ಬೆಂಗಳೂರು: ದೇಶದ ಬಹುತೇಕ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕಿಚ್ಚು ಹೊತ್ತಿಕೊಂಡಿದೆ. ಈ ಹಿನ್ನೆಲೆ ಇಂದು ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಅಲ್ಪಸಂಖ್ಯಾತರು ಶಾಂತಿ ಸಭೆ ನಡೆಸಿದರು.
ಸಿಲಿಕಾನ್ ಸಿಟಿಯಲ್ಲಿ ಪೌರತ್ವ ಕಿಚ್ಚು... ಟ್ರಾಫಿಕ್ ನಿಯಮ ಉಲ್ಲಂಘಿಸಿದ ಸವಾರರು - traffic rules break down in bengaluru by byke riders
ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ಬೈಕ್ ರ್ಯಾಲಿ ನಡೆಸುವ ವೇಳೆ ಸವಾರರು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶಾಂತಿ ಸಭೆಗೆ ಸಿಲಿಕಾನ್ ಸಿಟಿಯ ಶಿವಾಜಿನಗರ, ಪುಲಕೇಶಿನಗರ, ಮಾರ್ಕೆಟ್ ಪ್ರದೇಶ ಹೀಗೆ ನಾನಾ ಕಡೆಗಳಿಂದ ಅಲ್ಪಸಂಖ್ಯಾತರು ಬೈಕ್ ರ್ಯಾಲಿ ಮೂಲಕ ಆಗಮಿಸಿದರು. ಈ ವೇಳೆ ಕೊಂಚ ಮಟ್ಟಿಗೆ ಟ್ರಾಫಿಕ್ ಜಾಮ್ ಉಂಟಾದ್ರೆ, ಮತ್ತೊಂದೆಡೆ ಟ್ರಾಫಿಕ್ ನಿಯಮಗಳನ್ನ ಉಲ್ಲಂಘಿಸಿ ಬೈಕ್ ರ್ಯಾಲಿ ನಡೆಸಿದ್ದು ಕಂಡು ಬಂತು.
ಟ್ರಾಫಿಕ್ ಪೊಲೀಸರು ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್ ಕಡ್ಡಾಯ ಅನ್ನೋ ನಿಯಮ ಜಾರಿ ತಂದಿದ್ರು. ಆದ್ರೆ ರ್ಯಾಲಿಯಲ್ಲಿ ಭಾಗವಹಿಸಿದ್ದ ಬಹುತೇಕರು ಹೆಲ್ಮೆಟ್ ಹಾಕದೆ ತ್ರಿಪಲ್ ರೈಡ್ ಮಾಡುವ ಮೂಲಕ ಟ್ರಾಫಿಕ್ ನಿಯಮಗಳನ್ನ ಉಲ್ಲಂಘಿಸಿದ್ದು ಕಂಡು ಬಂತು.