ಕರ್ನಾಟಕ

karnataka

ETV Bharat / state

49 ಸಿವಿಲ್ ನ್ಯಾಯಾಧೀಶರ ವರ್ಗಾವಣೆ ಮಾಡಿ ಹೈಕೋರ್ಟ್‌ ಆದೇಶ

ರಾಜ್ಯ ಹೈಕೋರ್ಟ್​ನ್ ಹಿರಿಯ ಶ್ರೇಣಿಯ 49 ಸಿವಿಲ್​ ನ್ಯಾಯಾಧೀಶರ ವರ್ಗಾವಣೆ ಮಾಡಲಾಗಿದೆ. ಇದರ ಜೊತೆಗೆ 70 ಮಂದಿ ಸಿವಿಲ್ ನ್ಯಾಯಾಧೀಶರನ್ನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾಗಿ ಪದೋನ್ನತಿ ನೀಡಿ ವರ್ಗಾವಣೆ ಮಾಡಲಾಗಿದೆ.

Transfer of 49 Civil Judges: Order by High Court
49 ಸಿವಿಲ್ ನ್ಯಾಯಾಧೀಶರ ವರ್ಗಾವಣೆ: ಹೈಕೋರ್ಟ್‌ನಿಂದ ಆದೇಶ

By

Published : May 1, 2020, 10:52 PM IST

Updated : May 1, 2020, 10:58 PM IST

ಬೆಂಗಳೂರು: ರಾಜ್ಯದ ವಿವಿಧ ನ್ಯಾಯಾಲಯಗಳ 49 ಮಂದಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರನ್ನ ವರ್ಗಾವಣೆಗೊಳಿಸಿ ಹೈಕೋರ್ಟ್‌ ಆದೇಶ ಹೊರಡಿಸಿದೆ.

ಇದೇ ವೇಳೆ 70 ಮಂದಿ ಸಿವಿಲ್ ನ್ಯಾಯಾಧೀಶರುಗಳಿಗೆ ಹಿರಿಯ ಶ್ರೇಣಿ ಸಿವಿಲ್ ಪದೋನ್ನತಿ ನೀಡಿ ವರ್ಗಾವಣೆಗೊಳಿಸಿದೆ. ಈ ವರ್ಗಾವಣೆ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬದಾಮಿಕರ್ ಅವರು ಏಪ್ರಿಲ್​ 30ರಂದು ಅಧಿಸೂಚನೆ ಹೊರಡಿಸಿದ್ದಾರೆ.

ಎಲ್ಲ ನ್ಯಾಯಾಧೀಶರ ವರ್ಗಾವಣೆ 2020ರ ಜೂನ್​ 1ರಿಂದ ಅನ್ವಯವಾಗಲಿವೆ. ವರ್ಗಾವಣೆಯಾದವರ ವಿವರವನ್ನು ಹೈಕೋರ್ಟ್​​​​​​ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

Last Updated : May 1, 2020, 10:58 PM IST

ABOUT THE AUTHOR

...view details