ಕರ್ನಾಟಕ

karnataka

ETV Bharat / state

ಮಹಿಳಾ ಪೊಲೀಸರ ಸಂಚಾರ ನಿಯಮ ಉಲ್ಲಂಘನೆ: ವಿಡಿಯೋ ಮಾಡಿ ಛೀಮಾರಿ ಹಾಕಿದ ಟ್ರಾಫಿಕ್ ವಾರ್ಡನ್ ! - newly joined police constable

ಹೊಸದಾಗಿ ಸೇರ್ಪಡೆಯಾದ ಮಹಿಳಾ ಕಾನ್​ಸ್ಟೇಬಲ್​ಗಳಿಂದ ಸಂಚಾರ ನಿಯಮ ಉಲ್ಲಂಘನೆಯಾಗಿದ್ದು, ಹೆಲ್ಮೆಟ್ ಇಲ್ಲದೆ ಟ್ರಿಬಲ್ ರೈಡಿಂಗ್ ಮಾಡಿದ್ದಾರೆ.

ಮಹಿಳಾ ಪೊಲೀಸರ ಸಂಚಾರ ನಿಯಮ ಉಲ್ಲಂಘನೆ
ಮಹಿಳಾ ಪೊಲೀಸರ ಸಂಚಾರ ನಿಯಮ ಉಲ್ಲಂಘನೆ

By

Published : Nov 24, 2021, 5:44 AM IST

ಬೆಂಗಳೂರು: ಪೊಲೀಸರು ವಾಹನ ಸಂಚಾರವನ್ನು ನಿಯಂತ್ರಿಸಿ ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಕುವುದು ಸಾಮಾನ್ಯ. ಆದರೆ, ನಗರದ ಹೆಚ್.ಎಸ್. ಆರ್ ಠಾಣಾ ವ್ಯಾಪ್ತಿಯಲ್ಲಿ ಸಿವಿಲ್ ಪೊಲೀಸರಿಂದ ಸಂಚಾರ ನಿಯಮ ಉಲ್ಲಂಘನೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹಿಳಾ ಪೊಲೀಸರ ಸಂಚಾರ ನಿಯಮ ಉಲ್ಲಂಘನೆ

ಹೊಸದಾಗಿ ಇಲಾಖೆಗೆ ಸೇರ್ಪಡೆಯಾದ ಮಹಿಳಾ ಕಾನ್​ಸ್ಟೇಬಲ್​ಗಳಿಂದ ಸಂಚಾರ ನಿಯಮ ಉಲ್ಲಂಘನೆಯಾಗಿದ್ದು, ಹೆಲ್ಮೆಟ್ ಇಲ್ಲದೆ ಟ್ರಿಬಲ್ ರೈಡಿಂಗ್ ಮಾಡಿದ್ದಾರೆ. ಈ ಸಂಬಂಧ ಟ್ರಾಫಿಕ್ ವಾರ್ಡನ್ ಲತಾ ವೆಂಕಟೇಶ್ ಅವರು ಮೊಬೈಲ್​ನಲ್ಲಿ ವಿಡಿಯೋ ಮಾಡಿ ಪೊಲೀಸರಿಗೆ ಛೀಮಾರಿ ಹಾಕಿದ್ದಾರೆ.ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಜನರು ಸಾಕಷ್ಟು ಟೀಕೆ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಇಲಾಖೆ ನಿಯಮ ಉಲ್ಲಂಘನೆ ಮಾಡಿದ ಪೊಲೀಸರ ಬಳಿ ದಂಡ ಕಟ್ಟಿಸಿಕೊಂಡು ಮತ್ತೇ ಬೇಜವಬ್ದಾರಿ ವರ್ತನೆ ತೋರದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಹಿರಿಯ ಸಂಚಾರಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details