ಬೆಂಗಳೂರು: ಮೋಟಾರ್ ವಾಹನ ಕಾಯ್ದೆಯ ನಿಯಮದ ಪ್ರಕಾರ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಸಂಚಾರ ಪೊಲಿಸರು ಕಣ್ಗಾವಲು ಇಟ್ಟಿದ್ದಾರೆ. ಈ ಹಿನ್ನೆಲೆ ಯಾರು ಕಾಯ್ದೆಯ ವಿರುದ್ಧ ನಡೆದುಕೊಂಡಿದ್ದಾರೋ ಅವರಿಗೆ ಭಾರೀ ಮೊತ್ತದ ದಂಡ ವಿಧಿಸಿ ಸಂಚಾರ ನಿಯಮ ಪಾಲನೆ ಮಾಡುವಂತೆ ಎಚ್ಚರಿಕೆ ನೀಡುತ್ತಿದ್ದಾರೆ.
ಈ ಹಿನ್ನೆಲೆ ಕಳೆದ 5 ದಿನದಲ್ಲಿ 72.5 ಲಕ್ಷ ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಸಂಚಾರ ಪೊಲೀಸರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ವಿಧಿಸಲಾದ ದಂಡದ ಮೊತ್ತದ ವಿವರ ಯಾವೆಲ್ಲಾ ಪ್ರಕರಣ...
- ಒನ್ ವೇ ನಲ್ಲಿ ಬಂದ ಪ್ರಕರಣಗಳು - 425, ದಂಡದ ಮೊತ್ತ - 2,12,500
- ಬಾಲ್ ಟಯರ್ಸ್ ಬಳಕೆ ಪ್ರಕರಣ - 1, ದಂಡದ ಮೊತ್ತ - 500
- ವಾಹನದ ಅಳತೆಗಿಂತ ದೊಡ್ಡ ಗಾತ್ರದ ವಸ್ತುಗಳ ಸಾಗಾಣಿಕೆ ಪ್ರಕರಣ - 18, ದಂಡದ ಮೊತ್ತ - 18000
- ಪೊಲೀಸರು ಚೇಸ್ ಮಾಡಿ ಹಿಡಿದ ಪ್ರಕರಣ - 1, ದಂಡದ ಮೊತ್ತ - 500
- ನಂಬರ್ ಪ್ಲೇಟ್ ಪ್ರಕರಣ - 11,ದಂಡದ ಮೊತ್ತ - 5500
- ಡಬಲ್ ಪಾರ್ಕಿಂಗ್ ಪ್ರಕರಣ - 1,ದಂಡದ ಮೊತ್ತ - 1000
- ಟ್ರಾಫಿಕ್ ಸಿಗ್ನಲ್ ಜಂಪಿಂಗ್ ಪ್ರಕರಣ - 10, ದಂಡದ ಮೊತ್ತ - 5000
- ಲೈನ್ ಡಿಸಿಪ್ಲಿನ್ ಪ್ರಕರಣ - 11, ದಂಡದ ಮೊತ್ತ - 5500
- ನೋ ಎಂಟ್ರಿ ಪ್ರಕರಣ - 25, ದಂಡದ ಮೊತ್ತ - 12,500
- ನೋ ಪಾರ್ಕಿಂಗ್ ಕೇಸ್ - 2, ದಂಡದ ಮೊತ್ತ - 2000
- ನೋ ರೆಕಾರ್ಡ್ಸ್ ಕೇಸ್ - 66,ದಂಡದ ಮೊತ್ತ - 64000
- ಹಿಂಬದಿಯ ಸವಾರನ ಹೆಲ್ಮೆಟ್ ಇಲ್ಲದಿರುವ ಪ್ರಕರಣ - 2645. ದಂಡದ ಮೊತ್ತ - 26,45,000
- ಸೀಟ್ ಬೆಲ್ಟ್ ಧರಿಸಧಿರುವ ಕೇಸ್ - 708, ದಂಡದ ಮೊತ್ತ - 7.08,000
- ಟ್ರಾಫಿಕ್ ಕಿರಿಕಿರಿ ಉಂಟುಮಾಡಿದ ಕೇಸ್ - 14, ದಂಡದ ಮೊತ್ತ - 6500
- ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ - 1968, ದಂಡದ ಮೊತ್ತ - 19,68,000
- ಕರ್ಕಶ ಹಾರ್ನ್ ಕೇಸ್ - 4, ದಂಡದ ಮೊತ್ತ - 2000
- ಬಿಳಿ ಪಟ್ಟಿ ಮೇಲೆ ಗಾಡಿ ನಿಲ್ಲಿಸಿದ ಕೇಸ್ -1, ದಂಡದ ಮೊತ್ತ - 500
- ತ್ರಿಬಲ್ ರೈಡಿಂಗ್ ಕೇಸ್ - 7,ದಂಡದ ಮೊತ್ತ - 3500
- ಅನಧಿಕೃತ ಯು ಟರ್ನ್ ಕೇಸ್ - 8 , ದಂಡದ ಮೊತ್ತ - 4400
- ಟಿಂಟೆಡ್ ಗ್ಲಾಸ್ ಕೇಸ್ - 1, ದಂಡದ ಮೊತ್ತ - 500
- ಮೊಬೈಲ್ ಬಳಕೆ ಕೇಸ್ - 695 , ದಂಡದ ಮೊತ್ತ - 13,90,000-
- ಇನ್ಸೂರೆನ್ಸ್ ರಹಿತ ಚಾಲನೆ- 109 , ದಂಡದ ಮೊತ್ತ - 1,44,800
- ಡಿಎಲ್ ಇಲ್ಲದ ಕೇಸ್ -10 . ದಂಡದ ಮೊತ್ತ - 50000
- ಡ್ರಿಂಕ್ ಅಂಡ್ ಡ್ರೈವ್ ಕೇಸ್ - 72, ದಂಡದ ಮೊತ್ತ 6813
ಇಷ್ಟು ಪ್ರಕರಣವನ್ನ ದಾಖಲಿಸಿದ ಪೊಲೀಸರು ಒಟ್ಟು 72,49,900 ದಂಡ ವಸೂಲಿ ಮಾಡಿದ್ದಾರೆ.