ಬೆಂಗಳೂರು :ರಾಜ್ಯ ಸರಕಾರ ಮೋಟಾರ್ ವಾಹನ ಕಾಯ್ದೆಯ ದಂಡವನ್ನ ಕಡಿಮೆ ಮಾಡುವುದಾಗಿ ಭರವಸೆ ನೀಡಿದ್ರೂ ಕೂಡ ಅದು ಅಧಿಕೃತವಾಗಿ ಚಾಲನೆ ಬಂದಿಲ್ಲ. ರೂಲ್ಸ್ ಬ್ರೇಕ್ ಮಾಡುವವರು ಮಾತ್ರ ದಿನೇ ದಿನೇ ನಿಯಮ ಉಲ್ಲಂಘನೆ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬೀಳ್ತಾನೆ ಇದ್ದಾರೆ. ಹೀಗಾಗಿ ದಿನದಿಂದ ದಿನಕ್ಕೆ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ.
ಟ್ರಾಫಿಕ್ ನಿಯಮ ಕಠಿಣವಾದರೂ ನಿಂತಿಲ್ಲ ಸವಾರರ ರೂಲ್ಸ್ ಬ್ರೇಕ್...! - ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು
ರಾಜ್ಯ ಸರಕಾರ ಮೋಟಾರ್ ವಾಹನ ಕಾಯ್ದೆಯ ದಂಡವನ್ನ ಕಡಿಮೆ ಮಾಡುವುದಾಗಿ ಭರವಸೆ ನೀಡಿದ್ರು ಕೂಡ ಅದು ಅಧಿಕೃತವಾಗಿ ಚಾಲನೆಗೆ ಬಂದಿಲ್ಲ. ರೂಲ್ಸ್ ಬ್ರೇಕ್ ಮಾಡುವವರು ಮಾತ್ರ ದಿನೇ ದಿನೆ ನಿಯಮ ಉಲ್ಲಂಘನೆ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬೀಳ್ತಾನೆ ಇದ್ದಾರೆ. ಹೀಗಾಗಿ ದಿನದಿಂದ ದಿನಕ್ಕೆ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ.
ಸಿಗ್ನಲ್ ಜಂಪಿಂಗ್ 1,639 ಪ್ರಕರಣ, ಹೆಲ್ಮೆಟ್ ಧರಿಸದೆ ಬೈಕ್ ಚಾಲನೆಗೆ 2,286 ಪ್ರಕರಣ ದಾಖಲಾಗಿವೆ. ಇನ್ನು ಡ್ರಂಕ್ ಅಂಡ್ ಡ್ರೈವ್ ಸಂಬಂಧ 21 ಪ್ರಕರಣಗಳು ರಜಿಸ್ಟರ್ ಆಗಿವೆ. ಚಾಲನೆ ವೇಳೆ ಮೊಬೈಲ್ ಬಳಸಿದ ಪರಿಣಾಮ 413 ಪ್ರಕರಣ, ನೋ ಪಾರ್ಕಿಂಗ್ ಸಂಬಂಧ 51 ಕೇಸ್ ಹಾಗೂ ಟ್ರಿಪಲ್ ರೈಡಿಂಗ್ 68 ಪ್ರಕರಣ, ಹೆಲ್ಮೆಟ್ ಇಲ್ಲದೆ ಚಾಲನೆ, ಕುಡಿದು ವಾಹನ ರೈಡಿಂಗ್ ಹೀಗೆ ನಾನ ಪ್ರಕರಣದಡಿ ಟ್ರಾಫಿಕ್ ಪೊಲೀಸರ ಕೈಗೆ ಸವಾರರು ಸಿಕ್ಕಿ ಬಿದ್ದಿದ್ದಾರೆ.
ಸದ್ಯ ಟ್ರಾಫಿಕ್ ಇಲಾಖೆಯ ಆಯುಕ್ತ ರವಿಕಾಂತೇಗೌಡ ನಿತ್ಯ ಟ್ರಾಫಿಕ್ ಬಗ್ಗೆ ಜಾಗೃತಿ ಹಾಗೆ ಪ್ರತಿದಿನದ ದಂಡ ಹಾಗೂ ಪ್ರಕರಣದ ಕುರಿತು ಜಾಗೃತಿ ಮೂಡಿಸಿದ್ರು ಕೂಡ ವಾಹನ ಸವಾರರು ಮಾತ್ರ ಎಚ್ಚೆತ್ತ ಹಾಗೆ ಕಾಣ್ತಿಲ್ಲ.