbharat/prod-images/768-512-5270860-thumbnail-3x2-sanju.jpg)
ಐವರು ಐಎಎಸ್ ಅಧಿಕಾರಿಗಳ ವರ್ಗಾವಣೆ
ಡಾ.ಬಸವರಾಜು ಎಸ್. ರನ್ನು ಬಿಬಿಎಂಪಿ ವಿಶೇಷ ಆಯುಕ್ತರನ್ನಾಗಿ ವರ್ಗಾವಣೆಗೊಳಿಸಿದೆ. ಇನ್ನು ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾರನ್ನು ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.
ಸುಶಮ ಗೋಡ್ಬೋಲೆರನ್ನು ಅಂತರ್ಜಲ ನಿರ್ದೇಶನಾಲಯದ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ. ಕೆ.ಎಂ.ಜಾನಕಿಯವರನ್ನು ಕರ್ನಾಟಕ ಮುನಿಸಿಪಲ್ ಡಾಟಾ ಸೊಸೈಟಿ ಜಂಟಿ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದ್ದು, ಎಸ್.ಹೊನ್ನಮ್ಮರನ್ನು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರದ ನಿರ್ದೇಶಕರನ್ನಾಗಿ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.