ಬೆಂಗಳೂರು:ಲಾಕ್ಡೌನ್ ರಿಲೀಫ್ ಆದ ಬಳಿಕ ನಗರದಲ್ಲಿ ಎಂದಿನಂತೆ ವಾಹನಗಳ ದಟ್ಟಣೆ ಶುರುವಾಗಿದೆ. ಸದ್ಯ ಜನರು ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿದ್ದಾರೆ. ಆದರೆ, ಕೊರೊನಾ ಭಯಕ್ಕೆ ಮಾಸ್ಕ್ ಹಾಕೋರು, ಸಂಚಾರದ ನಿಯಮಗಳನ್ನ ಮಾತ್ರ ಮರೆತಿದ್ದಾರೆ.
ಕೆಲವರು ಹೆಲ್ಮೆಟ್ ಧರಿಸದೇ ಫೇಸ್ಶೀಲ್ಡ್ ಹಾಕೋದು ಅಥವಾ ಸಿಗ್ನಲ್ ಜಂಪ್ ಮಾಡೋದು ಹೀಗೆ ಬೇರೆ ನಿಯಮ ಉಲ್ಲಂಘನೆ ಮಾಡ್ತಿರುವ ವಿಚಾರ ಪ್ರತಿ ದಿನ ಬೆಳಕಿಗೆ ಬರ್ತಿದೆ. ಇತ್ತಕಡೆ ಕೊರೊನಾ ಸೋಂಕಿನಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಬಹಳ ನಷ್ಟ ಉಂಟಾಗಿದೆ. ಹಾಗಾಗಿ ಸದ್ಯ ಟ್ರಾಫಿಕ್ ಇಲಾಖೆ ತನ್ನ ಸಿಬ್ಬಂದಿಗೆ ಬಹಳ ಜವಾಬ್ದಾರಿಯನ್ನ ನೀಡಿದೆ. ಇಷ್ಟು ದಿವಸ ಇಲ್ಲದ ಟ್ರಾಫಿಕ್ ಪೊಲೀಸರು ಪ್ರತಿ ಸಿಗ್ನಲ್ ಬಳಿ, ರಸ್ತೆಗಳ ಬದಿ, ಜೀಬ್ರಾ ಕ್ರಾಸ್ಗಳಲ್ಲಿ, ರಸ್ತೆಯ ತುದಿಯಲ್ಲಿ, ಫುಟ್ಪಾತಲ್ಲಿ ಹಾಗೆ ಸಂಚಾರಿ ಸಿಸಿಟಿವಿ ಮಾನಿಟರಿಂಗ್ ಮಾಡುವುದರಲ್ಲಿ ನಿರತರಾಗಿದ್ದಾರೆ.
ಹಿರಿಯಾಧಿಕಾರಿಗಳ ಸೂಚನೆಯಂತೆ ಪ್ರತಿ ಸಿಬ್ಬಂದಿ ಇಷ್ಟು ಅಂತ ವಾಹನ ಸವಾರರ ಮೇಲೆ ದಂಡ ವಿಧಿಸಬೇಕೆಂಬ ನಿಯಮ ಕೂಡ ಜಾರಿ ಮಾಡಿದ್ದರಂತೆ. ಹೀಗಾಗಿ ಪ್ರತಿ ಸಿಬ್ಬಂದಿ ರಸ್ತೆ ಬದಿಯಲ್ಲಿ ಕೊರೊನಾ ಮುಂಜಾಗ್ರತಾ ಕ್ರಮ ವಹಿಸಿಕೊಂಡು ಸಂಚಾರ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸುತ್ತಿದ್ದಾರೆ.