ಕರ್ನಾಟಕ

karnataka

ETV Bharat / state

ಬಿಇಎಂಎಲ್​ನಿಂದ ಕೋಲ್ಕತ್ತಾ ಮೆಟ್ರೋ ನಿಗಮಕ್ಕೆ 11ನೇ ಮೆಟ್ರೋ ಬೋಗಿಗಳ ಹಸ್ತಾಂತರ - undefined

ದೇಶದ ರಕ್ಷಣಾ ವಲಯದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾದ ಕೇಂದ್ರ ಸರಕಾರಿ ಸ್ವಾಮ್ಯದ ಉದ್ದಿಮೆ ಬಿಇಎಂಎಲ್, ಕೋಲ್ಕತ್ತಾ ಮೆಟ್ರೋ ನಿಗಮಕ್ಕೆ 11ನೇ ಮೆಟ್ರೋ ಬೋಗಿಗಳ ಸೆಟ್​​​ (ಕಾರ್ ಸೆಟ್) ಹಸ್ತಾಂತರಿಸಿದೆ.

11ನೇ ಮೆಟ್ರೋ ಬೋಗಿಗಳ ಹಸ್ತಾಂತರ

By

Published : Apr 4, 2019, 8:08 AM IST

ಬೆಂಗಳೂರು: ಪ್ರತಿಷ್ಠಿತ ಬಿಇಎಂಎಲ್ ದೇಶದಲ್ಲೇ ರೈಲು ಮತ್ತು ಮೆಟ್ರೋ ಬೋಗಿಗಳ ಉತ್ಪಾದನೆಗೆ ಹೆಸರುವಾಸಿಯಾಗಿದ್ದು, ಇಲ್ಲಿಯವರೆಗೆ ಬೆಂಗಳೂರು, ದೆಹಲಿ, ಜೈಪುರ, ಕೋಲ್ಕತ್ತಾ ಮೆಟ್ರೋ ನಿಗಮಗಳಿಗೆ 1500 ಮೆಟ್ರೋ ಬೋಗಿಗಳನ್ನು ತಯಾರಿಸಿ ಕೊಟ್ಟಿದೆ.

ಬೆಂಗಳೂರಿನ ಬಿಇಎಂಎಲ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ವಸತಿ ಮತ್ತು ನಗರ ಸಚಿವಾಲಯದ ಕಾರ್ಯದರ್ಶಿಯಾಗಿರುವ ಹಿರಿಯ ಐಎಎಸ್ ಅಧಿಕಾರಿ ಡಿ.ಎಸ್.ಮಿಶ್ರಾ ಅವರು ನೂತನ ಮೆಟ್ರೋ ಬೋಗಿಗಳ 11ನೇ ಸೆಟ್​​ಅನ್ನ ಹಸ್ತಾಂತರಿಸುವ ಪ್ರಕ್ರಿಯೆಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಾಜರಿದ್ದ ಬಿಇಎಂಎಲ್​ನ ದೀಪಕ್ ಕುಮಾರ್ ಹೊಟಾ ಅವರು ಬೆಮಲ್ ಸಾಧನೆಗಳನ್ನು ಮಿಶ್ರಾ ಅವರಿಗೆ ವಿವರಿಸಿದರು.

ಇದೇ ವೇಳೆ ಮೆಟ್ರೋ ಬೋಗಿಗಳ ಉತ್ಪಾದನೆ ಬಗ್ಗೆ ಮಿಶ್ರಾ ಅವರು ಬೆಮಲ್ ಸಿಬ್ಬಂದಿ ಜತೆ ಸುದೀರ್ಘ ಚರ್ಚೆ ನಡೆಸಿದರು. ಮೆಟ್ರೋ ಬೋಗಿ ತಯಾರಿಕೆ ಘಟಕಗಳ ವೀಕ್ಷಣೆ ಬಳಿಕ ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾದ ಪ್ರಮುಖ ಸೆಕ್ಟಾರ್​ಗಳ ಅಭಿವೃದ್ಧಿಗೆ ಬಿಇಎಂಎಲ್ ಕೊಡುಗೆ ಮತ್ತು ಶ್ರಮದ ಬಗ್ಗೆ ಶ್ಲಾಘಿಸಿ ಬೆಮಲ್ ಕಾರ್ಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

For All Latest Updates

TAGGED:

ABOUT THE AUTHOR

...view details