ದೇವನಹಳ್ಳಿ :ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನೂತನವಾಗಿ ನಿರ್ಮಾಣವಾಗಿರುವ ಹಾಲ್ಟ್ ಸ್ಟೇಷನ್ ಜನವರಿ 4ರಿಂದ ರೈಲುಗಳ ಸಂಚಾರ ಪ್ರಾರಂಭವಾಗಲಿದೆ.
ಬೆಂಗಳೂರು ಸಿಟಿಯ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಏರ್ಪೋರ್ಟ್ನ ಹಾಲ್ಟ್ ಸ್ಟೇಷನ್ಗೆ 50 ನಿಮಿಷಗಳ ಅವಧಿ ತೆಗೆದುಕೊಳ್ಳಲಿದ್ದು, ಕೇವಲ 15 ರೂಪಾಯಿ ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ.
ಏರ್‌ಪೋರ್ಟ್ ಪ್ರಯಾಣಿಕರಿಗೆ ಇನ್ನು ಮುಂದೆ ಅಗ್ಗದ ದರದಲ್ಲಿ ಏರ್ಪೋರ್ಟ್ನಿಂದ ಬೆಂಗಳೂರು ತಲುಪಬಹುದು. ಏರ್‌ಪೋರ್ಟ್ ಸಂಚಾರಕ್ಕೆ ಪ್ರಯಾಣಿಕರು ಏರ್‌ಪೋರ್ಟ್ ಟ್ಯಾಕ್ಸಿ ಮತ್ತು ಬಿಎಂಟಿಸಿಯ ವಾಯುವಜ್ರ ಸೇವೆಯನ್ನು ಪಡೆಯುತ್ತಿದ್ದರು. ಇವುಗಳ ಪ್ರಯಾಣ ದರಕ್ಕೆ ಹೋಲಿಸಿದ್ರೆ ರೈಲು ಪ್ರಯಾಣಕ್ಕೆ ಕೇವಲ 15 ರೂಪಾಯಿ ಮಾತ್ರ ಇರಲಿದೆ.
ಜ.4ರಿಂದ ಏರ್‌ಪೋರ್ಟ್ ರೈಲು ನಿಲ್ದಾಣಕ್ಕೆ ರೈಲು ಸಂಚಾರ ಆರಂಭ :ಬೆಂಗಳೂರಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಾಲ್ಟ್ ಸ್ಟೇಷನ್ಗೆ ಹೊಸದಾಗಿ 3 ಡೆಮೋ ರೈಲುಗಳು ಜನವರಿ 4ರಿಂದ ಸಂಚಾರ ಆರಂಭಿಸಲಿವೆ. ಭಾನುವಾರ ಹೊರತುಪಡಿಸಿ ವಾರದಲ್ಲಿ 6 ದಿನ ಡೆಮೋ ರೈಲುಗಳು ಸಂಚರಿಸಲಿವೆ.
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ (KSR) ಹೊರಡುವ ಡೆಮೋ ರೈಲು, ಬೆಂಗಳೂರು ಕಂಟೋನ್ಮೆಟ್, ಬೆಂಗಳೂರು ಈಸ್ಟ್, ಬೈಯಪ್ಪನಹಳ್ಳಿ, ಚನ್ನಸಂದ್ರ, ಯಲಹಂಕ, ಬೆಟ್ಟಹಲಸೂರು, ದೊಡ್ಡಜಾಲ, ಕೆಐಎಎಲ್ ಹಾಲ್ಟ್ ಸ್ಟೇಷನ್, ದೇವನಹಳ್ಳಿ ಮೂಲಕ ಹಾದು ಹೋಗಲಿದೆ.
ಮತ್ತೊಂದು ಡೆಮೋ ರೈಲು ಯಲಹಂಕದಿಂದ ಕೆಐಎಎಲ್ ಹಾಲ್ಟ್ ಸ್ಟೇಷನ್ಗೆ ಬರಲಿದೆ. ಯಶವಂತಪುರದಿಂದ ಕೆಐಎಎಲ್ ಹಾಲ್ಟ್ ಸ್ಟೇಷನ್ಗೆ ಹೊರಡಲಿದೆ. ಇದರ ಜೊತೆಗೆ ಬೆಂಗಳೂರು ಕಂಟೋನ್ಮೆಂಟ್-ಯಲಹಂಕ-ಬಂಗಾರಪೇಟೆ, ಯಶವಂತಪುರ-ಯಲಹಂಕ-ಬಂಗಾರಪೇಟೆ ಡೆಮೋ ರೈಲು ಸಹ ಏರ್‌ಪೋರ್ಟ್ ಸ್ಟೇಷನ್ ಮೂಲಕ ಹಾದು ಹೋಗಲಿದೆ.
1. 06285 ಕೆಎಸ್ಆರ್ ನಿಲ್ದಾಣದಿಂದ ಬೆಳಗ್ಗೆ 4:45 ಕ್ಕೆ ಹೊರಟು ಬೆಳಗ್ಗೆ 5:50 ಕ್ಕೆ ಕೆಐಎಎಲ್ ಹಾಲ್ಟ್ ಸ್ಟೇಷನ್ಗೆ ತಲುಪಲಿದೆ.
2. 06283 ಕೆಎಸ್ಆರ್ ನಿಲ್ದಾಣದಿಂದ ರಾತ್ರಿ 9:00 ಕ್ಕೆ ಹೊರಟು ರಾತ್ರಿ 10:05 ಕ್ಕೆ ಕೆಐಎಎಲ್ ಹಾಲ್ಟ್ ಸ್ಟೇಷನ್ಗೆ ತಲುಪಲಿದೆ.
3. 06287 ಕೆಎಸ್ಆರ್ ನಿಲ್ದಾಣದಿಂದ ಬೆಳಗ್ಗೆ 7:00 ಕ್ಕೆ ಹೊರಟು ಬೆಳಗ್ಗೆ 7:20 ಕ್ಕೆ ಕೆಐಎಎಲ್ ಸ್ಟೇಷನ್ಗೆ ತಲುಪಲಿದೆ.
4. 062267 ಕೆಎಸ್ಆರ್ ನಿಲ್ದಾಣದಿಂದ ಸಂಜೆ 5:55 ಕ್ಕೆ ಹೊರಟು ಸಂಜೆ 6:50 ಕ್ಕೆ ಕೆಐಎಎಲ್ ಸ್ಟೇಷನ್ಗೆ ತಲುಪಲಿದೆ.
5. 062270 ಬಂಗಾರಪೇಟೆ ಯಿಂದ ಬೆಳಗ್ಗೆ 5:30 ಕ್ಕೆ ಹೊರಟು ಬೆಳಗ್ಗೆ 8:21 ಕ್ಕೆ ಕೆಐಎಎಲ್ ಹಾಲ್ಟ್ ಸ್ಟೇಷನ್ಗೆ ತಲುಪಲಿದೆ.