ಬೆಂಗಳೂರು: ಯುಗಾದಿ ಹಬ್ಬದ ಸಂಭ್ರಮದಲ್ಲಿ ಎಲ್ಲರೂ ಇದ್ದು, ಸಿಲಿಕಾನ್ ಸಿಟಿಯಿಂದ ತಮ್ಮ ಊರಿಗೆ ಹೋಗಲು ಎಲ್ಲಾ ತಯಾರಾಗಿದ್ದರು. ಆದರೆ, ಹಾಸನ-ಸೋಲ್ಲಾಪುರ ಎಕ್ಸ್‌ಪ್ರೆಸ್ ತಡವಾಗಿದ್ದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿ ಗಲಾಟೆ ನಡೆಸಿದ್ದಾರೆ.
ಹಬ್ಬಕ್ಕೆ ತೆರಳುತ್ತಿದ್ದ ಪ್ರಯಾಣಿಕರಿಗೆ ಶಾಕ್ ನೀಡಿದ ರೈಲು... ತಡವಾಗಿ ಬಂದಿದ್ದಕ್ಕೆ ಅಧಿಕಾರಿಗಳ ವಿರುದ್ಧ ಗಲಾಟೆ
ಬೆಳಗ್ಗೆ 7:45 ಕ್ಕೆ ಯಶವಂತಪುರ ರೈಲು ನಿಲ್ದಾಣಕ್ಕೆ ಬರಬೇಕಿದ್ದ ರೈಲು ಸರಿಯಾದ ಸಮಯಕ್ಕೆ ಆಗಮಿಸದೇ ಇರುವ ಕಾರಣಕ್ಕೆ ಹಬ್ಬಕ್ಕೆಂದು ತೆರಳುತ್ತಿದ್ದ ಪ್ರಯಾಣಿಕರು ರೈಲ್ವೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬೆಂಗಳೂರಿನಲ್ಲಿ ಬೆಳಗ್ಗೆ ನಡೆಯಿತು. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದರು.
ಅಧಿಕಾರಿಗಳ ವಿರುದ್ಧ ಗಲಾಟೆ
ಬೆಳಗ್ಗೆ 7:45 ಕ್ಕೆ ಯಶವಂತಪುರ ರೈಲು ನಿಲ್ದಾಣಕ್ಕೆ ಬರಬೇಕಿದ್ದ ರೈಲು ಎಷ್ಟೊತ್ತಾದರೂ ಬರಲೇ ಇಲ್ಲ. ಕಾದು ಕಾದು ಸುಸ್ತಾದ ಪ್ರಯಾಣಿಕರು ರೈಲ್ವೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದರು
ಹಳ್ಳಿ, ಪಟ್ಟಣಗಳಿಂದ ಬಂದು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದವರು, ಸಾರ್ವಜನಿಕರು ಹಬ್ಬಕ್ಕೆ ತಮ್ಮವರನ್ನು ನೋಡುವ ಹಂಬಲದಲ್ಲಿ ಇದ್ದರು. ಆದರೆ, ರೈಲು ತಡವಾಗಿ ಬಂದಿದ್ದಕ್ಕೆ ಎಲ್ಲರೂ ಆಕ್ರೋಶಗೊಂಡಿದ್ದು, ರೈಲು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.